Advertisement
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಕಾಮಗಾರಿ ಪ್ರಗತಿ ಹಾಗೂ ಕಾಮಗಾರಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ದರು. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಇರುವ ಅಡೆತಡೆಗಳನ್ನು ನಿವಾರಣೆ ಮಾಡಲಾಗುತ್ತಿದೆ ಎಂದರು.
Related Articles
Advertisement
ತ್ವರಿತವಾಗಿ ರಸ್ತೆ ಕಾಮಗಾರಿ ಮುಗಿಸುವಂತೆಯೂ ಸೂಚಿಸಲಾಗಿದೆ. ಅದಾದರೆ ಸುತ್ತಮುತ್ತಲ ರೈತರಿಗೆ ಅನುಕೂಲವಾಗಲಿದೆ. ಆ ನಂತರ ಕಾಂಪೌಂಡ್ ನಿರ್ಮಿಸಲಾಗುವುದು ಎಂದು ಹೇಳಿದರು.
2ನೇ ಪ್ಯಾಕೇಜ್‌ಗೆ ಶೀಘ್ರವೇ ಟೆಂಡರ್: ಈಗಾಗಲೇ ಮೊದಲ ಪ್ಯಾಕೇಜ್‌ನಲ್ಲಿ ರನ್‌ವೇ ನಿರ್ಮಾಣ, ಸುತ್ತಲೂ ಕಾಂಪೌಂಡ್ ನಿರ್ಮಿಸುವ ಕೆಲಸ ನಡೆಯು ತ್ತಿದೆ. 2ನೇ ಪ್ಯಾಕೇಜ್‌ಗೆ ಮುಂದಿನ ವಾರದಲ್ಲೇ ಟೆಂಡರ್ ಕರೆಯಲಾಗುವುದು. 2ನೇ ಪ್ಯಾಕೇಜ್‌ನಲ್ಲಿ ಟರ್ಮಿನಲ್ ಬಿಲ್ಡಿಂಗ್, ಎಟಿಸಿ ಟವರ್ ನಿರ್ಮಾಣ ವಾಗಲಿದೆ ಎಂದು ಹೇಳಿದರು.
2200 ಮೀಟರ್ ರನ್‌ವೇ: ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನೆ ನಡೆದಿದೆ. ವಿಮಾನ ನಿಲ್ದಾಣದ ಬೌಂಡರಿ ಸಮಸ್ಯೆ ಸರ್ವೆ ಮಾಡಿ ಗುರುತು ಮಾಡುವ ಮೂಲಕ ಬಗೆಹರಿಸಲಾಗಿದೆ. ರೈತರೂ ಸಹಕಾರ ನೀಡಿದ್ದಾರೆ. ಪ್ರಮುಖ ಬೇಡಿಕೆಯಾಗಿದ್ದ ಪ್ರತ್ಯೇಕ ರಸ್ತೆ ನಿರ್ಮಾಣದ ಸಮಸ್ಯೆ ಬಗೆಹರಿಸಲಾಗಿದೆ. ಇತರೆ ಸಣ್ಣಪುಟ್ಟ ಸಮಸ್ಯೆಗಳೂ ಬಗೆಹರಿದಿವೆ. ಕೆಪಿಟಿಸಿಎಲ್‌ನಿಂದ ಹೈಟೆನ್ಶನ್ ವಿದ್ಯುತ್ ಮಾರ್ಗ ನಿರ್ಮಾಣದ ಕೆಲಸ ಬಾಕಿಯಿದ್ದು, ಕಾಮಗಾರಿ ಯಂತ್ರೋಪಕರಣ ಸಾಗಿಸಲು ಸಮಸ್ಯೆಯಾಗಿದೆ. ಅದಕ್ಕೆ ಈಗಾಗಲೇ ಹಣ ಬಿಡುಗಡೆಯಾಗಿದ್ದು, ಸ್ಥಳಾಂತರ ಕೆಲಸ ಶೀಘ್ರ ಆರಂಭ ಆಗಲಿದೆ. ಈ ಸಂಬಂಧ ಪ್ರತಿ ತಿಂಗಳು ಸಭೆ ನಡೆಸಿ ಏನೇ ಇದ್ದರೂ ಪರಿಹರಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಇತ್ಯರ್ಥಗೊಳಿಸಲಾಗದ ಸಮಸ್ಯೆ ಇದ್ದರೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ವಿಮಾನ ನಿಲ್ದಾಣದ ರನ್‌ವೇ ಉದ್ದ 2200ಮೀ. (2.5 ಕಿಮೀ), ಏರ್‌ಬಸ್ 320 ವಿಮಾನ ಇಳಿಯಲು 3000 ಮೀಟರ್‌ವರೆಗೂ ರನ್‌ವೇ ವಿಸ್ತರಣೆ ಮಾಡಲು ಅವಕಾಶ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಎಟಿಆರ್ ಮಾದರಿ ವಿಮಾನ ಇಳಿಯಲು 2200 ಮೀ.ರನ್ ವೇ ನಿರ್ಮಾಣವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಸ್ಪಷ್ಟಪಡಿಸಿದರು. ಹಾಸನ ಜಿಪಂ ಸಿಇಒ ಕಾಂತರಾಜ್, ಹಾಸನ ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್, ಲೋಕೋಪ ಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಮತ್ತಿತರ ಅಧಿಕಾರಿಗಳು ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಹಾಜರಿದ್ದರು.
