Advertisement
ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಪಂಜಾಬ್ 9 ವಿಕೆಟಿಗೆ 166 ರನ್ನುಗಳ ಅಲ್ಪ ಮೊತ್ತ ದಾಖಲಿಸಿತು. ಡೆಲ್ಲಿ 19. 2 ಓವರ್‌ಗಳಲ್ಲಿ 152 ರನ್ನಿಗೆ ಅಲೌಟಾಗಿ ಸ್ಪಲ್ಪ ಅಂತರದಲ್ಲೇ ಪಂದ್ಯ ಕಳೆದುಕೊಂಡಿತು. ಉತ್ತಮ ಆರಂಭ ಪಡೆದಿದ್ದ ಡೆಲ್ಲಿ ಗೆಲುವಿಗೆ ಹತ್ತಿರವಿರಬೇಕಾದರೆ ಸತತ ವಿಕೆಟ್ ಕಳೆದುಕೊಂಡು ಪಂಜಾಬ್‌ಗ ಶರಣಾಗಿದೆ.
Related Articles
Advertisement
ಗೇಲ್ ಸ್ಥಾನವನ್ನು ಸ್ವಲ್ಪಮಟ್ಟಿಗೆ ತುಂಬಿದ ಕರನ್ ಇನ್ನಿಂಗ್ಸ್ ಆರಂಭಿಸಿ 10 ಎಸೆತಗಳಲ್ಲಿ 20 ರನ್ ಗಳಿಸಿದರು. ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿದ್ದರೂ ಕರನ್ 3 ಬೌಂಡರಿ, ಒಂದು ಸಿಕ್ಸರ್ ಬಾರಿಸಿದರು. ಬೌಲಿಂಗ್ ವೇಳೆ ಕರನ್ ದಾಳಿ ಅಮೋಘವಾಗಿತ್ತು. ಕರನ್ ಬೌಲಿಂಗ್ ಮಾಡಿದ್ದು ಕೇವಲ 2.2 ಓವರ್. ಇದರಲ್ಲೇ ಅವರು ಹ್ಯಾಟ್ರಿಕ್ ವಿಕೆಟ್ ಕಿತ್ತು ಸಂಭ್ರಮಿಸಿದ್ದಾರೆ. ಕರನ್ ಅವರ ಹ್ಯಾಟ್ರಿಕ್ ಸಾಧನೆ ಆರಂಭವಾಗಿದ್ದು 18ನೇ ಓವರ್‌ನಲ್ಲಿ. 17.6ನೇ ಎಸೆತದಲ್ಲಿ ಹರ್ಷಲ್ ಪಟೇಲ್ ಅವರ ವಿಕೆಟ್ ಕಿತ್ತು ಮೊದಲ ವಿಕೆಟ್ ಪಡೆದರು. ಆ ಬಳಿಕ 19ನೇ ಓವರ್ ಮೊಹಮ್ಮದ್ ಶಮಿ ಎಸೆದರು. ಪಂದ್ಯದ ಕೊನೆಯ ಓವರ್ ಹಾಕಿದ ಕರನ್ ಮೊದಲೆರಡು ಎಸೆತಗಳಲ್ಲಿ ಕಾಗಿಸೊ ರಬಾಡ ಮತ್ತು ಸಂದೀಪ್ ಲಮಿಶಾನೆ ಅವರ ವಿಕೆಟ್ ಕೀಳುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.
