Advertisement
ಸ್ಟ್ರಾ ಹ್ಯಾಟ್ಸ್ ಅಂದರೆ ಒಣಹುಲ್ಲಿನ ಟೊಪ್ಪಿಗಳು. ಚಳಿಗಾಲದಲ್ಲಿ ಅಥವಾ ಮಳೆಗಾಲದಲ್ಲಿ ಉಪಯೋಗಕ್ಕೆ ಬಾರದ ಈ ಟೊಪ್ಪಿಗಳಿಗೆ ಬೇಡಿಕೆ ಬರುವುದು ಬೇಸಿಗೆಯಲ್ಲಿ. ಬಿಸಿಲಿನ ಬೇಗೆ ತಡೆಯಲು ಛತ್ರಿ ಜೊತೆಗಿರದಿದ್ದರೆ, ಆರಾಮಾಗಿ ಈ ಟೊಪ್ಪಿಯ ಮೊರೆ ಹೋಗಬಹುದು.
ಬುಟ್ಟಿಯನ್ನು ಹೆಣೆಯಲು ಬಳಸುವ ವಸ್ತುವಿನಿಂದ ಈ ಟೊಪ್ಪಿಯನ್ನು ತಯಾರಿಸಲಾಗುತ್ತದೆ. ಜೂಟ್ ಅಂದರೆ, ಗೋಣಿನಾರು, ಹಸಿಬೆ, ಹಗ್ಗ, ಗೋಣಿತಟ್ಟು, ಮೊದಲಾದವನ್ನು ತಯಾರಿಸಲು ಬಳಸುವ ಸೆಣಬಿನ ಜಾತಿಯ ಗಿಡಗಳ ತೊಗಟೆಯ ನಾರಿನಿಂದ ತಯಾರಿಸಲ್ಪಡುವ ಈ ಟೊಪ್ಪಿಗಳನ್ನು “ಸ್ಟ್ರಾ ಹ್ಯಾಟ್ಸ್’ ಎನ್ನುತ್ತಾರೆ. ಹುಲ್ಲಿನ ವರ್ಗಕ್ಕೆ ಸೇರಿದ ಲಾವಂಚ ಅಥವಾ ರಾಮಂಚದಿಂದಲೂ ಇದನ್ನು ತಯಾರಿಸಲಾಗುತ್ತದೆ. ತಲೆ ಮೇಲೆ ಅಲಂಕಾರ
ಈ ಸ್ಟ್ರಾ ಹ್ಯಾಟ್‌ಗಳು ಫ್ಯಾಷನ್ ಲೋಕದಲ್ಲಿ ಸದ್ಯಕ್ಕೆ ಟ್ರೆಂಡ್ ಆಗುತ್ತಿವೆ. ಸ್ಟ್ರಾ ಹ್ಯಾಟ್ ಮೇಲೆ ರಿಬ್ಬನ್, ಬೋ ಟೈ, ಹೂವು, ಟ್ಯಾಸೆಲ…, ಪುಟ್ಟದಾದ ಬೊಂಬೆ, ಲೇಸ್, ಚಿತ್ರ-ವಿಚಿತ್ರ ಆಕೃತಿಗಳು, ಬೆಲ್ಟ…, ಮುಂತಾದ ಅಲಂಕಾರಿಕ ವಸ್ತುಗಳನ್ನು ಹೊಲಿದು ಅಥವಾ ಜೋಡಿಸಿ ಟೊಪ್ಪಿಯ ಅಂದವನ್ನು ಹೆಚ್ಚಿಸಲಾಗುತ್ತದೆ.
Related Articles
ಬರೀ ಮುಖಕ್ಕಷ್ಟೇ ನೆರಳು ಬೀಳುವ ಚಿಕ್ಕ ಸ್ಟ್ರಾ ಹ್ಯಾಟ್‌ಗಳಲ್ಲದೆ, ಭುಜದಷ್ಟು ಅಗಲವಿರುವ ಇಡೀ ಮೈ ಮೇಲೆ ನೆರಳು ಬೀಳುವಷ್ಟು ದೊಡ್ಡ ಗಾತ್ರದ ಸ್ಟ್ರಾ ಹ್ಯಾಟ್‌ಗಳೂ ಲಭ್ಯ ಇವೆ. ಹಾಗಾಗಿ, ಆಯಾ ದಿರಿಸಿಗೆ ಹೋಲುವಂಥ ಟೊಪ್ಪಿಗಳನ್ನು ಧರಿಸಬಹುದು. ವೈಡ್ ಬ್ರಿಮ…, ಫ್ಲಾಟ್ ಬ್ರಿಮ…, ಕೌ ಬಾಯ್ ಸ್ಟೈಲ…, ಮೆಶ್ ಫ್ಲವರ್, ಚಾರ್ಲಿ ಹಾರ್ಸ್, ಸ್ಟ್ರೀಟ್ ಸ್ಟೈಲ…, ಸ್ಟೆಟ್ಸನ್, ರಾಕ್ಸಿ, ಫೆಡೋರಾ, ಬೋಟರ್, ಕ್ರೋಶಾ, ಓವರ್ ಸೈಜ್x, ಇಂಗ್ಲಿಷ್, ಸ್ಟ್ರಿಂಗ್ ಹೀಗೆ ಊಹಿಸಲೂ ಸಾಧ್ಯವಿಲ್ಲದಷ್ಟು ಆಯ್ಕೆಗಳಿವೆ. ಒಂದೇ ಬಣ್ಣದ ಬೋರಿಂಗ್ ಆಯ್ಕೆಯಲ್ಲದೆ ಬಣ್ಣ ಬಣ್ಣದ ಸ್ಟ್ರಾ ಹ್ಯಾಟ್ ಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ
Advertisement
ಅದಿತಿಮಾನಸ ಟಿ.ಎಸ್.