Advertisement

ಹಳ್ಳಿಗಳಲ್ಲಿ ಪುಟ್ಟ ಕಾರು ಬಾರು

10:26 AM Feb 29, 2020 | sudhir |

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಅತೀ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಇದು ಶೇ. 51ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಮಾರುತಿ ಸುಜುಕಿಯಲ್ಲಿ ಆಲ್ಟೋ, ವ್ಯಾಗ್‌ನರ್‌, ಇಕೋ, ಸ್ವಿಫ್ಟ್ ಕಾರುಗಳು ಹೆಚ್ಚು ಮಾರಾಟವಾಗುತ್ತಿವೆ.

Advertisement

ನ ಮ್ಮಲ್ಲಿ ಹತ್ತು ಹಲವು ಕಾರು ತಯಾರಕ ಸಂಸ್ಥೆಗಳಿವೆ. 3 ಲಕ್ಷ ರೂ.ಗಳಿಂದ ಕೋಟ್ಯಂತರ ರೂ. ಬೆಲೆ ಬಾಳುವ ಐಷಾರಾಮಿ ಕಾರುಗಳು ನಮ್ಮ ರಸ್ತೆಯಲ್ಲಿ ಧೂಳೆಬ್ಬಿಸುತ್ತಿವೆ. ಆದರೆ ನಮ್ಮ ಗ್ರಾಮೀಣ ಭಾಗದಲ್ಲಿ ಮಾತ್ರ ಐಷಾರಾಮಿ ಕಾರುಗಳು ಸದ್ದು ಮಾಡುತ್ತಿಲ್ಲ. ಬಹಳ ಹಿಂದಿನಿಂಲೂ ಸಣ್ಣ ಮತ್ತು ಮಧ್ಯಮ ಗಾತ್ರದ ಕಾರುಗಳಿಗೆ ನಮ್ಮ ಹಳ್ಳಿ ಜನ ತೃಪ್ತರಾಗುತ್ತಿದ್ದಾರೆ. ಕಾರು ತಯಾರಕ ಸಂಸ್ಥೆಗಳ ಭಾಷೆಯಲ್ಲಿ ಉಲ್ಲೇಖೀಸುವುದಾದರೆ “ರೂರಲ್‌ ಮಾರ್ಕೆಟ್‌’ಗಳು ಹೆಚ್ಚಾಗಿ ಸಣ್ಣ ಕಾರುಗಳತ್ತ ಮಾತ್ರ ಕನಸು ಕಾಣುತ್ತಿವೆ.

ವಿಶೇಷವಾಗಿ ಕಡಿಮೆ ಬಜೆಟ್‌ನಲ್ಲಿ ಲಭ್ಯವಿರುವ ಕಾರುಗಳನ್ನು ಹಳ್ಳಿ ಜನ ಕೊಂಡುಕೊಳ್ಳುತ್ತಿದ್ದಾರೆ. ದೊಡ್ಡ ಪ್ರಮಾಣದ ಕಾರುಗಳು ಹೆಚ್ಚಾಗಿ ನಗರಗಳು ಮತ್ತು ನಗರಕ್ಕೆ ಹೊಂದಿಕೊಂಡ ಪ್ರದೇಶಗಳನ್ನು ಮಾತ್ರ ತಲುಪಿವೆ. ಗ್ರಾಮೀಣ ಭಾಗದಲ್ಲಿ ದೊಡ್ಡ ದೊಡ್ಡ ಐಷಾರಾಮಿ ಕಾರುಗಳನ್ನು ಕೊಂಡುಕೊಳ್ಳಲು ಜನ ಮನಸ್ಸು ಮಾಡುತ್ತಿಲ್ಲ. ಇದಕ್ಕೆ ಆರ್ಥಿಕ ಸಂಪನ್ಮೂ ಲ ಕ್ರೋಡಿಕರಣದ ಸವಾಲು ಎಂದು ಹೇಳಲು ಬರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ತಮ್ಮ ಅಗತ್ಯ ಮತ್ತು ದೈನಂದಿನ ಬಳಕೆಗೆ ಸುಲಭವಾಗುವ ವಾಹನಗಳನ್ನು ಕೊಂಡುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.

ಗ್ರಾಹಕರ ಈ ನಡೆಯನ್ನು ಬಹಳ ಹತ್ತಿರದಿಂದ ಗಮನಿಸಿರುವ ಹಲವು ವಾಹನ ತಯಾರಿಕಾ ಸಂಸ್ಥೆಗಳು ಅವರ ಇಚ್ಛೆಯ ಕಾರುಗಳನ್ನು ತಯಾರಿಸುತ್ತಿವೆ. ಪ್ರತಿ ವರ್ಷ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ವಿಶೇಷವಾಗಿ ಸಣ್ಣ ಕಾರುಗಳನ್ನು ಮಾತ್ರ ಗ್ರಾಮೀಣರು ಕೊಂಡುಕೊಳ್ಳುವ ಕಾರಣ ಅಂತಹದ್ದೇ ಕಾರುಗಳು ಪ್ರತಿ ವರ್ಷ ಭಿನ್ನ ವಿನ್ಯಾಸದಲ್ಲಿ ಮಾರುಕಟ್ಟೆಯನ್ನು ಆಕ್ರಮಿಸುತ್ತವೆೆ. ಇನ್ನೊಂದು ಆಸಕ್ತಿಕರ ವಿಷಯ ಎಂದರೆ ಗ್ರಾಮೀಣ ಭಾಗದಲ್ಲಿ ದುಬಾರಿ ಕಾರುಗಳ ಸಂಖ್ಯೆ ವಿರಳವಾಗಿದ್ದರೂ
ದುಬಾರಿ ಬೈಕ್‌ಗಳಿಗೆ ಕೊರತೆ ಇಲ್ಲ.

ಏನು ಕಾರಣ
ಭಾರತದ ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಕಾರುಗಳು ಅವರ ಅಗತ್ಯವನ್ನು ಪೂರೈಸುತ್ತಿವೆ. ತಮ್ಮ ಕುಟುಂಬದ ಅಗತ್ಯ ಮತ್ತು ಹೊಲದಲ್ಲಿ ಬೆಳೆ ಸಣ್ಣ ಪುಟ್ಟ ವಸ್ತುಗಳನ್ನು ನಗರದತ್ತ ಸಾಗಿಸಲು ಹೆಚ್ಚು ನೆರವಿಗೆ ಬರುತ್ತವೆ ಎಂಬುದು ಅವರ ಲೆಕ್ಕಾಚಾರ. ದೂರದ ಪ್ರಯಾಣಕ್ಕೆ 4ರಿಂದ 5 ಮಂದಿಯನ್ನು ಕುಳ್ಳಿರಿಸಿಕೊಂಡು ಪ್ರಯಾಣಿಸಬಹುದಾಗಿದೆ. ಈ ಎಲ್ಲ ಕಾರಣಗಳಿಗೆ ದುಬಾರಿ ವಾಹನಗಳು ಹಳ್ಳಿಯನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ದುಬಾರಿ ಕಾರುಗಳಾದರೂ ಲೋ ಕಾಸ್ಟ್‌ ಕಾರುಗಳಾದರೂ ಜನರ ಬಳಕೆಯಲ್ಲಿ ಯಾವುದೇ ವ್ಯತ್ಯಾಸವಾಗದು.

Advertisement

ಅಭಿಮನ್ಯು

Advertisement

Udayavani is now on Telegram. Click here to join our channel and stay updated with the latest news.

Next