Advertisement

ಜ. 26 ರಿಂದ ಪಕ್ಷ ಸಂಘಟನೆಗೆ ‘ಹಾತ್ ಸೇ ಹಾತ್ ಜೋಡೋ’ಅಭಿಯಾನ: ದಿನೇಶ್ ಗುಂಡೂರಾವ್

06:26 PM Dec 18, 2022 | Team Udayavani |

ಪಣಜಿ: ಬಿಜೆಪಿ ವಿರುದ್ಧ ಹೋರಾಡಲು ಮತ್ತು ಪಕ್ಷವನ್ನು ಬಲಪಡಿಸಲು ಜನವರಿ 26 ರಿಂದ ‘ಹಾತ್ ಸೇ ಹಾತ್ ಜೋಡೋ’ ಅಭಿಯಾನವನ್ನು ಪ್ರಾರಂಭಿಸಲಿದೆ ಎಂದು ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದರು. ಬಿಜೆಪಿಯು ಸ್ಥಳೀಯರಿಂದ ಹಿಡಟಿದು ಕೇಂದ್ರದವರೆಗಿನ ನಾಯಕರು  ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಇಂತವರು  ನಮಗೆ ಧರ್ಮ ಕಲಿಸುವ ಅಗತ್ಯವಿಲ್ಲ ಎಂದು ಗೋವಾ ರಾಜ್ಯ ಕಾಂಗ್ರೇಸ್ ಪ್ರಭಾರಿ ದಿನೇಶ್ ಗುಂಡೂರಾವ್ ಟೀಕಿಸಿದರು.

Advertisement

ಪಣಜಿಯ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ದಬ್ಬಾಳಿಕೆ ನಡೆಸುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ. ಇದಕ್ಕಾಗಿ ಜನವರಿ 1ರಿಂದ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಜನಸಂಪರ್ಕ ಅಭಿಯಾನ, ಜನವರಿ 26ರಿಂದ ಹಾತ್ ಸೇ ಹಾತ್ ಜೋಡೋ ಅಭಿಯಾನ ಆರಂಭಿಸಲಾಗುವುದು. ಈ ಅಭಿಯಾನದಡಿ ರಾಜ್ಯದ ಎಲ್ಲ ಜನರನ್ನು ತಲುಪಲು ಕಾಂಗ್ರೆಸ್ ಪ್ರಯತ್ನಿಸಲಿದೆ. ಗೋವಾದಲ್ಲಿ ಗಣಿಗಾರಿಕೆ ಆರಂಭಿಸಲು ಸರ್ಕಾರ ನಡೆಯುತ್ತಿರುವ ಪ್ರಯತ್ನಗಳು ಸ್ವಾಗತಾರ್ಹವಾದರೂ ಪ್ರಸ್ತುತ ಇ-ಹರಾಜುಗಳು ಯಶಸ್ವಿಯಾಗುತ್ತವೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಹಿಂದಿನ ಹರಾಜುಗಳು ವಿಫಲವಾಗಿವೆ. ಗಣಿಗಾರಿಕೆ ಆರಂಭವಾಗುವ ಬಗ್ಗೆ ಅನುಮಾನವಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಹದಾಯಿ ನದಿ ನೀರನ್ನು ಕರ್ನಾಟಕ ಸರ್ಕಾರ ತಿರುಗಿಸಿದೆ ಎಂದು ಗೋವಾ ಫಾರ್ವರ್ಡ್ ಮಾಡಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ಕರ್ನಾಟಕದ ಕಾಂಗ್ರೆಸ್ ಅಲ್ಲಿನ ಜನರೊಂದಿಗೆ ನಿಲ್ಲುತ್ತದೆ. ಇದು ಅಲ್ಲಿನ ಸ್ಥಳೀಯ ಜನರು ಮತ್ತು ಸರ್ಕಾರದ ನಿರ್ಧಾರವಾಗಿರುತ್ತದೆ ಮತ್ತು ಎಲ್ಲರೂ ಗೌರವಿಸಬೇಕು ಎಂದರು.

ಇದನ್ನೂ ಓದಿ: ‘ಎಮರ್ಜೆನ್ಸಿ’… ಸಂಸತ್‌ನಲ್ಲಿ ಚಿತ್ರೀಕರಣಕ್ಕೆ ಅನುಮತಿ ಕೋರಿದ ಬಾಲಿವುಡ್ ನಟಿ ಕಂಗನಾ

Advertisement

Udayavani is now on Telegram. Click here to join our channel and stay updated with the latest news.

Next