Advertisement

3 ಪ್ರತ್ಯೇಕ ಕಳವು ಪ್ರಕರಣ: ಐವರ ಸೆರೆ

07:27 PM Mar 05, 2021 | Team Udayavani |

ಹಾಸನ: ಹೊಳೆನರಸೀಪುರ ಪೊಲೀಸ್‌ ಉಪವಿಭಾಗ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಪತ್ಯೇಕ ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು,20.50 ಲಕ್ಷ ರೂ. ಮೌಲ್ಯದ ಸ್ತತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಲಾರಿ, ಟ್ರ್ಯಾಕ್ಟರ್‌ ವಶ: ಒಂದೂವರೆ ವರ್ಷದ ಹಿಂದೆ ಟ್ರ್ಯಾಕ್ಟರ್‌ ಮತ್ತು ಲಾರಿಯನ್ನು ಕಳವು ಮಾಡಿದ್ದ ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿ, ಎಚ್‌.ಆಲದಹಳ್ಳಿಯ ರೂಪೇಶ(34) ಮತ್ತು ಚನ್ನರಾಯಪಟ್ಟಣ ತಾಲೂಕು, ಡಂಡಿಗನಹಳ್ಳಿ ಹೋಬಳಿ ಕುಂದೂರು ಗ್ರಾಮದ ಗೌರೀಶ(34) ಎಂಬವರನ್ನು ಬಂಧಿಸಿ ಲಾರಿ ಮತ್ತು ಟ್ರ್ಯಾಕ್ಟರ್‌ ಅನ್ನು ವಶಕ್ಕೆ ಪಡೆಯಲಾಗಿದೆ.

ಹೊಳೆನರಸೀಪುರ ಗ್ರಾಮಾಂತರ ಠಾಣೆಯ ಪಿಎಸ್‌ಐ ವಿನಯ್‌ ಮತ್ತು ಸಿಬ್ಬಂದಿ ಎರಡು ದಿನಗಳ ಹಿಂದೆ ಹೊಳೆನರಸೀಪುರ-ಚನ್ನರಾಯಪಟ್ಟಣ ಮಂಗಳಾಪುರ ಗೇಟ್‌ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್‌ನ ನಂಬರ್‌ ಪ್ಲೇಟ್‌ ಉಜ್ಜಿರುವುದು ಕಂಡು ಬಂತು. ಟ್ರ್ಯಾಕ್ಟರ್‌ನಲ್ಲಿದ್ದ ಇಬ್ಬರನ್ನು ದಾಖಲಾತಿಗಳನ್ನು ಕೇಳಿದಾಗ ಇರಲಿಲ್ಲ. ಅವರಿಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಿದಾಗ ಟ್ರ್ಯಾಕ್ಟರ್‌ ಮತ್ತು ಲಾರಿ ಕಳವು ಮಾಡಿದ್ದನ್ನು ಒಪ್ಪಿಕೊಂಡರು ಎಂದು ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಶ್ರೀನಿವಾಸಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಂಧಿತ ಆರೋಪಿ ರೂಪೇಶ ಅಂತಾರಾಜ್ಯ ಸೇರಿ 13 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆರೋಪಿಗಳು ಲಾರಿಯನ್ನು ಉಡುಪಿ ಜಿಲ್ಲೆ, ಬೆಂದೂರು ಸಮೀಪದ ಶಿರೂರು ಗ್ರಾಮದ ಒಂದುಗ್ಯಾರೇಜ್‌ ಬಳಿಯಿಂದ ಒಂದೂವರೆ ವರ್ಷದ ಹಿಂದೆ ಕಳವು ಮಾಡಿದ್ದರು. ಆ ಲಾರಿಯನ್ನುಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಮಾರಾಟ ಮಾಡಿದ್ದರು. ಹಾಸನದ ಬೈಪಾಸ್‌ ರಸ್ತೆಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್‌ಅನ್ನು 17 ತಿಂಗಳ ಹಿಂದೆ ಕಳವು ಮಾಡಿದ್ದರು ಎಂದು ವಿವರ ನೀಡಿದರು.

