Advertisement

ಜಿಲ್ಲೆಗೆ 12376 ಕೋಟಿ ರೂ.ಸಾಲ ಯೋಜನೆ

06:05 PM Mar 31, 2022 | Team Udayavani |

ಹಾಸನ: ಜಿಲ್ಲೆಯ ಲೀಡ್‌ ಬ್ಯಾಂಕ್‌ ಆದ ಕೆನರಾ ಬ್ಯಾಂಕ್‌ 2022-23ನೇ ಸಾಲಿಗಾಗಿ 12,376 ಕೋಟಿ ರೂ. ಸಾಲ ಯೋಜನೆ ರೂಪಿಸಿದೆ. ಜಿಪಂ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಪಂ ಸಿಇಒ ಕಾಂತರಾಜ್‌ ಅವರು ಸಾಲ ಯೋಜನೆ ಬಿಡುಗಡೆ ಮಾಡಿದರು.

Advertisement

ಜಿಲ್ಲೆಯ ಎಲ್ಲ ಬ್ಯಾಂಕ್‌ ಶಾಖೆಗಳೂ ತಮ್ಮ ಶಾಖಾ ಮಟ್ಟದಲ್ಲಿ ತಯಾರಿಸಿದ ತಾಲೂಕು ಮಟ್ಟದಲ್ಲಿ ಕೋಢೀಕರಿಸಿ, ತದನಂತರ ಜಿಲ್ಲಾ ಮಟ್ಟದಲ್ಲಿ 2022-23ನೇ ವಾರ್ಷಿಕ ಸಾಲ ಯೋಜನೆ ರೂಪಿಸಲಾಗಿದೆ.

ಕ್ಷೇತ್ರವಾರು ಅನುದಾನ: ಒಟ್ಟು ಸಾಲ 12,376 ಕೋಟಿ ರೂ.ಯೋಜನೆಯಲ್ಲಿ ಆದ್ಯತಾ ವಲಯಕ್ಕೆ 10,244ಕೋಟಿ ರೂ., ( ಶೇ.82.77 ರಷ್ಟು) ಆದ್ಯತಾರಹಿತ ಕ್ಷೇತ್ರಕ್ಕೆ 2132 ಕೋಟಿ ರೂ. ಮೀಸಲಿರಿಸಲಾಗಿದೆ. ಆದ್ಯತಾ ವಲಯದಲ್ಲಿ ಬರುವ ಕೃಷಿಗೆ 6525. 46 ಕೋಟಿ ರೂ., ಕೈಗಾರಿಕೋದ್ಯಮಕ್ಕೆ 2902.47 ಕೋಟಿ ರೂ.( ಶೇ.63.70 ), ( ಶೇ.28.33) ವ್ಯಾಪಾರ ಮತ್ತು ಇತರೆ ಸೇವೆಗಳಿಗೆ 816.07 ಕೋಟಿ ರೂ. ( ಶೇ.7.96) ನಿಗದಿಪಡಿಸಲಾಗಿದೆ.

ಬೆಳೆ ಸಾಲಕ್ಕೆ 2919 ಕೋಟಿ ರೂ. ಮೀಸಲು:
ನಬಾರ್ಡ್‌ನ ಸಾಮರ್ಥ್ಯ ಆಧಾರಿತ ಸಾಲ ಯೋಜನೆ ಆಧರಿಸಿ 2022- 23ನೇ ಸಾಲ ಯೋಜನೆ ರೂಪಿಸಿದ್ದು, 2021- 22ನೇ ಸಾಲಿಗೆ ಹೋಲಿಸಿದರೆ . ಶೇ.12.90 ರಷ್ಟು ಹೆಚ್ಚು ಮೊತ್ತ ನಿಗದಿಯಾಗಿದೆ. ಕೃಷಿಯಲ್ಲಿ ಬೆಳೆ ಸಾಲಕ್ಕೆ 2919 ಕೋಟಿ ರೂ. ಮೀಸಲಿರಿಸಿದ್ದು, ಮಧ್ಯಮ ಮತ್ತು ದೀರ್ಘಾವಧಿ ಸಾಲಕ್ಕೆ 3606ಕೋಟಿ ರೂ. ಮೀಸಲಿರಿಸಲಾಗಿದೆ.

