Advertisement

Hathras Stampede: ಭೋಲೆ ಬಾಬಾ ವಿರುದ್ಧ ಮೊದಲ ಕೇಸು ದಾಖಲು…

09:50 PM Jul 06, 2024 | Team Udayavani |

ನವದೆಹಲಿ: 121 ಮಂದಿ ಸಾವಿಗೆ ಕಾರಣವಾದ ಹಾಥರಸ್‌ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಭೋಲೆ ಬಾಬಾ ವಿರುದ್ಧ ಮೊದಲ ದೂರು ದಾಖಲಾಗಿದೆ.

Advertisement

ಪಾಟ್ನಾದಲ್ಲಿ ಘಟನೆ ವಿರುದ್ಧ ಸ್ಥಳೀಯ ಕೋರ್ಟ್‌ಗೆ ದೂರು ಸಲ್ಲಿಕೆಯಾಗಿದೆ. ಇದೇ ವೇಳೆ, ಶುಕ್ರವಾರ ತಡರಾತ್ರಿ ಬಂಧಿತನಾಗಿರುವ ಸತ್ಸಂಗ ಆಯೋಜಕ ದೇವಪ್ರಕಾಶ್‌ ಮಧುಕರ್‌ಗೆ ಪ್ರಮುಖ ರಾಜಕೀಯ ವ್ಯಕ್ತಿಗಳ ಜತೆಗೆ ಸಂಪರ್ಕ ಇದೆ. ಕೆಲವು ಪಕ್ಷಗಳ ನಾಯಕರು ಆತನನ್ನು ಸಂಪರ್ಕಿಸಿದ್ದ ಬಗ್ಗೆ ಮಾಹಿತಿ ಇದೆ ಎಂದು ಹಾಥರಸ್‌ ನಿಪುನ್‌ ಅಗರ್ವಾಲ್‌ ತಿಳಿಸಿದ್ದಾರೆ.

ಬಂಧಿತ ಆರೋಪಿ ಭೋಲೆ ಬಾಬಾ ಪರವಾಗಿ ನಿಧಿ ಸಂಗ್ರಹಿಸುತ್ತಿದ್ದ. ಅಲ್ಲದೇ ಆತನಿಗೆ ರಾಜಕಾರಣಿಗಳ ಸಂಪರ್ಕವೂ ಇದೆ. ಆರೋಪಿಯ ಹಣ ಚಲಾವಣೆ, ಕರೆಗಳ ವಿವರಗಳನ್ನು ಪರೀಕ್ಷಿಸಬೇಕಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಸ್ಥಳೀಯ ಕೋರ್ಟ್‌ ದೇವ ಪ್ರಕಾಶ್‌ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.

ಇದನ್ನೂ ಓದಿ: Paris Olympics: ಒಲಿಂಪಿಕ್ಸ್‌ಗೆ ಭಾರತದ ಕ್ರೀಡಾಪಟುಗಳು ಫಿಟ್‌

Advertisement

Udayavani is now on Telegram. Click here to join our channel and stay updated with the latest news.

Next