Advertisement

ಸಂಪೂರ್ಣ ಹದಗೆಟ್ಟ ರಸ್ತೆ: ಹಟ್ಟಿಯಂಗಡಿ- ಕೊಲ್ಲೂರು ಸಂಚಾರ ದುಸ್ತರ

11:09 PM Apr 16, 2019 | Team Udayavani |

ಕೊಲ್ಲೂರು: ಹಟ್ಟಿಯಂಗಡಿಯಿಂದ ಕೊಲ್ಲೂರು ಕ್ಷೇತ್ರಕ್ಕೆ ನೇರ ಸಂಪರ್ಕದ ಸನಿಹದ ಜಾಡಿ ಮಾರ್ಗವು ಸಂಪೂರ್ಣ ಹಾಳಾಗಿದ್ದು ಪಾದಚಾರಿಗಳ ಸಂಚಾರಕ್ಕೂ ಅಯೋಗ್ಯವಾಗಿದೆ.

Advertisement

ಹಟ್ಟಿಯಂಗಡಿ ಕ್ರಾಸ್‌ನಿಂದ ಸಾಗುವ ಈ ಮಾರ್ಗವು ಕೊಲ್ಲೂರಿಗೆ ತೆರಳಲು ಸುಮಾರು 5 ಕಿ.ಮೀ. ಹತ್ತಿರದ ಮಾರ್ಗವಾಗಿದ್ದು, ವಾಹನ ದಟ್ಟಣೆ ಕಡಿಮೆ ಇರುವ ಮಾರ್ಗವೂ ಹೌದು.

ಈ ರಸ್ತೆಗೆ ಹಾಕಲಾದ ಡಾಮರು ಸಂಪೂರ್ಣ ಎದ್ದು ಹೋಗಿದ್ದು ರಸ್ತೆಯುದ್ದಕ್ಕೂ ಹೊಂಡ-ಗುಂಡಿಗಳು ನಿರ್ಮಣವಾಗಿವೆ. ಹಟ್ಟಿಯಂಗಡಿ ಹಾಗೂ ಕಟ್‌ಬೇಲೂ¤ರು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಈ ರಸ್ತೆಯ ದುರಸ್ತಿ ಬಗ್ಗೆ ಗ್ರಾ.ಪಂ. ಹಾಗೂ ತಾ.ಪಂ. ಸಭೆಗಳಲ್ಲಿ ಬಹಳಷ್ಟು ಚರ್ಚೆ ನಡೆದಿದ್ದರೂ ಅಭಿವೃದ್ಧಿ ಕಾರ್ಯ ಮಾತ್ರ ಹಲವು ವರ್ಷಗಳಿಂದಲೂ ಗಗನ ಕುಸುಮವಾಗಿಯೇ ಉಳಿದಿದೆ.

ಅಪಘಾತ ಆಹ್ವಾನಿಸುವ ಕಿರು ಸೇತುವೆ
ಜಾಡಿಯ ಮುಖ್ಯ ರಸ್ತೆಗೆ ಅಡ್ಡದಾಗಿ ಹರಿವ ಹೊಳೆಗೆ ನಿರ್ಮಿಸಲಾದ ಕಿರುಸೇತುವೆಯು ಅವೈಜ್ಞಾನಿಕ ಮಾದರಿ ಯಲ್ಲಿದ್ದು ಹೊಸದಾಗಿ ಈ ಮಾರ್ಗದಲ್ಲಿ ಚಲಾಯಿಸುವ ವಾಹನ ಸವಾರರಿಗೆ ರಸ್ತೆ ಅಪಘಾತ ಇಲ್ಲಿ ಕಟ್ಟಿಟ್ಟ ಬುತ್ತಿ. ಹಲವಾರು ಅಪಘಾತಗಳು ನಡೆದಿದ್ದರೂ ಈ ಬಗ್ಗೆ ಯಾರೂ ಗಮನಹರಿಸಿಲ್ಲ.

