Advertisement
ಈ ಹಿಂದೆ ಎಸ್‌ಡಿಪಿಐ ಸಂಘಟನೆ ನಡೆಸಿದ ಕಾನೂನು ವಿರೋಧಿ ಪ್ರತಿಭಟನೆಯ ವಿಡಿಯೋ ಮತ್ತು ಸೈಂಟ್‌ಮೇರಿಸ್ ದ್ವೀಪದಲ್ಲಿ ನಡೆದ ಘಟನೆಯ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಈ ಬಗ್ಗೆ ಮಲ್ಪೆ ಕೊಳದಲ್ಲಿ ಪ್ರಕಾಶ್ ಮಲ್ಪೆ ಅವರಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ವಿಡಿಯೋ ಮಾಡಿರುವುದು ನನ್ನ ಮೊಬೈಲ್‌ನಲ್ಲಿ, ಇದು ನನ್ನ ಇಷ್ಟ. ಮಲ್ಪೆ ಪರಿಸರದಲ್ಲಿ ಜೀವ ಸಹಿತ ಬಿಡುವುದಿಲ್ಲ ಬೆದರಿಕೆ ಹಾಕಿದ್ದಾರೆ. ಅವರ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಲ್ಪೆ: ಎದೆನೋವು ಕಾಣಿಸಿ ಕೊಂಡು ಕೇರಳದ ಕೊಲ್ಲಂನ ಸುರೇಶ್ (45) ಅವರು ಮೃತಪಟ್ಟಿದ್ದಾರೆ. ಕಲ್ಮಾಡಿಯಲ್ಲಿ ಬಾವಿ ರಿಂಗಿನ ಕೆಲಸ ಮಾಡಿಕೊಂಡಿದ್ದರು. ವಾರದ ಹಿಂದೆ ಅವರಿಗೆ ಎದೆನೋವು ಕಾಣಿಸಿ ಕೊಂಡಿದೆನ್ನಲಾಗಿದೆ. ಜ. 25ರಂದು ರಾತ್ರಿ ರಕ್ತವಾಂತಿ ಮಾಡುತ್ತಿದ್ದು, ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪರೀಕ್ಷಿಸಿದ ವೈದರು ಸುರೇಶ್ ಅದಾಗಲೇ ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ. ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ; ಗಂಭೀರ
ಸಿದ್ದಾಪುರ: ಹೊಸಂಗಡಿ ಗ್ರಾಮದ ಶ್ರೀ ವೀರಾಂಜನೆಯ ದೇವಸ್ಥಾನದ ಎದುರಿನ ರಾ. ಹೆದ್ದಾರಿಯಲ್ಲಿ ಅರುಣ್‌ಕುಮಾರ್ ಅವರು ಅತೀ ವೇಗವಾಗಿ ಚಲಾಯಿಸಿ, ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆಸಿದ್ದಾರೆ. ಅನಂತರ ಮಲ್ಯ ಕಾಂಪೌಂಡಿಗೆ ಢಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಸಿದ್ದಾಪುರ: ಕೊಂಜಾಡಿ ರಾಜೀವ ಶೆಟ್ಟಿ ಅವರ ಮನೆಯ ತೆಂಗಿನ ತೋಟದಲ್ಲಿ ಮರದಿಂದ ಕಾಯಿ ಕೊಯ್ಯುತ್ತಿರುವಾಗ ಮರದಿಂದ ಬಿದ್ದು ಕುಚ್ಚಾರು ಕಾನ್ವೆಟ್ಟು ಚನ್ನಕೇಶವ (43) ಅವರು ಜ. 26ರಂದು ಮೃತಪಟ್ಟಿದ್ದಾರೆ. ಅವರನ್ನು ಕೂಡಲೆ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೆಬ್ರಿ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement