Advertisement

Hathras; ಕಾಲ್ತುಳಿತಕ್ಕೆ ಕಾರಣವಾದ ಯಾರನ್ನೂ ಬಿಡುವುದಿಲ್ಲ…: ಭೋಲೆ ಬಾಬಾ

02:49 PM Jul 06, 2024 | Team Udayavani |

ಹತ್ರಾಸ್: ಕೆಲ ದಿನಗಳ ಹಿಂದೆ ನಡೆದ ಹತ್ರಾಸ್ ಕಾಲ್ತುಳಿತದ ಘಟನೆಯಿಂದ ಖಿನ್ನತೆಗೆ ಒಳಗಾಗಿದ್ದೇನೆ ಮತ್ತು ಸಂತ್ರಸ್ತ ಕುಟುಂಬಗಳು ನ್ಯಾಯಾಂಗದಲ್ಲಿ ನಂಬಿಕೆ ಇಡಬೇಕು ಎಂದು ಭೋಲೆ ಬಾಬಾ ಹೇಳಿದ್ದಾರೆ.

Advertisement

ಜುಲೈ 2 ರಂದು 121 ಜನರನ್ನು ಬಲಿತೆಗೆದುಕೊಂಡ ಹತ್ರಾಸ್ ಕಾಲ್ತುಳಿತದ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ಶುಕ್ರವಾರ ರಾತ್ರಿ ದೆಹಲಿಯಲ್ಲಿ ಪೊಲೀಸರ ಮುಂದೆ ಶರಣಾದನು. ನಂತರ ಅವರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ತೆಗೆದುಕೊಂಡರು.

ಘಟನೆಯ ಬಳಿಕ ನಾಪತ್ತೆಯಾಗಿದ್ದ ಭೋಲೆ ಬಾಬಾ ಇಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು ಅದರಲ್ಲಿ, “ದೇವರು ನಮಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ, ದಯವಿಟ್ಟು ಸರ್ಕಾರ ಮತ್ತು ಆಡಳಿತದಲ್ಲಿ ನಂಬಿಕೆ ಇಡಿ. ಅವ್ಯವಸ್ಥೆ ಸೃಷ್ಟಿಸಿದ ಯಾರನ್ನೂ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ಸಂತ್ರಸ್ತ ಕುಟುಂಬಗಳು ಮತ್ತು ಗಾಯಾಳುಗಳ ಜೊತೆಗೆ ನಿಲ್ಲಲು ಮತ್ತು ಅವರ ಜೀವನದುದ್ದಕ್ಕೂ ಅವರಿಗೆ ಸಹಾಯ ಮಾಡಲು ನನ್ನ ವಕೀಲ ಎ.ಪಿ. ಸಿಂಗ್ ಮೂಲಕ ನಾನು ಸಮಿತಿಯ ಸದಸ್ಯರನ್ನು ವಿನಂತಿಸಿದೆ” ಎಂದು ಹೇಳಿದ್ದಾರೆ.

ಜುಲೈ 2ರಂದು ಹತ್ರಾಸ್ ನಲ್ಲಿ ನಡೆದಿದ್ದ ಸತ್ಸಂಗದಲ್ಲಿ ಸುಮಾರು 2.5 ಲಕ್ಷ ಜನರು ಸೇರಿದ್ದರು. ಭೋಲೆ ಬಾಬಾ ಅವರ ಕಾರು ಹಾದುಹೋದ ನೆಲದ “ಧೂಳು ಸಂಗ್ರಹಿಸಲು” ಪ್ರಾರಂಭಿಸಿದಾಗ ಕಾಲ್ತುಳಿತ ಪ್ರಾರಂಭವಾಯಿತು. ಇದರಿಂದಾಗಿ ಹಲವಾರು ಸಾವುಗಳು ಸಂಭವಿಸಿದವು. ಸತ್ಸಂಗ ಕಾರ್ಯಕ್ರಮಕ್ಕೆ ಅಧಿಕಾರಿಗಳು 80,000 ಜನರ ಮಿತಿ ನಿಗದಿಪಡಿಸಿದ್ದರು, ಆದರೆ ಅಲ್ಲಿ 2.5 ಲಕ್ಷ ಜನರು ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next