ಹೊಸಪೇಟೆ: `ವೇದ’ ಚಿತ್ರದ ಪ್ರಮೋಷನ್‌ಗಾಗಿ ಬುಧವಾರ ನಗರದ ಲಕ್ಷ್ಮಿ ಚಿತ್ರಮಂದಿರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಬುಧವಾರ ಭೇಟಿ ನೀಡಿದರು.
ಅಭಿಮಾನಿಗಳನ್ನುದ್ದುಶಿಸಿ ಮಾತನಾಡಿದ ಅವರು, ಹೆಚ್ಚು ಅಪ್ಪು ಅಭಿಮಾನಿಗಳು ಹೊಂದಿರುವ ಹೊಸಪೇಟೆಗೆ ಪದೇ, ಪದೇ, ಬರುತೇನೆ. ಎಲ್ಲರೂ ಚಿತ್ರಮಂದಿರದಲ್ಲಿ ಚಿತ್ರವನ್ನು ವೀಕ್ಷಣೆ ಮಾಡುವ ಮೂಲಕ ವೇದ ಚಿತ್ರವನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ನಟ ಶಿವರಾಜ್ ಕುಮಾರ್ ಸೇರಿದಂತೆ ಚಿತ್ರತಂಡ ಅನಿರೀಕ್ಷಿತವಾಗಿ ಚಿತ್ರಮಂದಿರಕ್ಕೆ ಪ್ರವೇಶಿಸುತ್ತಿದ್ದಂತೆ ಥಿಯೇಟರ್‌ನಲ್ಲಿದ್ದ ಪ್ರೇಕ್ಷಕರು, ಅಭಿಮಾನಿಗಳಿಂದ ಹರ್ಷೊದ್ಧಾರ ಮೊಳಗಿತು. ಇದೇ ವೇಳೆ ತುಂಬಿ ತುಳುಕುತ್ತಿದ್ದ ಚಿತ್ರಮಂದಿರವನ್ನು ಕಂಡು ನಟ ಶಿವರಾಜ್‌ಕುಮಾರ್, ಪತ್ನಿ ಗೀತಾ ಸೇರಿದಂತೆ ಚಿತ್ರ ತಂಡ ಖುಷಿಯಿಂದ ಹೊರ ನಡೆಯಿತು.
ಈ ವೇಳೆ ಅಭಿಮಾನಿಗಳ ಒತ್ತಾಯದ ಮೇರೆಗೆ ನಟ ಶಿವರಾಜ್ ಕುಮಾರ್ ಸಖತ್ ಸ್ಟೆಪ್ ಹಾಕಿ ರಂಜಿಸಿದರು. ಅಲ್ಲದೇ, ಚಿತ್ರದ ಬಗ್ಗೆ ಅಭಿಪ್ರಾಯ ಕೇಳಿ, ಸಂತಸಪಟ್ಟರು. ಈ ವೇಳೆ ನೆಚ್ಚಿನ ನಟನನ್ನು ಕಾಣಲು ಅಭಿಮಾನಿಗಳು ನೂಕು ನುಗ್ಗಲು ನಡೆಸಿದರು.
ಇದನ್ನೂ ಓದಿ: ಚಾಮರಾಜನಗರ: ಕೆ.ಗುಡಿ ಸಫಾರಿಯಲ್ಲಿ ಹುಲಿ ದರ್ಶನ… ಗಾಯಗೊಂಡಿರುವ ಶಂಕೆ