Advertisement

ಹಾಸನ: ಶತಕ ದಾಟಿದ ಕೋವಿಡ್‌ 19 ಸೋಂಕು

07:48 AM May 27, 2020 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರ  ಸಂಖ್ಯೆ ಮಂಗಳವಾರ 112ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ವರದಿಯಾದ ಎಲ್ಲಾ ಪಾಸಿಟಿವ್‌ ಪ್ರಕರಣಗಳು ಮಹಾರಾಷ್ಟ್ರದಿಂದ ಆಗಮಿಸಿದ ಚನ್ನರಾಪಟ್ಟಣ ತಾಲೂಕಿಗೆ ಸೇರಿದವರಾಗಿದ್ದಾರೆ.

Advertisement

ಸೋಂಕು ಪತ್ತೆಯಾದ ಎಲ್ಲರನ್ನೂ ಹಾಸನದ ಕೋವಿಡ್‌ 19 ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ದಾಖಲಾಗಿರುವ ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು. ಹಾಸನ ನಗರದ ಉತ್ತರಬಡಾವಣೆ ಹಾಗೂ ಬಿ. ಕಾಟೀಹಳ್ಳಿ ಪ್ರದೇಶಗಳನ್ನು ಕಂಟೈನ್‌ ಮೆಂಟ್‌ ಝೋನ್‌ಗಳೆಂದು ಗುರ್ತಿಸಿದ್ದು, ಉತ್ತರ ಬಡಾವಣೆಯಲ್ಲಿ ಒಬ್ಬ  ಮಹಿಳೆಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ.

ಅವರ ಸಂಪರ್ಕದಲ್ಲಿದ್ದ 5 ಜನರನ್ನು ಪ್ರಥಮ ಸಂಪರ್ಕಿತರನ್ನಾಗಿ ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರೆಲ್ಲರಿಗೂ ವರದಿ ನೆಗೆಟಿವ್‌ ಬಂದಿದೆ. ಬಿ. ಕಾಟೀಹಳ್ಳಿಯಲ್ಲಿ ಸೋಂಕು  ದೃಢಪಟ್ಟಿರುವ ಕೆಎಸ್‌ಆರ್‌ಪಿ ಪೇದೆಯ 21 ಜನರನ್ನು ಪ್ರಥಮ ಸಂಪರ್ಕಿತ ರನ್ನಾಗಿ ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ 17 ಮಂದಿಯ ವರದಿ ನೆಗೆಟೀವ್‌ ಬಂದಿದ್ದು, 4 ಜನರ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದರು.

ಕಂಟೈನ್ಮೆಂಟ್‌ ಝೋನ್‌ನಲ್ಲಿ ನಿಗಾ: ಸರ್ಕಾರದ ಆದೇಶದಂತೆ ಕಂಟೈನ್‌ಮೆಂಟ್‌ ಝೋನ್‌ ಗಳಲ್ಲಿ 28 ದಿನಗಳವರೆಗೆ ನಿರ್ಬಂಧವನ್ನು ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಆ ಪ್ರದೇಶದ ಜನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು  ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಂಟೈನ್‌ಮೆಂಟ್‌ ಝೋನ್‌ ಆ್ಯಪ್‌ ಮೂಲಕ ನಿರ್ಬಂಧಿತ ಪ್ರದೇಶದ ಪ್ರತಿಯೊಂದು ಮನೆಗಳನ್ನು ಗುರುತಿಸಿ ಭೇಟಿ ನೀಡಿ ಪ್ರತಿನಿತ್ಯ ಅವರ ಆರೋಗ್ಯ ಲಕ್ಷಣಗಳ ವರದಿ  ಪಡೆಯಲಾಗುತ್ತದೆ. ಎಂದರು.

ಒಬ್ಬರು ಗುಣಮುಖ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಒಬ್ಬರಿಗೆ ಸೋಂಕು ಗುಣವಾಗುತ್ತಿರುವ ಲಕ್ಷಣಗಳು ಕಂಡುಬರುತ್ತಿದ್ದು, ಎರಡು ಬಾರಿ ಪರೀಕ್ಷೆ ನಡೆಸಿ ವರದಿ ಬಂದ ನಂತರ ಗುಣಮುಖ ರಾಗಿರುವುದು  ಖಾತರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಗಿರೀಶ್‌ ಪ್ರತಿಕ್ರಿಯಿಸಿದರು.

Advertisement

ನಾಳೆ ಕೊಲ್ಕತ್ತಾಕ್ಕೆ ವಿಶೇಷ ರೈಲು: ಮೇ.28 ರಂದು ಪಶ್ವಿ‌ಮ ಬಂಗಾಳಕ್ಕೆ ಹೋಗುವವರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಹಾಸನದಿಂದ 945 ವಲಸೆ ಕಾರ್ಮಿಕರು ಹಾಗೂ ಮಡಿಕೇರಿಯಿಂದ ಸುಮಾರು 550 ಜನ  ಪ್ರಯಾಣಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸಗೌಡ ಮಾತ ನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ.  ಅಂತಹ ವರ ವಿರುದ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಒಬ್ಬರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next