ಹಾಸನ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ, ಕಾರ್ಮಿಕ ವಿರೋಧಿ ಕಾಯ್ದೆ ಗಳ ಬಗ್ಗೆ ಜನಜಾಗೃತಿ ಮೂಡಿಸಲು ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು, ಎಸ್‌ಎಫ್ಐ, ಡಿವೈಎಫ್ಐ ಮತ್ತಿತರ ಸಂಘಟನೆಗಳು ಜಾಥಾ ಹಮ್ಮಿಕೊಂಡಿವೆ.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಗುರುವಾರ ಜಾಥಾಕ್ಕೆ ಚಾಲನೆ ನೀಡಿದ ಸಂಘಟನೆಗಳ ಮುಖಂಡರು, ಮೊದಲು ಕೇಂದ್ರ ಸರಕಾರ ಜಾರಿಗೆತಂದಿರುವ ಕಾಯ್ದೆಗಳ ವಿರುದ್ದ ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಹೋರಾಟದಲ್ಲಿ ಭಾಗಿಯಾಗಿದ್ದಾಗಲೇ 101 ರೈತರು ಹುತಾತ್ಮರಾಗಿದ್ದಾರೆ.
ಎನ್‌ಡಿಎ ಸರ್ಕಾರ ಅಂಗಿಕರಿಸಿರುವ ಕೃಷಿ ಕಾಯ್ದೆಗಳು ರದ್ದಾಗಬೇಕು. 29 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಅಗತ್ಯ ಸರಕುಗಳ ತಿದ್ದುಪಡಿ ಕಾಯಿದೆ-2020ರಲ್ಲಿ ಆಹಾರ ಧಾನ್ಯಗಳು, ದ್ವಿದಳ ಧಾನ್ಯಗಳು, ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳು, ಆಲೂಗೆಡ್ಡೆ ಹಾಗೂ ಈರುಳ್ಳಿ ಇವುಗಳನ್ನು ಅಗತ್ಯ ಸರಕುಗಳ ಪಟ್ಟಿಯಿಂದ ತೆಗೆದು ಹಾಕಿದೆ.
ಇದನ್ನೂ ಓದಿ:ಗಂಡನ ಮೇಲಿನ ಸಿಟ್ಟಿಗೆ ಮಗುವನ್ನೇ ಕೊಂದ ಪತ್ನಿ
ಈ ವಸ್ತುಗಳನ್ನು ಎಷ್ಟು ಬೇಕಾದರೂ ದಾಸ್ತಾನು ಮಾಡಬಹುದು, ಎಲ್ಲಿಗೆ ಬೇಕಾದರೂ ಸಾಗಿಸಿ ಯಾರಿಗೆ ಬೇಕಾದರೂ ಮಿತಿಯಿಲ್ಲದೇ ಮಾರಾಟ, ರಪು¤ ಮಾಡಬಹುದಾಗಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ವಹಿಸುಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಸಿ ಲೂಟಿ ಮಾಡಲು ವರ್ತಕರಿಗೆ ಮುಕ್ತ ಅವಕಾಶವಾಗಿದೆ ಎಂದು ದೂರಿದರು.ಕೇಂದ್ರ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧಿ ಮತ್ತು ರೈತಇನ್ನೊಂದಡೆ ಜನತೆಯ ಹಕ್ಕುಗಳ ದಮನದಲ್ಲೂ ನಿರತವಾಗಿದೆ.
ಭಾರತ ಪ್ಯಾಕೇಜ್ ಸಾಮಾನ್ಯ ಜನತೆಯ ಸಂಕಷ್ಟಕ್ಕೆ ನೆರವಾಗಲಿಲ್ಲ. ಬದಲಾಗಿ ಕಾರ್ಪೊರೇಟ್ ಕುಳಗಳಿಗೆ ನೆರವಾಗಿದೆ ಎಂದು ಆರೋಪಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಕೆಪಿಆರ್ ಎಸ್ ಜಿಲ್ಲಾ ಅಧ್ಯಕ್ಷ ಎಚ್.ಆರ್.ನವೀನ್ ಕುಮಾರ್, ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ಮುಖಂ ಮಹಮದ್ ಸಾದಿಕ್, ರಾಜಶೇಖರ್. ಎಂ.ಜಿ. ಪೃಥ್ವಿ, ಅರಂದ್, ಎಂ.ಬಿ. ಪುಷ್ಪ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.