21 ಎಸೆತದಲ್ಲಿ 23 ರನ್ ಬೇಕಿತ್ತುಡೆಲ್ಲಿಗೆ ಅಂತಿಮ 21 ಎಸೆತಗಳಲ್ಲಿ ಗೆಲ್ಲಲು ಕೇವಲ 23 ರನ್ ಬೇಕಿತ್ತು. 7 ವಿಕೆಟ್ ಕೂಡ ಕೈಯಲ್ಲಿತ್ತು. ಆದರೆ ಕರನ್ ಪಂದ್ಯದ ಗತಿಯನ್ನೇ ಬದಲಾಯಿಸಿ ಡೆಲ್ಲಿಗೆ ಅಘಾತವಿಕ್ಕಿದರು. ಡೆಲ್ಲಿ ಕೊನೆಯ 7 ವಿಕೆಟನ್ನು 8 ರನ್ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ಸುಲಭವಾಗಿ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತ್ತು. ಇದರಲ್ಲಿ 5 ಆಟಗಾರರು ಡಕ್‌ಔಟ್ ಆಗಿದ್ದಾರೆ. ಬ್ಯಾಟಿಂಗ್ ಇನ್ನೂ ಉತ್ತಮಗೊಳಿಸಬೇಕು
ಕಳೆದ ಕೆಲವು ತಿಂಗಳಿನಿಂದ ಬ್ಯಾಟಿಂಗ್ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. 3 ವಿಭಾಗಗಳಲ್ಲೂ ಕಠಿನ ತರಬೇತಿ ಪಡೆಯುತ್ತಿದ್ದೇನೆ. ಶಾಲಾ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಇಳಿದಿದ್ದೆ. ಇದೇ ಮೊದಲ ಬಾರಿಗೆ ವೃತ್ತಿಪರ ಕ್ರಿಕೆಟ್‌ನಲ್ಲಿ ಆರಂಭಕಾರನಾಗಿ ಆಡಲಿಳಿದೆ. ಮುಂದಿನ ಪಂದ್ಯಗಳಲ್ಲೂ ಹೀಗೆ ಜಯ ಸಾಧಿಸುತ್ತೇವೆ ಎಂಬ ನಂಬಿಕೆ ಇದೆ.
ಸ್ಯಾಮ್ ಕರಣ್ ಸಂಕ್ಷಿಪ್ತ ಸ್ಕೋರ್
ಕಿಂಗ್ಸ್ ಇಲೆವೆನ್ ಪಂಜಾಬ್-9 ವಿಕೆಟಿಗೆ 166 (ಡೇವಿಡ್ ಮಿಲ್ಲರ್ 43, ಸಫ್ìರಾಜ್ ಖಾನ್ 39, ಮನ್‌ದೀಪ್ ಸಿಂಗ್ ಔಟಾಗದೆ 29). ಡೆಲ್ಲಿ ಕ್ಯಾಪಿಟಲ್ಸ್- 19.2 ಓವರ್‌ಗಳಲ್ಲಿ 152ಕ್ಕೆ ಅಲೌಟ್ (ರಿಷಬ್ ಪಂತ್ 39, ಕಾಲಿನ್ ಇನ್‌ಗಾಮ್ 38, ಶಿಖರ್ ಧವನ್ 30, ಕರನ್ 11ಕ್ಕೆ 4, ಅಶ್ವಿನ್ 31ಕ್ಕೆ 2, ಶಮಿ 27ಕ್ಕೆ 2. ಪಂದ್ಯಶ್ರೇಷ್ಠ: ಸ್ಯಾಮ್ ಕರಣ್ ಎಕ್ಸ್‌ಟ್ರಾ ಇನ್ನಿಂಗ್ಸ್
ಮೊಹಾಲಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಡೆಲ್ಲಿ ವಿರುದ್ಧ ಕಳೆದ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಡೆಲ್ಲಿ 2010ರಲ್ಲಿ ತವರಿನ ತಂಡದ ವಿರುದ್ಧ ಜಯಿಸಿತ್ತು. ಆದರೆ 2014ರಿಂದ ಎಲ್ಲ 5 ಪಂದ್ಯಗಳಲ್ಲಿ ಸೋಲನುಭವಿಸಿದೆ. ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಪಂಜಾಬ್ ಕಳೆದ 6 ಪಂದ್ಯಗಳನ್ನು ಗೆದ್ದಿದೆ. ಇದು ಈ ಸ್ಟೇಡಿಯಂನಲ್ಲಿ ಪಂಜಾಬ್‌ನ ಅತ್ಯಧಿಕ ಗೆಲುವಾಗಿದೆ. 