Advertisement
ಚಹಲ್ 17ನೇ ಓವರ್‌ನಲ್ಲಿ ಈ ಮ್ಯಾಜಿಕ್ ಮಾಡಿದರು. ಆಗ ಕೆಕೆಆರ್ 4ಕ್ಕೆ 178 ರನ್ ಗಳಿಸಿ ಗೆಲುವಿನ ಹಾದಿಯಲ್ಲಿ ಸಾಗುತ್ತಿತ್ತು. ಅಯ್ಯರ್‌ದ್ವಯರು ಕ್ರೀಸ್‌ನಲ್ಲಿದ್ದುದರಿಂದ ರಾಜಸ್ಥಾನ್ ಪಂದ್ಯಕ್ಕೆ ಮರಳುವುದು ಅಷ್ಟು ಸುಲಭವಾಗಿರಲಿಲ್ಲ. ಇಲ್ಲಿ ಬೌಲಿಂಗ್ ಪವಾಡವೇ ನಡೆಯಬೇಕಿತ್ತು. ಅದು ಚಹಲ್ ಅವರಿಂದ ಸಾಕಾರಗೊಂಡಿತು.ಮೊದಲ ಎಸೆತವನ್ನು ಮುನ್ನುಗ್ಗಿ ಬಾರಿಸಲು ಹೋದ ವೆಂಕಟೇಶ್ ಅಯ್ಯರ್ ಸ್ಟಂಪ್ಡ್ ಆದರು. 4ನೇ ವೈಡ್ ಎಸೆತದ ಬಳಿಕ ಚಹಲ್ ಚಮ್ಕಾಯಿಸತೊಡಗಿದರು. ಮೊದಲು ನಾಯಕ ಶ್ರೇಯಸ್ ಅಯ್ಯರ್ ಆವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಬಳಿಕ ಶಿವಂ ಮಾವಿ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಅಂತಿಮ ಎಸೆತದಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು ಕೀಪರ್ ಸ್ಯಾಮ್ಸನ್ ಕೈಗೆ ಕ್ಯಾಚ್ ಕೊಡುವ ಮೂಲಕ ಚಹಲ್ ಇತಿಹಾಸದ 19ನೇ ಹ್ಯಾಟ್ರಿಕ್ ಹೀರೋ ಎನಿಸಿದರು. ಒಟ್ಟಾರೆಯಾಗಿ ಇದು ಐಪಿಎಲ್‌ನ 21ನೇ ಹ್ಯಾಟ್ರಿಕ್ ನಿದರ್ಶನ.
ಹ್ಯಾಟ್ರಿಕ್ ಬಳಿಕ ಅವರು ಸಂಭ್ರಮಿಸಿದ ರೀತಿ ಎಲ್ಲರ ಗಮನ ಸೆಳೆಯಿತು. ಇದು “ಮೀಮ್’ ಮಾದರಿಯ ಆಚರಣೆಯಾಗಿತ್ತು. ಅಂಗಳದಲ್ಲಿ ಮಲಗಿ ತನ್ನ ಬೌಲಿಂಗ್ ತಾಕತ್ತನ್ನು ನೋಡಿದಿರಾ ಎಂದು ಪ್ರಶ್ನಿಸುವ ರೀತಿಯಲ್ಲಿತ್ತು. ಚಹಲ್ ಅವರ ಈ ಆಚರಣೆಗೆ ಬಲವಾದ ಕಾರಣವೊಂದಿತ್ತು. 2019ರ ವಿಶ್ವಕಪ್ ವೇಳೆ ಚಹಲ್‌ಗೆ ಹೆಚ್ಚು ಆಡುವ ಅವಕಾಶ ಸಿಕ್ಕಿರಲಿಲ್ಲ. ಆಗ ಆಟಗಾರರಿಗೆ ನೀರು ಸಪ್ಲೆ„ ಮಾಡುವುದೇ ಇವರ ಕೆಲಸವಾಗಿತ್ತು. ವಿರಾಮದ ವೇಳೆ ಒಂದಿಷ್ಟು ನೀರಿನ ಬಾಟಲ್ ಹಾಗೂ ಕ್ಯಾನ್‌ಗಳನ್ನು ಪಕ್ಕದಲ್ಲಿರಿಸಿಕೊಂಡು ಬೌಂಡರಿ ಲೈನ್ ಬಳಿಕ ತಲೆಗೆ ಕೈಯಿಟ್ಟು ಮಲಗುತ್ತಿದ್ದರು. ಆಗ ಇದು ಟ್ರೋಲ್ ಆಗಿತ್ತು. ಈಗ ಇದೇ ಮಾದರಿಯ ಮೂಲಕ ತಮ್ಮ ಸಾಧನೆಯ ಸಂಭ್ರಮದಲ್ಲಿ ಮಿಂದೆದ್ದರು!
Related Articles
ಚೆನ್ನೈನ ಲಕ್ಷ್ಮೀಪತಿ ಬಾಲಾಜಿ ಐಪಿಎಲ್‌ನ ಮೊದಲ ಹ್ಯಾಟ್ರಿಕ್ ಸಾಧಕ. 2008ರ ಚೊಚ್ಚಲ ಐಪಿಎಲ್‌ನಲ್ಲೇ ಅವರು ಪಂಜಾಬ್ ವಿರುದ್ಧ ಈ ಸಾಧನೈಗೆದಿದ್ದರು. ಆರಂಭಿಕ ವರ್ಷದಲ್ಲಿ ಇನ್ನೂ ಇಬ್ಬರು ಹ್ಯಾಟ್ರಿಕ್ ಸಾಧಕರು ಗೋಚರಿಸಿದರು. ಇವರೆಂದರೆ ಡೆಲ್ಲಿಯ ಅಮಿತ್ ಮಿಶ್ರಾ ಮತ್ತು ಚೆನ್ನೈ ತಂಡದ ಮತ್ತೋರ್ವ ವೇಗಿ ಮಖಾಯ ಎನ್‌ಟಿನಿ. ಕ್ರಮವಾಗಿ ಡೆಕ್ಕನ್ ಮತ್ತು ಪಂಜಾಬ್ ವಿರುದ್ಧ ಇವರು ಹ್ಯಾಟ್ರಿಕ್ ತೋರ್ಪಡಿಸಿದರು.
Advertisement
ಒಂದು ಋತು, 3 ಹ್ಯಾಟ್ರಿಕ್2009ರಲ್ಲೂ 3 ಹ್ಯಾಟ್ರಿಕ್ ನಿದರ್ಶನಗಳು ಕಂಡುಬಂದವು. ಇಲ್ಲಿ ಬಹಳಷ್ಟು ವೈಶಿಷ್ಟéವಿತ್ತು. ಇಲ್ಲಿನ ಹ್ಯಾಟ್ರಿಕ್ ಹೀರೋಗಳಿಬ್ಬರೂ ಪಾರ್ಟ್‌ಟೈಮ್ ಬೌಲರ್‌ಗಳಾಗಿದ್ದರು. ಇವರೆಂದರೆ ಯುವರಾಜ್ ಸಿಂಗ್ ಮತ್ತು ರೋಹಿತ್ ಶರ್ಮ. ಪಂಜಾಬ್ ತಂಡದಲ್ಲಿದ್ದ ಯುವರಾಜ್ ಅಂದು ಎರಡು ಸಲ ಹ್ಯಾಟ್ರಿಕ್ ಸಾಧಿಸಿ ಅಮೋಘ ಪರಾಕ್ರಮಗೈದರು. ಒಮ್ಮೆ ಆರ್‌ಸಿಬಿ ವಿರುದ್ಧ, ಮತ್ತೊಮ್ಮೆ ಡೆಕ್ಕನ್ ವಿರುದ್ಧ. ಯುವರಾಜ್ ಒಂದೇ ಐಪಿಎಲ್ ಸೀಸನ್‌ನಲ್ಲಿ 2 ಸಲ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಏಕೈಕ ಸಾಧಕ!
ಅಂದು ಡೆಕ್ಕನ್ ತಂಡದಲ್ಲಿದ್ದ ರೋಹಿತ್ ಶರ್ಮ ಇಂದಿನ ತಮ್ಮ ತಂಡವಾದ ಮುಂಬೈ ಇಂಡಿಯನ್ಸ್ ವಿರುದ್ಧ ಹ್ಯಾಟ್ರಿಕ್ ಸಾಧನೆಗೈದದ್ದು ವಿಶೇಷವಾಗಿತ್ತು. ಐಪಿಎಲ್ ಋತುವಿನಲ್ಲಿ 3 ಹ್ಯಾಟ್ರಿಕ್‌ಗಳ ಮತ್ತೂಂದು ನಿದರ್ಶನ 2017ರಲ್ಲಿ ಕಾಣಸಿಗುತ್ತದೆ. ಅಂದು ಸಾಮ್ಯುಯೆಲ್ ಬದ್ರಿ (ಆರ್‌ಸಿಬಿ), ಆ್ಯಂಡ್ರೂ ಟೈ (ಗುಜರಾತ್) ಮತ್ತು ಜೈದೇವ್ ಉನಾದ್ಕತ್ (ಪುಣೆ) ಸತತ 3 ಎಸೆತಗಳಲ್ಲಿ 3 ವಿಕೆಟ್ ಉಡಾಯಿಸಿದ್ದರು. ಕ್ರಮವಾಗಿ ಮುಂಬೈ, ಪುಣೆ ಹಾಗೂ ಹೈದರಾಬಾದ್ ವಿರುದ್ಧ ಇವರ ಸಾಧನೆ ದಾಖಲಾಯಿತು. ಅತ್ಯಧಿಕ ಹ್ಯಾಟ್ರಿಕ್
ಐಪಿಎಲ್‌ನಲ್ಲಿ ಅತ್ಯಧಿಕ 3 ಹ್ಯಾಟ್ರಿಕ್ ಸಾಧಿಸಿದ ದಾಖಲೆ ಅಮಿತ್ ಮಿಶ್ರಾ ಹೆಸರಲ್ಲಿದೆ. ಇದು ಪ್ರತ್ಯೇಕ ವರ್ಷಗಳಲ್ಲಿ, ಪ್ರತ್ಯೇಕ ತಂಡಗಳ ಪರ ದಾಖಲಾಗಿದೆ. 2008ರಲ್ಲಿ ಡೆಲ್ಲಿ, 2011ರಲ್ಲಿ ಡೆಕ್ಕನ್, 2013ರಲ್ಲಿ ಹೈದರಾಬಾದ್ ಪರ ಆಡಿದ ಮಿಶ್ರಾ ಕ್ರಮವಾಗಿ ಡೆಕ್ಕನ್, ಪಂಜಾಬ್ ಹಾಗೂ ಪುಣೆ ವಿರುದ್ಧ ಹ್ಯಾಟ್ರಿಕ್ ಸಾಧಿಸಿದರು.