ಕಿರು ಸಾಲ ಒದಗಿಸಿ: ಸಾಲ ಯೋಜನೆ ಬಿಡುಗಡೆ ಮಾಡಿ ಮಾತನಾಡಿದ ಜಿಪಂ ಸಿಇಒ ಕಾಂತರಾಜ್‌ ಅವರು, ಈಗಾಗಲೇ ಮುಂಗಾರು ಪ್ರಾರಂಭವಾಗುತ್ತಿದ್ದು ಕೃಷಿ ಸಲಕರಣೆಗಳನ್ನು ಕೊಂಡುಕೊಳ್ಳಲು, ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಸಲು ಸಾಲಸೌಲಭ್ಯ ಅಗತ್ಯವಿದೆ. ಕೃಷಿಗೆ ಹೆಚ್ಚಿನ ಮಹತ್ವ ನೀಡಿರುವುದು ರೈತರಿಗೆ ಬಹಳ ಪ್ರಯೋಜನಕಾರಿಯಾಗಲಿದೆ. ಜೊತೆಗೆ ಗುಂಪು ಸ್ವಸಹಾಯ ಸಂಘಗಳಿಗೆ ಹಾಗೂ ಗುಡಿ ಕೈಗಾರಿಕೆ ಸ್ಥಾಪಿಸುವವರಿಗೆ ಹೆಚ್ಚಿನ ಆದ್ಯತೆ ನೀಡಿ ಕಿರು ಸಾಲಗಳನ್ನು ಒದಗಿಸಿ ಎಂದು ಕಾಂತರಾಜು ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸಾಲಯೋಜನೆ ಬಗ್ಗೆ ಮಾಹಿತಿ ನೀಡಿದ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕಿ ರೇವತಿ ಸುಧಾಕರ್‌ ಅವರು, ಜಿಲ್ಲಾ ಸಾಲ ಯೋಜನೆ ನಬಾರ್ಡ್‌ನ 2022-23 ರ ಸಾಮರ್ಥ್ಯ ಆಧಾರಿತ ಸಾಲ ಯೋಜನೆ ಆಧರಿಸಿ ಸಿದ್ಧಪಡಿಸಲಾಗಿದೆ. ಅದರಂತೆ ನಬಾರ್ಡ್‌, ಜಿಲ್ಲೆಗೆ ರೂ.10392 ಕೋಟಿ ಸಾಮರ್ಥ್ಯ ಗುರುತಿಸಿದ್ದು, ಅದಕೆ R ಅನುಗುಣವಾಗಿ ಜಿಲ್ಲೆಯ ಬ್ಯಾಂಕುಗಳು ಆದ್ಯತಾ ವಲಯಕೆ R 10244 ಕೋಟಿ ರೂ. ಯೋಜನೆ ತಯಾರಿಸಿವೆ ಎಂದರು.

ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಮಾಲಿನಿ ಸುವರ್ಣ ಅವರು ಬ್ಯಾಂಕ್‌ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು. ಜಿಪಂ ಉಪ ಕಾರ್ಯದರ್ಶಿ ಪುನೀತ್‌, ಆರ್‌ಬಿಐ ಬೆಂಗಳೂರಿನ ಎಫ್ಐಡಿಡಿ ವಾಸಂತಿ ಸಾಗರ್‌, ಕೆನರಾ ಬ್ಯಾಂಕ್‌ ನ. ಸಹಾಯಕ ಮುಖ್ಯ ವ್ಯವಸ್ಥಾಪಕ ಸುನಿಲ್‌ಕುಮಾರ್‌ ಮತ್ತಿತರ ಬ್ಯಾಂಕ್‌ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next