2008ರ ಉದ್ಘಾಟನ ಆವೃತ್ತಿಯಲ್ಲಿ ಅದು ಕೊನೆಯ 6 ಪಂದ್ಯಗಳನ್ನು ಗೆದ್ದಿತ್ತು. ಪಂಜಾಬ್ ತಂಡದ ಸ್ಯಾಮ್ ಕರನ್ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಯುವ ಆಟಗಾರ ಎನಿಸಿಕೊಂಡಿದ್ದಾರೆ (20 ವರ್ಷ 302 ದಿನ). ಹಿಂದಿನ ದಾಖಲೆ ರೋಹಿತ್ ಶರ್ಮ ಅವರ ಹೆಸರಿನಲ್ಲಿದೆ. ಅವರು 2009ರ ಆವೃತ್ತಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದರು. ಆಗ ಅವರಿಗೆ 22 ವರ್ಷ 6 ದಿನ ವಯಸ್ಸು. ಸ್ಯಾಮ್ ಕರನ್ ಐಪಿಎಲ್‌ನಲ್ಲಿ ಆರಂಭಿಕನಾಗಿ ಆಡಿ ಮತ್ತು ಅದೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 2ನೇ ಆಟಗಾರರಾಗಿದ್ದಾರೆ. 2009ರ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪರ ಯುವರಾಜ್ ಸಿಂಗ್ ಇನ್ನಿಂಗ್ಸ್ ಆರಂಭಿಸಿದ್ದರು ಮತ್ತು ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿದಾಗ ಯುವರಾಜ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಕರನ್ ಐಪಿಎಲ್‌ನಲ್ಲಿ 3 ಬ್ಯಾಟ್ಸ್‌ಮನ್‌ಗಳನ್ನು ಡಕ್ ಔಟ್ ಮಾಡಿ
ಟ್ರಿಕ್ ಸಾಧಿಸಿದ 3ನೇ ಆಟಗಾರ. 2013ರಲ್ಲಿ ಪುಣೆ ವಾರಿಯರ್ ವಿರುದ್ಧ ಸನ್‌ರೈಸರ್ ಹೈದರಾಬಾದ್‌ನ ಅಮಿತ್ ಮಿಶ್ರಾ ಮತ್ತು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 2014ರ ಐಪಿಎಲ್‌ನಲ್ಲಿ ರಾಜಸ್ಥಾನ ತಂಡದ ಪರ ಪ್ರವೀನ್ ತಾಂಬೆ ಡಕ್ ಔಟ್ ಮಾಡಿ ಹ್ಯಾಟ್ರಿಕ್ ಸಾಧಿಸಿದ ಇನ್ನಿಬ್ಬರು ಆಟಗಾರರು. ಡೆಲ್ಲಿ ಕ್ಯಾಪಿಟಲ್ಸ್‌ನ ಇನ್ನಿಂಗ್ಸ್‌ನಲ್ಲಿ 6 ಆಟ ಗಾರರು ಡಕ್ ಔಟ್ ಆಗಿದ್ದಾರೆ. ಇದು ಐಪಿಎಲ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಆಟಗಾರರು ಡಕ್ ಔಟ್ ಆಗಿರುವ 4ನೇ ನಿದರ್ಶನ. 2011ರ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ ವಿರುದ್ಧ ಕೊಚ್ಚಿ ಟಸ್ಕರ್ನ 6 ಆಟಗಾರರು, 2008ರಲ್ಲಿ ಕಿಂಗ್ಸ್ ಇಲೆವೆನ್ ವಿರುದ್ಧ ಆರ್‌ಸಿಬಿಯ ಮತ್ತು 2011ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ತಂಡದ 5 ಆಟಗಾರರು ಡಕ್ ಔಟ್ ಆಗಿದ್ದರು. ಇನ್ನಿಂಗ್ಸ್‌ನ ಮೊದಲ ಓವರ್ ಎಸೆದ ಸಂದರ್ಭ 7ನೇ ಬಾರಿಗೆ ಆರ್. ಅಶ್ವಿನ್ ವಿಕೆಟ್ ಕಿತ್ತ ಸಾಧನೆ ಮಾಡಿದರು. ಇದು ಸ್ಪಿನ್ನರ್‌ಗಳ ಪೈಕಿ ಗರಿಷ್ಠ ಸಾಧನೆ. ಪೃಥ್ವಿ ಶಾ ವಿಕೆಟ್ ಅಂತೂ ಇನ್ನಿಂಗ್ಸ್ ಮೊದಲ ಎಸೆತದಲ್ಲಿ ಬಂದಿದ್ದು ವಿಶೇಷ.