Advertisement

ಪತ್ನಿ ಮೇಲಿನ ದ್ವೇಷ: ತಂದೆಯಿಂದಲೇ ಪುತ್ರಿಯ ಅಶ್ಲೀಲ ಫೋಟೋ!

10:28 AM Jul 10, 2022 | Team Udayavani |

ಬೆಂಗಳೂರು: ಪತ್ನಿ ಮೇಲಿನ ದ್ವೇಷಕ್ಕೆ ತಂದೆಯೇ ಪುತ್ರಿಯ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಸ್ನೇಹಿತರಿಗೆ ಕಳುಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಕೆ.ಆರ್‌.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಂದೆ ಸೇರಿ 6 ಮಂದಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ಪ್ರಾಥಮಿಕ ವಿಚಾರಣೆಯಲ್ಲಿ ಈ ಹಿಂದೆ ದಂಪತಿ ಪರಸ್ಪರ ಆರೋಪ-ಪ್ರತ್ಯಾರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಪತ್ನಿ ಮೇಲಿನ ದ್ವೇಷಕ್ಕೆ ಈ ರೀತಿಯ ವಿಕೃತ ಕೆಲಸ ಮಾಡಿರುವ ಸಾಧ್ಯತೆಗಳಿವೆ. ಸದ್ಯ ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ವೈಟ್‌ಫೀಲ್ಡ್‌ ವಿಭಾಗದಸೆನ್‌ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ಭೂಕುಸಿತ: ಸಂಚಾರ ಬಂದ್

Advertisement

Udayavani is now on Telegram. Click here to join our channel and stay updated with the latest news.

Next