Advertisement
ಜಾತಿ-ಮತಗಳ ಹೆಸರಲ್ಲಿ ಮತಯಾಚನೆ ನಡೆಸುವುದು, ಮತಯಾಚನೆಗೆ ಆರಾಧನಾಯಲಗಳ ಬಳಕೆ ನಡೆಸಕೂಡದು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತದಾರರನ್ನು ಬೆದರಿಸಿ, ಆಮಿಷವೊಡ್ಡಿ ತಮ್ಮ ಕಡೆ ಸೆಳೆಯಕೂಡದು. ಓರ್ವರ ಬದಲಿಗೆ ಇನ್ನೋರ್ವರನ್ನು ಬಳಸಿ ಮತದಾನ ನಡೆಸುವುದು, ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮತದಾದ ದಿನ ಪ್ರಚಾರ ನಡೆಸುವುದು, ಮತದಾನಕ್ಕೆ 48 ತಾಸು ಮುನ್ನ, ಚುನಾವಣೆಯ ಪ್ರಚಾರ ಮುಗಿದ ಅನಂತರ, ಮತದಾನ ಮುಗಿಯುವ ಮುನ್ನ, ಸಾರ್ವಜನಿಕ ಸಭೆ ನಡೆಸುವುದು ಇತ್ಯಾದಿ ಮಾದರಿ ನೀತಿಸಂಹಿತೆಯ ಉಲ್ಲಂಘನೆಯಾಗಿದೆ ಎಂದವರು ನುಡಿದರು.
ಅಭ್ಯರ್ಥಿಗಳು ಚುನಾವಣೆ ಸಭೆ, ವಾಹನ ಪ್ರಚಾರ ಇತ್ಯಾದಿ ನಡೆಸುವ ವೇಳೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಲಿಖೀತ ಅನುಮತಿ ಪಡೆಯಬೇಕು. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ವರೆಗಿನ ಅವಧಿಯಲ್ಲಿ ಧ್ವನಿವರ್ಧಕ ಬಳಸಿ ಪ್ರಚಾರ ನಡೆಸುವಂತಿಲ್ಲ. ಸರಕಾರಿ ಸಂಸ್ಥೆಗಳು, ಸರಕಾರಿ ಕಾರ್ಯಕ್ರಮಗಳು ಚುನಾವಣೆ ಪ್ರಚಾರಕ್ಕಾಗಿ ಬಳಸಕೂಡದು. ಸರಕಾರಿ, ಸಾರ್ವಜನಿಕ ಸಂಸ್ಥೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಚಾರ ಸಾಮಗ್ರಿಗಳ ಬಳಕೆ ನಡೆಸಕೂಡದು.
Related Articles
Advertisement
ಜಿಲ್ಲೆಯಲ್ಲಿ ಸುಗಮ, ನೀತಿ ಪೂರ್ವಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ನೀತಿಸಂಹಿತೆ ಜಾರಿಗೊಳಿಸುವ ಸಂಬಂಧ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಪೊಲೀಸ್ ಸಂರಕ್ಷಣೆ ಸಹಿತದ ವೀಡಿಯೋ ಚಿತ್ರೀಕರಣ ಸಹಿತದ 5 ಆ್ಯಂಟಿ ಡಿಫೇಸ್‌ಮೆಂಟ್ ಸ್ಕಾ Ìಡ್‌ಗಳು, ಜಿಲ್ಲಾಮಟ್ಟದಲ್ಲಿ ಒಂದು ಸ್ಕ್ವಾಡ್ ರಚನೆಯಾಗಿದೆ.
ಸ್ಕಾÌಡ್ ಗಳ ಚಟುವಟಿಕೆ ಏಕೀಕರಣಗೊಳಿಸುವ ನಿಟ್ಟಿನಲ್ಲಿ, ನಿರೀಕ್ಷಿ ಸುವ ನಿಟ್ಟಿನಲ್ಲಿ, ಆದೇಶ ನೀಡುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧಿಕಾರಿಯೋರ್ವರನ್ನು ನೇಮಿಸಲಾಗಿದೆ. ಚುನಾವಣೆ ನೀತಿಸಂಹಿತೆ ಸಂಬಂಧ ಚಟುವಟಿಕೆಗಳ ಒಟ್ಟು ಹೊಣೆ ಹೆಚ್ಚುವರಿ ದಂಡನಾಧಿಕಾರಿ ಅವರಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಂದೂಕು ಠಾಣೆಗೆ ಹಾಜರುಪಡಿಸಲು ಆದೇಶ ಲೋಕಸಭೆ ಚುನಾವಣೆ ಘೋಷಿಸಿರುವ ಹಿನ್ನೆಲೆಯಲ್ಲಿ ಪರವಾನಗಿ ಹೊಂದಿರುವ ಬಂದೂಕು ಇರಿಸಿಕೊಂಡಿರುವವರು ಮಾ.15ರ ಮುಂಚಿತವಾಗಿ ಸಮೀಪದ ಪೊಲೀಸ್ ಠಾಣೆಗೆ ಆಯುಧ ಹಾಜರುಪಡಿಸಿ, ರಶೀದಿ ಪಡೆದು, ಜಿಲ್ಲಾಧಿಕಾರಿ ಕಚೇರಿಯ “ಡಿ’ ವಿಭಾಗಕ್ಕೆ ಸಲ್ಲಿಸಬೇಕು. ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಮುಂಗಡ ಸೂಚನೆಗಳಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದ್ದಾರೆ.