980 ಎಕರೆ ಅಗತ್ಯ : ವಿಮಾನ ನಿಲ್ದಾಣಕ್ಕಾಗಿ ಈ ಹಿಂದೆ 980 ಎಕರೆ ಅಗತ್ಯವಿದೆ ಎಂದು ಭೂ ಸ್ವಾಧೀನದ ಪ್ರಕ್ರಿಯೆ ನಡೆದಿತ್ತು. ಆದರೆ, ಹಾಲಿ ಸ್ವಾಧೀನ ಪಡಿಸಿರುವ 536 ಎಕರೆ ವ್ಯಾಪ್ತಿಯಲ್ಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದು. ಹೆಚ್ಚುವರಿಯಾಗಿ ಸುಮಾರು 400 ಎಕರೆ ಭೂ ಸ್ವಾಧೀನ ಮಾಡುವ ಪ್ರಸ್ತಾಪ ಇಲ್ಲ. ಹೆಚ್ಚುವರಿ ಭೂಮಿ ಅಗತ್ಯವಿಲ್ಲ ಎಂದು ಸಚಿವ ಸಂಪುಟ ಸಭೆಯಲ್ಲಿಯೇ ತೀರ್ಮಾನ ಆಗಿದೆ ಎಂದು ಅನಿಲ್ ಕುಮಾರ್ ಸ್ಪಷ್ಟಪಡಿಸಿದರು.
ಭೂ ಮಾಲಿಕರಿಗೆ ಶೀಘ್ರದಲ್ಲೇ ಪರಿಹಾರ : ವಿಮಾನ ನಿಲ್ದಾಣ ನಿರ್ಮಾಣಕ್ಕೆ 536 ಎಕರೆ ಬಳಸಿಕೊಳ್ಳಲಾಗುತ್ತಿದೆ. 24 ಎಕರೆ ಭೂ ಸ್ವಾಧೀನ ಬಾಕಿ ಇದೆ. ಸ್ವಾಧೀನದ ಪ್ರಕ್ರಿಯೆಗಳು ನಡೆದಿದ್ದು, ಅಂತಿಮ ಹಂತದಲ್ಲಿದೆ. ಭೂ ಮಾಲಿಕರಿಗೆ ಪರಿಹಾರ ನೀಡಬೇಕಾಗಿದ್ದು, ಪರಿಹಾರ ಕೊಡುವ ಕೆಲಸವನ್ನು ಆದಷ್ಟು ಬೇಗ ಮುಗಿಸುತ್ತೇವೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ.
ಅದಾದ ಕೂಡಲೇ ವಿಮಾನ ನಿಲ್ದಾಣಕ್ಕೆ ಸ್ವಾಧೀನವಾಗುವ 536 ಎಕರೆ ಸುತ್ತಲೂ ಕಾಂಪೌಂಡ್ ಹಾಕಿ ಕಾಮಗಾರಿಗೆ ವೇಗ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ತಿಳಿಸಿದರು.