Advertisement
ಸರ್ಕಾರಿ ಆಸ್ಪತ್ರೆಯೊಳಗೆ ಐಸ್ ಬ್ಲಾಕ್‌ಗಳ ಮೇಲೆ ಹಲವಾರು ದೇಹಗಳು ಬಿದ್ದಿರುವ ದೃಶ್ಯ ಕಂಡು ಬಂದಿದೆ. ಸಂತ್ರಸ್ತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು ಮೃತದೇಶಗಳನ್ನು ಮನೆಗಳಿಗೆ ಕೊಂಡೊಯ್ಯಲು ಸಾವಿರಾರು ಜನರು ಹೊರಗೆ ಕಾಯುತ್ತಿದ್ದಾರೆ.
Related Articles
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಹತ್ರಾಸ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಆದಿತ್ಯನಾಥ್ ಮಂಗಳವಾರ, “ನಮ್ಮ ಸರ್ಕಾರವು ಈ ಘಟನೆಯ ತಳಮಟ್ಟದ ವರದಿ ಪಡೆಯುತ್ತದೆ. ಸಂಚುಕೋರರು ಮತ್ತು ಹೊಣೆಗಾರರಿಗೆ ಸೂಕ್ತ ಶಿಕ್ಷೆಯನ್ನು ನೀಡುತ್ತದೆ. ರಾಜ್ಯ ಸರ್ಕಾರವು ಈ ಸಂಪೂರ್ಣ ಘಟನೆಯನ್ನು ತನಿಖೆ ನಡೆಸುತ್ತಿದೆ. ಅವಘಡವೋ ಇಲ್ಲ ಪಿತೂರಿಯೋ ಎಂದು ನಾವು ನೋಡುತ್ತೇವೆ’ ಎಂದು ಹೇಳಿದ್ದಾರೆ.
Advertisement
ಮೂವರು ಸಚಿವರಾದ ಲಕ್ಷ್ಮೀ ನಾರಾಯಣ ಚೌಧರಿ, ಅಸಿಮ್ ಅರುಣ್ ಮತ್ತು ಸಂದೀಪ್ ಸಿಂಗ್ ಅವರನ್ನು ಘಟನೆ ನಡೆದ ಕೂಡಲೇ ಸ್ಥಳಕ್ಕೆ ಕಳುಹಿಸಲಾಗಿದೆ.
ದುರಂತದ ಬಗ್ಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಸಂಬಂಧಿಕರಿಗೆ ರೂ 2 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ ರೂ 50,000 ರೂ. ಪರಿಹಾರ ಘೋಷಿಸಿದ್ದಾರೆ.