ಹಾಸನ: ಜಿಲ್ಲೆಯಲ್ಲಿ ಬುಧವಾರವೂ 28 ಮಂದಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 426 ಕ್ಕೇರಿದೆ. ಸೋಂಕು ಪೀಡಿತ ಯುವಕನೊಬ್ಬ ಮೃತಪಟ್ಟಿದ್ದು, ಕೋವಿಡ್ 19 ಸೋಂಕಿನಿಂದ ಸತ್ತವರ ಸಂಖ್ಯೆ ಜಿಲ್ಲೆಯಲ್ಲಿ 4ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕಂಟೈನ್‌ಮೆಂಟ್ ಝೋನ್‌ಗಳ ಸಂಖ್ಯೆಯೂ ಏರುತ್ತಿದ್ದು, ಬುಧವಾರದವರೆಗೆ 71 ಕಂಟೈನ್‌ಮೆಂಟ್ ಝೋನ್‌ಗಳನ್ನು ಮಾಡಲಾಗಿದೆ. ಆ ಪೈಕಿ 11 ಝೋನ್‌ಗಳನ್ನು ಡೀ ನೋಟಿಫೈ ಮಾಡಲಾ ಗಿದ್ದು, ಜಿಲ್ಲೆಯಲ್ಲಿ 60 ಪ್ರದೇಶಗಳನ್ನು ಸೀಲ್ ಡೌನ್ ಮಾಡಿ ಕಂಟೈನ್‌ಮೆಂಟ್‌ಝೋನ್ ಗಳೆಂದು ಘೋಷಣೆ ಮಾಡಲಾಗಿದೆ. ಬುಧ ವಾರ ಒಂದೇ ದಿನ 13 ಪ್ರದೇಶಗಳನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಸೋಂಕಿತರ ಪರೀಕ್ಷೆ: ಸೋಂಕು ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ಶೀತ, ಜ್ವರ ಇದ್ದವರ ಪರೀಕ್ಷೆ ನಡೆಸಿದಾಗ ಐವರಲ್ಲಿ ಸೋಂಕು ದೃಢಪಟ್ಟಿದೆ. ಕೋವಿಡ್ 19 ಸೋಂಕಿತರ ಸಂಬಂಧಿಕರು, ಪ್ರಾಥಮಿಕ ಸಂಪರ್ಕಿತರಲ್ಲಿ 15 ಮಂದಿಗೆ ಉಸಿರಾಟದ ಸಮಸ್ಯೆಯಿದ್ದ ಒಬ್ಬರು, ಒಬ್ಬ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿ ದ್ದಾರೆ ಎಂದು ತಿಳಿಸಿದರು.
ಬುಧವಾರ ಸೋಂಕು ದೃಢಪಟ್ಟಿರುವ 28 ಜನರ ಪೈಕಿ ಅರಸೀಕೆರೆ ತಾಲೂಕಿನ 14 ಮಂದಿ, ಹಾಸನ ತಾಲೂಕಿನಲ್ಲಿ 6, ಹೊಳೆನರಸೀಪುರ ತಾಲೂಕಿನಲ್ಲಿ 4, ಆಲೂರು ತಾಲೂಕಿನ ಇಬ್ಬರು, ಚನ್ನರಾಯಪಟ್ಟಣ ಹಾಗೂ ಸಕಲೇಶ ಪುರ ತಾಲೂಕಿನ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎಂದು ಡೀಸಿ ವಿವರಿಸಿದರು. ಜಿಲ್ಲೆಯಲ್ಲಿ ದಿನೆ, ದಿನೇ ಕೋವಿಡ್ 19 ಪ್ರಕರಣ ಗಳು ಹೆಚ್ಚುತ್ತಿರು ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಬೇಕು.
ಅನಗತ್ಯವಾಗಿ ಅಲೆದಾಡಬಾರದು. ಚಿಕಿತ್ಸೆ ಅನಿವಾರ್ಯವಿದ್ದವರು ಆಸ್ಪತ್ರೆಗಳಿಗೆ ಬರಬೇಕು ಎಂದು ಮನವಿ ಮಾಡಿದರು. ಕೋವಿಡ್ 19 ಸೋಂಕಿನ ಬಗ್ಗೆ ಸಾರ್ವಜನಿಕ ರಲ್ಲಿ ಅರಿವು ಮೂಡಿಸಲಾಗುತ್ತಿದೆ. ಎಲ್ಲ ತಾಲೂಕುಗಳ ತಹಶೀಲ್ದಾರರು, ಪೌರ ಸಂಸ್ಥೆಗಳ ಮುಖ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದು, ಮಾಸ್ಕ್ ಧರಿಸದವರು ಹಾಗೂ ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ಅನುಸರಿಸದವರಿಗೆ ದಂಡ ವಿಧಿಸಲು ಸೂಚನೆ ನೀಡಲಾಗಿದೆ ಎಂದರು.
ಕ್ವಾರಂಟೈನ್ ಉಲ್ಲಂಘಿಸಿದರೆ ಕ್ರಮ: ಹೋಂ ಕ್ವಾರಂಟೈನ್‌ನಲ್ಲಿರುವವರು ಹೊರ ಬಂದು ಅಡ್ಡಾಡುವುದನ್ನು ತಡೆಯಲು ಜಿಯೋ ಫೆನ್ಸಿಂಗ್ ಅನುಸರಿಸಲಾಗುತ್ತಿದೆ. ಹೊರಬಂದವರ ಮೇಲೆ ಪ್ರಕರಣ ದಾಖಲು ಮಾಡುತ್ತಿದ್ದು, ಹಾಸನ ನಗರದಲ್ಲಿಯೇ ಮೂವರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ ಎಂದರು. ಡಿಎಚ್‌ಒ ಡಾ.ಸತೀಶ್‌ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಕೃಷ್ಣಮೂರ್ತಿ ಉಪಸ್ಥಿತರಿದ್ದರು