ಕೇಪ್ ಟೌನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ನ ದಿಗ್ಗಜ ಹಾಶಿಮ್ ಆಮ್ಲಾ ಅವರು ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
2019 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದಾರೂ ಆಮ್ಲಾ ಅವರು ಸರ್ರೆ ತಂಡದೊದಿಗೆ ಇಂಗ್ಲಿಷ್ ಕೌಂಟಿಯಲ್ಲಿ ಇನ್ನೂ ಸಕ್ರಿಯರಾಗಿದ್ದರು. ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 18,000 ಕ್ಕೂ ಹೆಚ್ಚು ರನ್ ಗಳಿಸಿದ ಆಮ್ಲಾ, 2022 ರಲ್ಲಿ ಕೌಂಟಿ ಚಾಂಪಿಯನ್ ಶಿಪ್ ಗೆಲ್ಲುವಲ್ಲಿ ಸರ್ರೆಗೆ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು ಸೆಪ್ಟೆಂಬರ್ 2022 ರಲ್ಲಿ ನಾರ್ಥಾಂಪ್ಟನ್ ಶೈರ್ ವಿರುದ್ಧದ ಕೊನೆಯ ಶತಕದೊಂದಿಗೆ 57 ಶತಕಗಳನ್ನು ಗಳಿಸಿದರು.
ಸರ್ರೆಯ ಹೊರತಾಗಿ ಆಮ್ಲಾ ಅವರು ಡರ್ಬಿಶೈರ್, ಹ್ಯಾಂಪ್ ಶೈರ್, ನಾಟಿಂಗ್ ಹ್ಯಾಮ್ ಶೈರ್ ಮತ್ತು ಎಸೆಕ್ಸ್ ಗಾಗಿ ಕೌಂಟಿ ಕ್ರಿಕೆಟ್ ಆಡಿದ್ದರು. ಅವರು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸ್ ನ ಭಾಗವಾಗಿದ್ದರು. ದಕ್ಷಿಣ ಆಫ್ರಿಕಾದ ದೇಶೀಯ ವಲಯಕ್ಕೆ ಬಂದರೆ, ಅವರು ಕ್ವಾ-ಜುಲು ನಟಾಲ್, ಡಾಲ್ಫಿನ್ಸ್ ಮತ್ತು ಕೇಪ್ ಕೋಬ್ರಾಸ್ ಗಾಗಿ ಆಡಿದ್ದರು.