ಮನೆಗಳ್ಳನ ಬಂಧನ: ಹೊಳೆನರಸೀಪುರತಾಲೂಕು, ಬಂಡಿಶೆಟ್ಟಿಹಳ್ಳಿಯ ಲಕ್ಷ್ಮಮ್ಮಎಂಬುವರು ಫೆ.28 ರಂದು ಬೆಳಗ್ಗೆ ಮನೆಗೆಬೀಗ ಹಾಕಿಕೊಂಡು ಕೂಲಿ ಕೆಲಸಕ್ಕೆ ಹೋಗಿದ್ದಾಗ ಆಕೆಯ ಮನೆಯಲ್ಲಿ 31ಸಾವಿರ ರೂ. ನಗದು ಮತ್ತು ಒಂದು ಲಕ್ಷರೂ. ನಗದು ಕಳವಾಗಿತ್ತು. ಲಕ್ಷ್ಮಮ್ಮ ಅವರು ನೀಡಿದ ಸುಳಿವಿನ ಮೇರೆಗೆ ಅದೇ ಗ್ರಾಮದ ದೊರೆ ಎಂಬಾತನನ್ನು ಬಂಧಿಸಿ ಆತ ಕಳವುಮಾಡಿದ್ದ ನಗದು ಮತ್ತು ಸ್ವತ್ತು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

Advertisement

ಮನೆ ದೋಚಿದ್ದ ಕೆಲಸಗಾರರ ಸೆರೆ:ಜಮೀನಿನ ಕೆಲಸಕ್ಕೆ ಬಂದು ಮಾಲಿಕರಿಲ್ಲದ ಸಮಯದಲ್ಲಿ 3 ಲಕ್ಷ ರೂ. ಚಿನ್ನಾಭರಣ, 25ಸಾವಿರ ರೂ. ನಗದು, ಒಂದು ಬೈಕ್‌ ಅನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಗದಗ ಜಿಲ್ಲೆ, ಶಿರಹಟ್ಟಿ ತಾಲೂಕು,ಚನ್ನಪಟ್ಟಣ ಗ್ರಾಮದ ಹುಲಿಗಪ್ಪ ಉರುಫ್ರಘು (32), ಧಾರವಾಡದ ಅಂಬೇಡ್ಕರ್‌ನಗರ, ಯಾಲಕ್ಕಿ ಶೆಟ್ಟರ ಕಾಲೋನಿಯ ಬಾಬುರಾವ್‌ ಚವ್ಹಾಣ್‌ ಎಂಬವರುಅರಕಲಗೂಡು ತಾಲೂಕು ರಂಗಾಪುರದಎಂ.ಶಿವಲಿಂಗಯ್ಯ ಎಂಬವರ ಜಮೀನಿನಲ್ಲಿ ಫೆ.7 ರಂದು ಕೆಲಸಕ್ಕೆ ಸೇರಿಕೊಂಡು ಮನೆಯ ಶೆಡ್‌ನ‌ಲ್ಲಿ ವಾಸವಿದ್ದರು.

ಫೆ.23 ರಂದು ಸಂಜೆಶಿವಲಿಂಗಯ್ಯ ಅವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಕುಶಾಲನಗರಕ್ಕೆ ಸಂಬಂಧಿಕರ ಮದುಗೆ ಹೋಗಿದ್ದರು. ಆ ದಿನ ರಾತ್ರಿ ಹುಲಿಗಪ್ಪ ಮತ್ತುಬಾಬುರಾವ್‌ ಚವ್ಹಾಣ್‌ ಶಿವಲಿಂಗಯ್ಯಅವರ ಮನೆಯ ಬೀಗ ಮುರಿದು ಬೀರುವಿನಲ್ಲಿಟ್ಟಿದ್ದ 2,99,000 ರೂ. ಮೌಲ್ಯದಚಿನ್ನಾಭರಣ, 25 ಸಾವಿರ ರೂ. ನಗದು,ಒಂದು ಬೈಕ್‌ ಅನ್ನು ಕಳವು ಮಾಡಿಕೊಂಡು ಹೋಗಿದ್ದರು. ಅರಕಲಗೂಡು ಪೊಲೀಸ್‌ಇನ್ಸ್‌ಪೆಕ್ಟರ್‌ ಸತ್ಯನಾರಾಯಣ, ಪಿಎಸ್‌ಐಮಾಲಾ, ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ಸ್ವತ್ತು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿಯವರು ಹೇಳಿದರು.ಎ.ಎಸ್ಪಿ ಬಿ.ಎನ್‌.ನಂದಿನಿ, ಹೊಳೆನರಸೀಪುರಡಿವೈಎಸ್ಪಿ ಲಕ್ಷ್ಮೇಗೌಡ, ಇನ್‌ಸ್ಪೆಕ್ಟರ್‌ಗಳಾದ ಸತ್ಯನಾರಾಯಣ, ಆರ್‌.ಪಿ. ಅಶೋಕ್‌ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next