Advertisement

3ನೇ ದಿನವೂ ಹಾಸನಾಂಬೆ ದರ್ಶನಕ್ಕೆ ಭಕ್ತರ ದಂಡು

03:46 PM Oct 16, 2022 | Team Udayavani |

ಹಾಸನ: ಶ್ರೀ ಹಾಸನಾಂಬೆ ದರ್ಶನಕ್ಕೆ 3ನೇ ದಿನವಾದ ಶನಿವಾರವೂ ಭಕ್ತ ಸಾಗರ ಹರಿದು ಬಂದಿತು. ಮುಂಜಾನೆಯಿಂದಲೇ ಭಕ್ತರು ಸರದಿ ಸಾಲುಗಳಲ್ಲಿ ಸಾಗಿ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಪಡೆದರು.

Advertisement

ಮುಂಜಾನೆ 6 ಗಂಟೆಯಿಂದ ದೇವಿಯ ದರ್ಶನ ಆರಂಭವಾಯಿತು. ಗರ್ಭಗುಡಿಯ ಅಲಂಕಾರ ಹಾಗೂ ನೈವೇದ್ಯ ನೀಡಲಿಕ್ಕಾಗಿ ಮಧ್ಯಾಹ್ನ 1.30 ರಿಂದ 3.30 ರವರೆಗೆ ದೇವಿಯ ದರ್ಶನಕ್ಕೆ ಅವಕಾಶವಿರಲಿಲ್ಲ. 3.30 ರಿಂದ ರಾತ್ರಿ 10.30 ರವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು.

ಆಯಾಸದಿಂದ ಕುಸಿದ ಭಕ್ತರು: ಧರ್ಮ ದರ್ಶನದ ಸರದಿ ಸಾಲಿನಲ್ಲಿ ದೇವಿ ದರ್ಶನಕ್ಕೆ ಸಾಗುವ ಭಕ್ತರಿಗೆ ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ನೀಡಲು ಸಾಲಿನುದ್ದಕ್ಕೂ ವಾಟರ್‌ ಪ್ರೂಫ್ ಮೇಲ್ಛಾವಣಿ ಅಳವಡಿಸಲಾಗಿದೆ. ಶನಿವಾರ ಬಿಸಿಲು ಜೋರಾಗಿದ್ದರಿಂದ ಸಾಲಿನಲ್ಲಿ ನಿಂತಿದ್ದವರು ಬಿಸಿಲಿನ ಧಗೆ ಹಾಗೂ ಗಾಳಿ ಕೊರತೆಯಿಂದ ಬಸವಳಿದು ಹೋದರು. ಮೂರ್‍ನಾಲ್ಕು ಮಂದಿ ಸುಸ್ತಾಗಿ ಸರದಿ ಸಾಲಿನಲ್ಲಿಯೇ ಕುಸಿದು ಬಿದ್ದರು. ಅನಂತರ ಅವರನ್ನು ಉಪಚರಿ ಸಿದ ನಂತರ ಚೇತರಿಸಿಕೊಂಡು ದೇವಿಯ ದರ್ಶನ ಪಡೆದರು.

ಭಕ್ತರಿಗೆ ಬೇಸರ ತಂದ ಖಾಕಿ ನಡೆ: 1000 ರೂ. ಟಿಕೆಟ್‌ ಖರೀದಿಸಿದ್ದವರು ಹಾಗೂ ಅತಿ ಗಣ್ಯರ ಪಾಸ್‌ ಹೊಂದಿದ್ದವರಿಗೆ ದೇವಾಲಯದ ಮುಖ್ಯ ಪ್ರವೇಶದ್ವಾರ (ಗೇಟ್‌ ನಂ.1) ದ ಮೂಲಕ ದೇವಾಲಯ ಪ್ರವೇಶಕ್ಕೆ ಅವಕಾಶವಿದೆ. ಆದರೆ, ಕೆಲ ಪೊಲೀಸರ ಕಿರಿಕಿರಿಯಿಂದ ಆಗಿಂದಾಗೆ ವಾಗ್ವಾದಗಳು ಸಾಮಾನ್ಯವಾಗಿವೆ. ಭಕ್ತರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ಹಿರಿಯ ಪೊಲೀಸ್‌ ಅಧಿಕಾರಿಗಳ ನಿರ್ದೇಶನವಿದ್ದರೂ ಕೆಲ ಪೊಲೀಸ್‌ ಸಿಬ್ಬಂದಿ ಅನುಚಿತ ವರ್ತನೆಯಿಂದ ಭಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

