ಹಾಸನ: ರೈತರು ತೋಡಿದ್ದ ಖೆಡ್ಡಾಗೆ ಮರಿಯಾನೆಯೊಂದು ಬಿದ್ದಿರುವ ಘಟನೆ ಸಕಲೇಶಪುರ ತಾಲೂಕು ಹೊಸಕೊಪ್ಪಲಿನಲ್ಲಿ ಸೋಮವಾರ ನಡೆದಿದೆ.
ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ವಿಫಲವಾಗಿದೆ ಎಂದು ಹೊಸಕೊಪ್ಪಲಿನಲ್ಲಿ ಆನೆಗಳಿಗೆ ಡಿ.29 ರಂದು ಖೆಡ್ಡಾ ತೋಡುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದರು
ಭಾನುವಾರ ರಾತ್ರಿ ಹೊಸಕೊಪ್ಪಲು ಗ್ರಾಮದ ಮಹೇದ್ರ ಎಂಬುವರ ತೋಟದಲ್ಲಿ ಕಾಡಾನೆಗಳು ದಾಳಿ ನಡೆಸಿ ಹಾಳು ಮಾಡಿದ್ದವು. ಕಾಡಾನೆಗಳು ಭಾನುವಾರ ಮುಂಜಾನೆ ವಾಪಸ್ ಕಾಡಿನ ತೆರಳುವ ವೇಳೆ ಮರಿ ಆನೆ ಒಂದು ರೈತರು ತೋಡಿದ್ದ ಖೆಡ್ಡಾ ಬಿದ್ದಿದೆ. ಖೆಡ್ಡಾದಲ್ಲಿ ಬಿದ್ದಿದ್ದ ಮರಿಯಾನೆಯ ಆಕ್ರಂದನ ಮುಗಿಲು ಮುಟ್ಟಿದೆ.
ಅರಣ್ಯ ಇಲಾಖೆಗೆ ಮತ್ತು ಸರ್ಕಾರಕ್ಕೆ ಕಳೆದ ಹತ್ತಾರು ವರ್ಷಗಳಿಂದ ಮನವಿ ಮಾಡಿದರೂ ಕಾಡಾನಡಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಸರ್ಕಾರ ಮುಂದಾಗಲಿಲ್ಲ.ಹಾಗಾಗಿ ನಾವೇ ಈ ರೀತಿಯ ಹೊಸ ಯೋಜನೆ ಯನ್ನು ಮಾಡಿದ್ದೇವೆ ಆದರೆ ಮೂಖ ಪ್ರಾಣಿಗಳು ಎಂಬುದು ನಮಗೂ ಅರ್ಥವಾಗುತ್ತದೆ ಆದರೆ ಅದಕ್ಕೆ ಯಾವುದೇ ತೊಂದರೆಯಾಗದಂತೆ ಗುಂಡಿಗೆ ಬಿದ್ದಿರುವ ಮರಿಯಾನೆಗೆ ನೀರು, ಬೈನೆ ಸೊಪ್ಪು ಮತ್ತು ಇತರ ಆಹಾರಗಳನ್ನ ನೀಡುತ್ತಿದ್ದೇವೆ. ನೀವು ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಯಲ್ಲಿ ಈ ರೀತಿಯ ಖೆಡ್ಡಾ ತೋಡಿ ಆನೆಗಳನ್ನು ಬೀಳಿಸುತ್ತೇವೆ. ಅದಕ್ಕೆ ಅವಕಾಶ ಕೊಡದೆ ಅವುಗಳನ್ನು ತಾವು ಸುರಕ್ಷಿತವಾಗಿ ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂಬುದು ರೈತರ ಆಗ್ರಹವಾಗಿದೆ.