Advertisement

ಬೆ.ಬಾಗೇವಾಡಿ ಗ್ರಾಪಂಗೆ ಹ್ಯಾಟ್ರಿಕ್‌

11:19 AM Oct 02, 2019 | Team Udayavani |

ಹುಕ್ಕೇರಿ: ಗಾಂಧಿ ಗ್ರಾಮ ಪುರಸ್ಕಾರಕ್ಕೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ. ಈ ಮೂಲಕ ಬೆಲ್ಲದ ಬಾಗೇವಾಡಿ ಗ್ರಾಪಂ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಮುಡಿಗೇರಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. 2016-17 ಹಾಗೂ 2017-18 ರಲ್ಲಿಯೂ ಈ ಗ್ರಾಪಂ ಗಾಂಧಿ  ಗ್ರಾಮ ಪ್ರಶಸ್ತಿ ಪಡೆದಿತ್ತು. ಇದೀಗ 2018-19 ನೇ ಸಾಲಿನ ಸಾಧನೆ ಆಧಾರದ ಮೇಲೆ ಮತ್ತೂಮ್ಮೆ ಈ ಪ್ರಶಸ್ತಿ ಪಡೆಯುವ ಮೂಲಕ ಹುಕ್ಕೇರಿ ತಾಲೂಕಿನ 50 ಕ್ಕೂ ಹೆಚ್ಚು ಪಂಚಾಯಿತಿಗಳಿಗೆ ಮಾದರಿ ಎನಿಸಿದೆ.

Advertisement

ಈ ಪುರಸ್ಕಾರಕ್ಕೆ ತಾಲೂಕಿನ ಬೆಲ್ಲದ ಬಾಗೇವಾಡಿ, ಹೆಬ್ಟಾಳ, ಮದಿಹಳ್ಳಿ, ಸೊಲ್ಲಾಪುರ ಗ್ರಾಪಂಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ ಬೆಲ್ಲದ ಬಾಗೇವಾಡಿ 150 ಅಂಕಗಳ ಪೈಕಿ 135 ಪಡೆದು ಆಯ್ಕೆಯಾಗಿದೆ. ತನ್ಮೂಲಕ ಹುಕ್ಕೇರಿ ತಾಲೂಕಿನಲ್ಲಿ 3 ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ ಏಕೈಕ ಗ್ರಾಪಂ ಎಂಬ ಹಿರಿಮೆಗೆ ಪಾತ್ರವಾಗಿದೆ. ಬೆಲ್ಲದ ಬಾಗೇವಾಡಿ ಮತ್ತು ಕಡಹಟ್ಟಿ ಗ್ರಾಮಗಳನ್ನು ಒಳಗೊಂಡ ಈ ಗ್ರಾಪಂ ಒಟ್ಟು 33 ಸದಸ್ಯರನ್ನು ಹೊಂದಿದೆ. 9 ವಾರ್ಡ್‌ಗಳಿದ್ದು, 12,892 ಜನಸಂಖ್ಯೆ, 2430 ಕುಟುಂಬಗಳಿದ್ದು ಶೇ. 92.02 ಸಾಕ್ಷರತೆ ಹೊಂದಿದೆ.

ಸಮರ್ಪಕ ಅನುಷ್ಠಾನ: ಸರ್ಕಾರಿ ಅನುದಾನಗಳ ಸಮರ್ಪಕ ಬಳಕೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ, ನೈರ್ಮಲೀಕರಣಕ್ಕೆ ಆದ್ಯತೆ, ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಧಿಸಿದ ಪ್ರಗತಿ, ಜಲ ಮರು ಪೂರಣಕ್ಕೆ ಆದ್ಯತೆ, ಶೇ. 99 ತೆರಿಗೆ ವಸೂಲಾತಿ, ಲೆಕ್ಕ ಪತ್ರಗಳನ್ನು ಲೆಕ್ಕ ಪರಿಶೋಧನ ವರ್ತುಲದಿಂದ ಮಾಡಿರುವುದು, ಘನತ್ಯಾಜ್ಯ ವಿಲೇವಾರಿ, ನಿಯಮಾನುಸಾರ ಸಾಮಾನ್ಯ ಸಭೆಗಳನ್ನು ನಡೆಸಿ ಪಂಚತಂತ್ರಕ್ಕೆ ಅಳವಡಿಕೆ, ಗ್ರಾಮ ಹಾಗೂ ಸ್ಥಾಯಿ

ಸಮಿತಿ ಸಭೆ, ಶುಚಿತ್ವದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ, ಮಹಿಳಾ ಗ್ರಾಮ ಸಭೆ, ಸಾರ್ವಜನಿಕ ರ್ಯಾಲಿಗಳನ್ನು ಯಶಸ್ವಿಯಾಗಿ ನಡೆಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ದೊರೆತಿದೆ.

ಜತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿ ಕಾರ್ಯ, ಪ್ರತಿ ತಿಂಗಳು ಗ್ರಾಮದ ವಿವಿಧ ಸಂಘ-ಸಂಸ್ಥೆಗಳನ್ನು ಸೇರಿಸಿಕೊಂಡು ವಿನೂತನ ಕಾರ್ಯಕ್ರಮ, ಸಮಾಲೋಚನೆ ಸಭೆಗಳ ಆಯೋಜನೆ, ಗ್ರಾಮದ ಅಂಗವಿಕಲರಿಗೆ ಮಾಹಿತಿ, ಗ್ರಾಪಂ ಅನುದಾನ ಸಂಘ-ಸಂಸ್ಥೆಗಳ ಸಹಕಾರದಿಂದ ಸದ್ಬಳಕೆ, 14 ನೇ ಹಣಕಾಸು ಯೋಜನೆ, ಸ್ವತ್ಛ ಭಾರತ ಮಿಶನ್‌ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಎಲ್ಲರ ಸಹಕಾರದೊಂದಿಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಪಿಡಿಒ ಎ.ಬಿ.ಜಮಖಂಡಿ ಪತ್ರಿಕೆಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next