Advertisement
ಮೋದಿ ಸರ್ಕಾರದ ನೀತಿಗಳು ಕೇವಲ ಇಬ್ಬರು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಮಾತ್ರ ಲಾಭ ನೀಡುತ್ತಿವೆ. ಅವರಿಬ್ಬರ ಬೆಂಬಲವಿಲ್ಲದೆ ಮೋದಿ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ರಾಹುಲ್ ಟೀಕಿಸಿದರು.
Related Articles
Advertisement
ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಹುಲ್, “ಒಂದು ಕಡೆ ನಿರುದ್ಯೋಗ, ಮತ್ತೊಂದೆಡೆ ಬೆಲೆ ಏರಿಕೆ. ಕಾಂಗ್ರೆಸ್ ಎಪ್ಪತ್ತು ವರ್ಷಗಳಲ್ಲಿ ಏನು ಮಾಡಿದೆ ಎಂದು ನರೇಂದ್ರ ಮೋದಿಜಿ ಕೇಳುತ್ತಾರೆ. ನಾನು ಹೇಳುತ್ತೇನೆ: ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ದೇಶಕ್ಕೆ ಈ ರೀತಿಯ ಬೆಲೆ ಏರಿಕೆ ತೋರಿಸಿಲ್ಲ. ಪ್ರತಿಪಕ್ಷಗಳು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಬಯಸಿದಾಗ, ನರೇಂದ್ರ ಮೋದಿಯವರ ಸರ್ಕಾರ ಅದಕ್ಕೆ ಅವಕಾಶ ನೀಡುವುದಿಲ್ಲ, ಅದು ರೈತರ ಸಮಸ್ಯೆಯಾಗಿರಲಿ ಅಥವಾ ಚೀನಾ ದಾಳಿಯಾಗಿರಲಿ…,” ಎಂದು ಹೇಳಿದರು.
ಕಾಂಗ್ರೆಸ್‌ನ ಸಿದ್ಧಾಂತವು ದೇಶವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯುತ್ತದೆ ಎಂದು ರಾಹುಲ್ ಹೇಳಿದರು.
“ಬೆಲೆ ಏರಿಕೆ ಅಥವಾ ದ್ವೇಷ ದೇಶವನ್ನು ಬಲಪಡಿಸುತ್ತದೆಯೇ ಎಂದು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ. ನರೇಂದ್ರ ಮೋದಿ ಮತ್ತು ಬಿಜೆಪಿ ದೇಶವನ್ನು ದುರ್ಬಲಗೊಳಿಸುತ್ತಿದೆ. ಕಾಂಗ್ರೆಸ್ ಪಕ್ಷವು ದೇಶವನ್ನು ಒಂದುಗೂಡಿಸುತ್ತದೆ, ನಾವು ದ್ವೇಷವನ್ನು ಅಳಿಸುತ್ತೇವೆ ಮತ್ತು ದ್ವೇಷ ಅಳಿದಾಗ ಮಾತ್ರ ದೇಶವು ವೇಗವಾಗಿ ಚಲಿಸುತ್ತದೆ. ನೀವು ದೇಶವನ್ನು ಉಳಿಸಬಹುದು, ಕಾಂಗ್ರೆಸ್ ನ ಸಿದ್ಧಾಂತವು ದೇಶವನ್ನು ಪ್ರಗತಿಯ ಪಥದಲ್ಲಿ ತರುತ್ತದೆ ಎಂದು ನಾನು ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಲು ಬಯಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.