Advertisement

ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಸವಿದ ಶಿವಣ್ಣ : 5 ವರ್ಷದ ಕನಸು –ನನಸು

08:59 PM Jul 05, 2022 | Team Udayavani |

ಚಾಮರಾಜನಗರ : ಕಳೆದ ಐದು ವರ್ಷದಿಂದ ಅಭಿಮಾನಿಯೊಬ್ಬ ತಾನು ಮಾಡುವ ಟೀ ರುಚಿಯನ್ನು ನೆಚ್ಚಿನ ನಟನಿಗೆ ತೋರಿಸಬೇಕು ಎಂಬ ಆಸೆಯೊಂದು ಕೊನೆಗೂ ಈಡೇರಿದೆ.

Advertisement

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅವರ ಅಪ್ಪಟ್ಟ ಅಭಿಮಾನಿಯಾದ ಮಂಜು ಅವರ ಟೀ ಅಂಗಡಿಗೆ ಮಂಗಳವಾರ ಭೇಟಿ ನೀಡಿ ಚಹಾದ ರುಚಿಯನ್ನು ಸವಿದರು.

ಮಂಜು ಕಳೆದ ಒಂದೂವರೆ ದಶಕದಿಂದ ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದಾರೆ. 2016 ರಿಂದಲೂ ತಮ್ಮ ಟೀ ಅಂಗಡಿಗೆ ಶಿವಣ್ಣನನ್ನು ಆಹ್ವಾನಿಸುತ್ತಿದ್ದರು. ಆದರೆ ಇಂದು ಆ ಘಳಿಗೆ ಕೂಡಿ ಬಂದಿದ್ದು ಮಂಜು ಅವರ ಐದು ವರ್ಷದ ಕನಸು ನನಸಾದಂತಾಯಿತು.

ಇನ್ನು ಶಿವಣ್ಣನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಕ್ಯಾಂಟೀನ್ ಮಂಜು, ನಾಗೇಶ್, ಮಣಿಕಂಠ, ಮಾರಾಕಾಟ್, ಬಾಹುಸಾರ್ ಮಣಿ, ನಟರಾಜು, ಮಹೇಂದ್ರ, ಚಂದ್ರು, ಮಂಜು, ಕಾರ್ತಿಕ್ ಶಿವ ಸೈನ್ಯ ಟೀಮ್ ಇತರರು ಜೊತೆಗಿದ್ದರು.

Advertisement

ಇದನ್ನೂ ಓದಿ : ಚಾ.ನಗರದಲ್ಲಿ ʼಬೈರಾಗಿʼ ವೀಕ್ಷಿಸಿದ ಶಿವಣ್ಣ: ಚಿತ್ರ ಪ್ರದರ್ಶನ ಯಾತ್ರೆಗೆ ಅದ್ದೂರಿ ಸ್ವಾಗತ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next