ವಿಸ್ತರಣೆ ಅಗತ್ಯ
ಅಗಲ ಕಿರಿದಾದ ಜಾಡಿ ರಸ್ತೆಯ ವಿಸ್ತರಣೆಯೊಡನೆ ಸಂಪೂರ್ಣ ಡಾಮರೀಕರಣ ಅಗತ್ಯವಾಗಿದೆ. ರಸ್ತೆಯ ದುರಾವಸ್ತೆಯ ಕಾರಣ ದ್ವಿಚಕ್ರ ವಾಹನ ಸಹಿತ ಲಘು ವಾಹನದಲ್ಲಿ ಸಾಗುವವರಿಗೆ ಈ ಮಾರ್ಗವು ಸದಾ ಕಿರಿಕಿರಿ ಉಂಟುಮಾಡುತ್ತಿದೆ. ರಾತ್ರಿ ಹೊತ್ತಿನಲ್ಲಿ ಪಾದಚಾರಿಗಳೂ ಸಾಗದಷ್ಟು ಹದಗೆಟ್ಟಿರುವ ಇಲ್ಲಿನ ಮುಖ್ಯರಸ್ತೆಯ ಅಭಿವೃದ್ಧಿ ಕನಸು ನನಸಾಗದಿದ್ದಲ್ಲಿ ಮುಂಬರುವ ಮಳೆಗಾಲದಲ್ಲಿ ಸಂಚಾರ ವ್ಯವಸ್ಥೆ ಭಯಾನಕವಾಗಲಿದೆ ಎನ್ನುತ್ತಾರೆ ಸ್ಥಳೀಯರು.

Advertisement

ಜಿ.ಪಂ. ವ್ಯಾಪ್ತಿಗೆ ಸೇರಿದ ಈ ರಸ್ತೆಯ ಡಾಮರೀಕರಣಕ್ಕೆ ಭಾರಿ ಮೊತ್ತದ ಹಣದ ಅಗತ್ಯವಿರುವುದರಿಂದ ವಿಶೇಷ ಅನುದಾನದ ಮೂಲಕ ರಸ್ತೆ ದುರಸ್ತಿ ಮಾಡಬೇಕು ಅಥವಾ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅನುದಾನ ಒದಗಿಸಬೇಕು ಎಂಬ ಒಕ್ಕೊರಲ ಅಭಿಪ್ರಾಯವೂ ಕೇಳಿಬಂದಿದೆ.

ಪ್ರಸ್ತಾವನೆ ಸಲ್ಲಿಸಲಾಗಿದೆ
ಲೋಕೋಪಯೋಗಿ ಇಲಾಖೆಯ ವತಿಯಿಂದ ಹಟ್ಟಿಯಂಗಡಿಯಿಂದ ಜಾಡಿಯ ಕೊಲ್ಲೂರು ತಿರುವಿನ ವರೆಗಿನ 5ಕಿ.ಮೀ. ದೂರದ ವರೆಗೆ ರಸ್ತೆಯ ಸಂಪೂರ್ಣ ಡಾಮರೀಕರಣದೊಡನೆ ಕಿರು ಸೇತುವೆಯ ಪುನರ್‌ ನಿರ್ಮಾಣದ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೂ. 8 ಕೋಟಿ ವೆಚ್ಚದ ಪ್ರಸ್ತಾವನೆಯ ಮಂಜೂರಾತಿಯ ನಿರೀಕ್ಷೆಯಲ್ಲಿದ್ದರೂ ತಾಂತ್ರಿಕ ಕಾರಣಗಳಿಂದ ಅದನ್ನು ತಡೆಹಿಡಿಯಲಾಗಿದೆ.ಪ್ರಯತ್ನ ಮುಂದುವರಿಯುತ್ತಿದೆ.
-ಚಂದ್ರಶೇಖರ್‌,
ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ, ಉಡುಪಿ

ಮುತುವರ್ಜಿ ವಹಿಸಿ
ಇಷ್ಟೊಂದು ದುಸ್ಥಿತಿಯಲ್ಲಿರುವ ಹಟ್ಟಿಯಂಗಡಿ-ಜಾಡಿ ರಸ್ತೆಯ ಡಾಮರೀಕರಣಕ್ಕೆ ಇಲಾಖೆ ಮುತುವರ್ಜಿ ವಹಿಸಿ, ನಿತ್ಯ ಪ್ರಯಾಣಿಕರ ಸಂಕಷ್ಟವನ್ನು ದೂರಮಾಡಬೇಕು.
-ಪ್ರಭಾಕರ್‌, ಸ್ಥಳೀಯರು

  • ಡಾ| ಸುಧಾಕರ ನಂಬಿಯಾರ್‌
Advertisement

Udayavani is now on Telegram. Click here to join our channel and stay updated with the latest news.

Next