Advertisement

ನರೇಗಾದಡಿ ಕೆಲಸ ನೀಡಲು ಆಗ್ರಹಿಸಿ ಪ್ರತಿಭಟನೆ

05:06 PM Jul 05, 2020 | Naveen |

ಹಟ್ಟಿ ಚಿನ್ನದ ಗಣಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಆಗ್ರಹಿಸಿ ವಿವಿಧ ಗ್ರಾಮಗಳ ಕೂಲಿಕಾರ್ಮಿಕರು ಗೆಜ್ಜಲಗಟ್ಟಾ ಗ್ರಾಪಂ ಎದುರು ಧರಣಿ ನಡೆಸಿದರು.

Advertisement

ಕೋವಿಡ್ ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದಾರೆ. ಬಡವರು ಮತ್ತು ಕೂಲಿಕಾರ್ಮಿಕರು ಊರಲ್ಲಿ ಕೆಲಸವೂ ಇಲ್ಲದೇ, ಕೈಯಲ್ಲಿ ಕಾಸೂ ಇಲ್ಲದೇ ಜೀವನ ನಿರ್ವಹಣೆಗೆ ತೊಂದರೆ ಆಗಿದೆ. ನರೇಗಾದಡಿ ಕೆಲಸ ನೀಡಲು ಅರ್ಜಿ ಸಲ್ಲಿಸಿದ್ದು, 15 ದಿನದಲ್ಲಿ ಕೆಲಸ ನೀಡಬೇಕಿತ್ತು. ಆದರೆ ಪಿಡಿಒ ಉದ್ಯೋಗ ನೀಡದೇ ನಿರ್ಲಕ್ಷಿಸಿದ್ದಾರೆ. ಉದ್ಯೋಗ ನೀಡಲಾಗದಿದ್ದರೆ ನಿರುದ್ಯೋಗ ಭತ್ಯೆಯನ್ನಾದರೂ ನೀಡಬೇಕೆಂದು ಆಗ್ರಹಿಸಿದರು.

ಪಂಚಾಯಿತಿ ಪಿಡಿಒ ನಜೀರ್‌ಸಾಬ್‌ ಹಾಗೂ ಕಾರ್ಯದರ್ಶಿ ಗುಂಡುರಾವ್‌ ಕೂಲಿಕಾರರನ್ನು ಸಮಾಧಾನ ಪಡಿಸಲು ಮುಂದಾದರೂ ಒಪ್ಪದ ಜನತೆ ತಾಪಂ ಇಒ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು. ಗೆಜ್ಜಲಗಟ್ಟಾ, ನಿಲೋಗಲ್‌, ಚಿಕ್ಕನಗನೂರು ಸೇರಿದಂತೆ ಇತರ ಗ್ರಾಮಗಳ ಕೂಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next