Advertisement

Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?

08:16 AM Oct 04, 2024 | Team Udayavani |

ಜೆರುಸಲೇಂ: ಬೈರುತ್‌ ನಲ್ಲಿ ಇಸ್ರೇಲಿ ದಾಳಿ ಮುಂದುವರಿದಿದ್ದು, ಹಿರಿಯ ಹಿಜ್ಬುಲ್ಲಾ ಅಧಿಕಾರಿ ಹಶೆಮ್ ಸಫೀದ್ದೀನ್ (Hashem Safieddine) ನನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಇರಾನ್ ಬೆಂಬಲಿತ ಭಯೋತ್ಪಾದಕ ಗುಂಪಾದ ಹಿಜ್ಬುಲ್ಲಾ (Hezbollah) ಮುಂದಿನ ನಾಯಕ ಎಂದು ಹಶೆಮ್‌ ಸಫಿದ್ದೀನ್‌ ನನ್ನು ಕರೆಯಲಾಗುತ್ತಿದೆ. ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ನನ್ನು ಇತ್ತೀಚೆಗೆ ಇಸ್ರೇಲ್‌ ಹತ್ಯೆ ಮಾಡಿದೆ.

Advertisement

ಆದರೆ, ಹಶೆಮ್‌ ಸಫೀದ್ದೀನ್‌ ಮೇಲಿನ ದಾಳಿಯ ಬಗ್ಗೆ ಇಸ್ರೇಲಿ ರಕ್ಷಣಾ ಪಡೆಗಳು (IDF) ಅಥವಾ ಲೆಬನಾನ್‌ ನಲ್ಲಿರುವ ಹಿಜ್ಬುಲ್ಲಾದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಭೂಗತ ಬಂಕರ್‌ ನಲ್ಲಿ ಹಿರಿಯ ಹಿಜ್ಬುಲ್ಲಾ ಅಧಿಕಾರಿಗಳ ಸಭೆಯಲ್ಲಿ ಸಫೀದ್ದೀನ್ ಭಾಗವಹಿಸುತ್ತಿದ್ದಾಗ ಇಸ್ರೇಲ್ ಗುರುವಾರ ಮಧ್ಯರಾತ್ರಿ ವಾಯುದಾಳಿ ನಡೆಸಿದೆ. ಇಸ್ರೇಲ್ ನಸ್ರಲ್ಲಾನನ್ನು ಕೊಂದ ನಂತರ ಈ ಪ್ರದೇಶದಲ್ಲಿ ನಡೆದ ದೊಡ್ಡ ಬಾಂಬ್ ಸ್ಫೋಟವು ಇದಾಗಿದೆ.

ಲೆಬನಾನಿನ ಮಾಧ್ಯಮವನ್ನು ಉಲ್ಲೇಖಿಸಿದ ಸುದ್ದಿವಾಹಿನಿ ಆಕ್ಸಿಯೋಸ್ ಪ್ರಕಾರ, ಈ ಇಸ್ರೇಲಿ ದಾಳಿಯು ನಸ್ರಲ್ಲಾನನ್ನು ಕೊಂದ ದಾಳಿಗಿಂತ ದೊಡ್ಡದಾಗಿದೆ. ಮೃತಪಟ್ಟವರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ.

Advertisement

2017 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಿಂದ ಭಯೋತ್ಪಾದಕ ಎಂದು ಗೊತ್ತುಪಡಿಸಿದ ಹಶೆಮ್ ಸಫಿದ್ದೀನ್, ಹಿಜ್ಬುಲ್ಲಾದ ರಾಜಕೀಯ ವ್ಯವಹಾರಗಳಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾನೆ. ಅದರ ಮಿಲಿಟರಿ ಕಾರ್ಯಾಚರಣೆಗಳನ್ನು ನಿರ್ವಹಿಸುವ ಗುಂಪಿನ ಜಿಹಾದ್ ಕೌನ್ಸಿಲ್‌ ನ ಸದಸ್ಯನಾಗಿದ್ದಾನೆ. ನಸ್ರಲ್ಲಾನ ಸೋದರ ಸಂಬಂಧಿ, ಸಫಿದ್ದೀನ್ ನನ್ನು ಹಿಜ್ಬುಲ್ಲಾದಲ್ಲಿ ‘ಎರಡನೇ ನಾಯಕ’ ಎಂದು ಪರಿಗಣಿಸಲಾಗಿದೆ. ಈತ ಇರಾನ್ ಆಡಳಿತದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next