ಹಾಸನ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ರ್ಥಿಯೂ ಸೇರಿದಂತೆ ಒಟ್ಟು 16 ಮಂದಿಗೆ ಜಿಲ್ಲೆಯಲ್ಲಿ ಶನಿವಾರ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 331ಕ್ಕೇರಿದೆ. ಶನಿವಾರ ಎಂಟು ಪ್ರದೇಶಗಳನ್ನು ಸೀಲ್‌ಡೌನ್ ಮಾಡಿ ಕಂಟೈನ್‌ಮೆಂಟ್ ವಲಯಗಳೆಂದು ಘೋಷಿಸಲಾಗಿದೆ. ಡೆಂ à ಜ್ವರದಿಂದ ಬಳಲುತ್ತಿದ್ದ ಅರಕಲ ಗೂಡು ತಾಲೂಕು ಮಲ್ಲಿಪಟ್ಟಣ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ಪರೀಕ್ಷಾ ರ್ಥಿಗೆ ಸೋಂಕು ದೃಢಪಟ್ಟಿದ್ದು, ಪರೀಕ್ಷಾ ಕೇಂದ್ರದಿಂದಲೇ ಆ ವಿದ್ಯಾರ್ಥಿಯನ್ನು ಹಾಸನ ಕೋವಿಡ್ 19 ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ.
ಸೋಂಕು ದೃಢಪಟ್ಟಿರುವ ವಿದ್ಯಾರ್ಥಿ ಜೊತೆ ಪರೀಕ್ಷೆ ಬರೆದಿದ್ದ 18 ವಿದ್ಯಾರ್ಥಿಗಳು ಹಾಗೂ ಆ ಕೊಠಡಿಯ ಮೇಲ್ವಿಚಾರಕರನ್ನು ಪರೀಕ್ಷೆಗೊಳಪಡಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಆಯುಕ್ತರನ್ನು ಸಂಪರ್ಕಿಸ ಲಾಗಿದೆ. ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಶನಿವಾರ ಕೋವಿಡ್ 19 ಸೋಂಕು ದೃಢಪಟ್ಟಿ ರುವ 16 ಜನರ ಪೈಕಿ 6 ಮಂದಿ ಅರಸೀಕೆರೆ ತಾಲೂಕು ಮೂಲದವರಾಗಿದ್ದು, ಎರಡು ದಿನಗಳ ಹಿಂದೆ ಬಿಎಂಟಿಸಿ ಬಸ್ ಚಾಲಕನ ಮನೆಯ 4 ಮಂದಿಗೆ ಸೋಂಕು ತಗುಲಿದೆ. ಹಾಸನದ ಪೊಲೀಸ್ ಕಾನ್‌ಸ್ಟೆಬಲ್‌ನ ಮೂಲಕ ಅವರ ಮನೆಯ ಇಬ್ಬರಿಗೂ ಸೋಂಕು ಹರಡಿದೆ.
ಹೊಳೆನರಸೀಪುರ ತಾಲೂಕಿನ ನಾಲ್ವರ ಪೈಕಿ ಮೈಸೂರು ಜಿಲ್ಲೆ ಸಾಲಿಗ್ರಾಮದ ವ್ಯಕ್ತಿಯೊಬ್ಬರು ಹರ್ನಿಯಾಕ್ಕೆ ಶಸ್ತ್ರ ಚಿಕಿತ್ಸೆಗೆ ಬಂದಾಗ ಪರೀಕ್ಷೆಗೊಳಿಸಿದ ಸಂದರ್ಭದಲ್ಲಿ ಕೋವಿಡ್ 19 ಪತ್ತೆಯಾಗಿದೆ. 26 ವರ್ಷದ ಮಹಿಳೆಯ ಪತಿ ಬೆಂಗಳೂರಿನ ಗಾರ್ಮೆಟ್ಸ್‌ನಲ್ಲಿದ್ದು ಆಕೆ ಚಿಕಿತ್ಸೆಗಾಗಿ ಹಾಸನಕ್ಕೆ ಬಂದಿದ್ದಾಗ ಕೋವಿಡ್ 19 ಸೋಂಕಿರುವುದು ದೃಢಪಟ್ಟಿದೆ. ಇನ್ನೊಬ್ಬರು ಮೂತ್ರಕೋಶ ದಲ್ಲಿನ ಕಲ್ಲು ತೆಗೆಸುವ ಶಸ್ತ್ರ ಚಿಕಿತ್ಸೆಗೆ ಬಂದಿ ದ್ದಾಗ ಸೋಂಕು ಪತ್ತೆಯಾಗಿದ್ದು, ಮತ್ತೂಬ್ಬರು ಡಯಾಲಿಸಿಸ್‌ಗೆ ಹೊಳೆನರಸೀಪುರ ಆಸ್ಪತ್ರೆಗೆ ಬಂದಿದ್ದ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದೆ ಎಂದು ವಿವರ ನೀಡಿದರು.
