Advertisement

ಹಟ್ಟಿಯಂಗಡಿ: ‘ನಮ್ಮ ಭೂಮಿ’ಯಲ್ಲಿ ಜಲ ಸ್ವಾವಲಂಬನೆ

12:13 AM Jul 11, 2019 | sudhir |

ಕುಂದಾಪುರ: ಈ ಬಾರಿಯ ಬೇಸಗೆಯಲ್ಲಿ ಉತ್ತಮ ಮಳೆ ಬೀಳುವ ಕುಂದಾಪುರ ಸಹಿತ ಉಡುಪಿ, ಮಂಗಳೂರು ಭಾಗಗಳಲ್ಲಿಯೂ ‘ಜೀವ ಜಲ’ಕ್ಕೆ ಬರ ಬಂದಿತ್ತು. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಮಳೆ ನೀರಿನ ಸದ್ಭಳಕೆ ಮಾಡಿಕೊಳ್ಳದಿರುವುದು. ಆದರೆ ಹಟ್ಟಿಯಂಗಡಿಯಲ್ಲಿರುವ ನಮ್ಮ ಭೂಮಿ ಸ್ವಯಂ ಸೇವಾ ಸಂಸ್ಥೆಯು ಸುಮಾರು 6 ಎಕರೆ ಪ್ರದೇಶದಲ್ಲಿ ಮಳೆ ನೀರು ಕೊಯ್ಲು ಮಾಡುವ ಮೂಲಕ ಜಲಸ್ವಾವಲಂಬನೆಯಲ್ಲಿ ಯಶ ಕಂಡುಕೊಂಡಿದೆ.

Advertisement

ಹಟ್ಟಿಯಂಗಡಿಯಲ್ಲಿರುವ ನಮ್ಮ ಭೂಮಿ ಸ್ವಯಂ ಸೇವಾ ಸಂಸ್ಥೆಯು ‘ದಿ ಕನ್ಸರ್ನ್ಡ್ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌’ ಸಂಸ್ಥೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರವಾಗಿದೆ. ಈ ಸಂಸ್ಥೆಯು ಸುಮಾರು 6.25 ಎಕರೆ ಪ್ರದೇಶದಲ್ಲಿದೆ. ಇಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಪ್ಲಂಬಿಂಗ್‌, ಹೈನುಗಾರಿಕೆ, ಕೃಷಿ ಇನ್ನಿತರ ವಿಷಯಗಳ ಕುರಿತು ತರಬೇತಿ ಕೊಡಲಾಗುತ್ತಿದೆ.

ನೀರಿನ ಸಮಸ್ಯೆಗೆ ಪರಿಹಾರ

ಈ ಸಂಸ್ಥೆಯಿರುವ ಪ್ರದೇಶ ಎತ್ತರದ ಸ್ಥಳದಲ್ಲಿದ್ದುದರಿಂದ ಆರಂಭದಲ್ಲಿ ಇಲ್ಲಿ ನೀರಿಗೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಸುಮಾರು 150 ಮಕ್ಕಳ ದೈನಂದಿನ ಕಾರ್ಯಗಳಿಗೆ, ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಪ್ರತಿನಿತ್ಯ ಅಂದಾಜು 25,000 ಲೀಟರ್‌ ನೀರಿನ ಅಗತ್ಯವಿದೆ. ಒಂದು ತೆರೆದ ಬಾವಿಯಿದ್ದರೂ, ಮೇ ತಿಂಗಳವರೆಗೆ ಮಾತ್ರ ನೀರು ಸಿಗುತ್ತಿತ್ತು. ತೀವ್ರ ನೀರಿನ ಅಭಾವ ಇದ್ದರಿಂದ ಪಾಠ ಕಲಿತು, ಮಳೆ ನೀರು ಇಂಗಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಯಿತು.

50 ಕ್ಕೂ ಹೆಚ್ಚು ಇಂಗು ಗುಂಡಿ

Advertisement

6.25 ಎಕರೆ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ಮಾಡಲಾಗಿದೆ. ಆ ಮೂಲಕ ಆವರಣದಲ್ಲಿ ಬಿದ್ದ ನೀರನ್ನು ಹರಿದು ಹೋಗಲು ಬಿಡದೆ, ಅಲ್ಲೇ ಇಂಗಿಸುವ ಕಾರ್ಯವನ್ನು ನಿರಂತರ ಮಾಡಲಾಗುತ್ತಿದೆ. ಇದರಿಂದ ಮಣ್ಣಿನ ಸವಕಳಿಯೂ ಕಡಿಮೆಯಾಗಿದೆ. ಅಂತರ್ಜಲದ ಮರು ಪೂರಣ ಸಾಧ್ಯವಾಗಿದ್ದು ನೀರಿನ ಸಮಸ್ಯೆಗೆ ಪರಿಹಾರದೊಂದಿಗೆ ಕಾಡು ಬೆಳೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಸಂಸ್ಥೆಯ ಪ್ರಾಜೆಕ್ಟ್ ಅಧಿಕಾರಿ ಸುರೇಶ್‌ ಗೌಡ.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next