4 ರಿಂದ 6 ರವರೆಗೆ ಶೀಘ್ರ ದರ್ಶನ: ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಭಕ್ತರ ಸಂಖ್ಯೆ ಹೆಚ್ಚಿದ್ದು, ನೂಕು ನುಗ್ಗಲಿನಲ್ಲಿ ಸಾಗುತ್ತಿದ್ದರೆ, ಮಧ್ಯಾಹ್ನ 4 ಗಂಟೆಯಿಂದ 6 ಗಂಟೆ ನಡುವೆ ಮಾತ್ರ ಭಕ್ತರು ಸರಾಗವಾಗಿ ದೇವಾಲಯ ಪ್ರವೇಶಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. 6 ಗಂಟೆಯ ನಂತರ ಮತ್ತೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.

Advertisement

ದರ್ಶನಕ್ಕೆ ಟಿಕೆಟ್‌ ವ್ಯವಸ್ಥೆ: ಪ್ರಭಾವ ಬಳಸಿ ಅಥವಾ ಗಣ್ಯರ ಅಥವಾ ಅತಿ ಗಣ್ಯರ ಪಾಸ್‌ ಪಡೆದು ಶ್ರೀ ಹಾಸನಾಂಬೆಯ ದರ್ಶನವನ್ನು ಸರಾಗವಾಗಿ ಪಡೆಯಬೇಕು ಎಂದು ಅಶಿಸುವ ಬಹಳಷ್ಟು ಭಕ್ತರಿದ್ದಾರೆ. ಪ್ರಭಾವಿಲ್ಲದವರು ಹಾಗೂ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ಸಾಗಲಾಗದವರು ವಿಶೇಷ ದರ್ಶನದ 1000 ರೂ. ಹಾಗೂ 300 ರೂ. ಟಿಕೆಟ್‌ ಖರೀದಿ ಖರೀಸಿ ಹಾಸನಾಂಬೆಯ ದರ್ಶನ ಪಡೆಯುತ್ತಿದ್ದಾರೆ. 1.65 ಲಕ್ಷ ರೂ.

ಟಿಕೆಟ್‌ ಖರೀದಿಸಿ ದೇವಿ ದರ್ಶನ : ವಿಶೇಷವೆಂದರೆ ಬೆಂಗಳೂರಿನ ದೊಡ್ಡ ತಂಡವೊಂದು ಒಂದೇ ಬಾರಿ 1.65 ಲಕ್ಷ ರೂ. ಟಿಕೆಟ್‌ ಪಡೆದು ಹಾಸನಾಂಬೆಯ ದರ್ಶನ ಪಡೆದದ್ದು ಶನಿವಾರದ ವಿಶೇಷವಾಗಿತ್ತು ಬೆಂಗಳೂರಿನ ಶರ್ಮಾಲಯ ಸಂಘದ 165 ಜನರು ಮೂರು ಬಸ್‌ ಹಾಗೂ ಮೂರು ಕಾರುಗಳಲ್ಲಿ ಆಗಮಿಸಿ 1000 ರೂ. ಮುಖಬೆಲೆಯ 165 ಟಿಕೆಟ್‌ಗಳ ನ್ನು ಖರೀದಿಸಿ ಹಾಸನಾಂಬೆಯ ಶೀಘ್ರ ದರ್ಶನ ಪಡೆದರು.

1.65 ಲಕ್ಷ ರೂ. ಟಿಕೆಟ್‌ ಖರೀದಿಸಿ ದೇವಿ ದರ್ಶನ : ವಿಶೇಷವೆಂದರೆ ಬೆಂಗಳೂರಿನ ದೊಡ್ಡ ತಂಡವೊಂದು ಒಂದೇ ಬಾರಿ 1.65 ಲಕ್ಷ ರೂ. ಟಿಕೆಟ್‌ ಪಡೆದು ಹಾಸನಾಂಬೆಯ ದರ್ಶನ ಪಡೆದದ್ದು ಶನಿವಾರದ ವಿಶೇಷವಾಗಿತ್ತು ಬೆಂಗಳೂರಿನ ಶರ್ಮಾಲಯ ಸಂಘದ 165 ಜನರು ಮೂರು ಬಸ್‌ ಹಾಗೂ ಮೂರು ಕಾರುಗಳಲ್ಲಿ ಆಗಮಿಸಿ 1000 ರೂ. ಮುಖಬೆಲೆಯ 165 ಟಿಕೆಟ್‌ಗಳ ನ್ನು ಖರೀದಿಸಿ ಹಾಸನಾಂಬೆಯ ಶೀಘ್ರ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next