ಅರಕಲಗೂಡಿನ ಮೂವರಿಗೆ ಸೋಂಕು: ಅರಕಲಗೂಡು ತಾಲೂಕಿನ ಮೂವರಿಗೆ ಸೋಂಕು ದೃಢಪಟ್ಟಿದ್ದು, ಆ ಪೈಕಿ ಒಬ್ಬರು ಹರ್ನಿಯಾ ಶಸ್ತ್ರ ಚಿಕಿತ್ಸೆಯ ನಂತರ ಜ್ವರ ಕಾಣಿಸಿಕೊಂಡಿತ್ತು. ಅವರನ್ನು ಪರೀಕ್ಷೆಗೊಳ ಪಡಿಸಿದಾಗ ಸೋಂಕು ದೃಡಪಟ್ಟಿದೆ. ಒಬ್ಬ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಡೆಂ à ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಶುಕ್ರವಾರ ಆತನ ಗಂಟಲು ದ್ರವವನ್ನು ಪರೀಕ್ಷೆಗೆ ಪಡೆಯಲಾಗಿತ್ತು. ಶನಿವಾರ ಆತನಿಗೆ ಕೋವಿಡ್ 19 ದೃಢ ಪಟ್ಟಿದೆ.
ಮತ್ತೂಬ್ಬರು ಉಸಿರಾ ಟದ ತೊಂದರೆಗಾಗಿ ಅರಕಲಗೂಡು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದಾಗ ಕೋವಿಡ್ 19 ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹಾಸನದ ಇಬ್ಬರಿಗೆ ಸೋಂಕು: ಹಾಸನ ತಾಲೂಕಿನ ಇಬ್ಬರ ಪೈಕಿ ಒಬ್ಬರು ಜ್ವರದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗಿದ್ದಾಗ ಕೋವಿಡ್ 19 ಸೋಂಕಿರುವುದು ದೃಢಪಟ್ಟಿದ್ದರೆ, ಇನ್ನೊಬ್ಬರು ಬೆಂಗಳೂರಿನಲ್ಲಿ ಮೀಟಿಂಗ್‌ಗೆ ಹೋಗಿ ವಾಪಸಾಗಿದ್ದರು. ಅವರಲ್ಲಿ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗೆಂದು ಹೋಗಿ ದ್ದಾಗ ಕು ದೃಢಪಟ್ಟಿದೆ ಎಂದರು.
320 ಮಂದಿಗೆ ಪರೀಕ್ಷೆ: ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್ 19 ರೋಗ ಲಕ್ಷಣಗಳಿ ರುವ 320 ಜನರನ್ನು ಪರೀಕ್ಷೆಗೊಳಪಡಿಸ ಲಾಗುತ್ತಿದೆ ಎಂದ ಜಿಲ್ಲಾಧಿಕಾರಿಯವರು, ಜಿಲ್ಲೆಯಲ್ಲಿ ಶನಿವಾರ ಹೊಳೆನರಸೀಪುರ ತಾಲೂಕಿನಲ್ಲಿ 3, ಅರಕಲಗೂಡು ತಾಲೂಕಿ ನಲ್ಲಿ 3, ಹಾಸನ ತಾಲೂಕಿನಲ್ಲಿ 2 ಪ್ರದೇಶ ಗಳನ್ನು ಕಂಟೈನ್‌ಮೆಂಟ್ ವಲಯಗಳೆಂದು ಘೋಷಿಸಲಾಗಿದೆ. ಇದುವರೆಗೂ ಜಿಲ್ಲೆ ಯಲ್ಲಿ ಒಟ್ಟು 30 ಪ್ರದೇಶಗಳನ್ನು ಕಂಟೈನ್‌ಮೆಂಟ್ ವಲಯಗಳೆಂದು ಘೋಷಣೆ ಮಾಡಲಾಗಿದೆ ಎಂದರು.