Advertisement
ಸೂರ್ಯಗ್ರಹಣದ ಪರಿಣಾಮ ಮಂಗಳವಾರ ದೇವಿಯ ದರ್ಶನವಿರುವುದಿಲ್ಲ. ಸೋಮವಾರ ಮತ್ತು ಬುಧವಾರ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿದ್ದು, ಗುರುವಾರ ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ರವಿವಾರವೂ ದೇವಾಲಯದತ್ತ ಭಕ್ತರ ಮಹಾಪೂರ ಹರಿದು ಬಂದಿತ್ತು.
ಶಾಂತ್ರಿಗ್ರಾಮದಿಂದ ಹಾಸನ ನಗರವರೆಗೂ ಕ್ರೀಡಾಪಟುಗಳು 15 ಕಿ.ಮೀ. ಮ್ಯಾರಥಾನ್ ಓಟದ ಮೂಲಕ ಬಂದು ರವಿವಾರ ಹಾಸನಾಂಬೆ ದರ್ಶನ ಪಡೆದರು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ದೆಗಳಲ್ಲಿ ಪಾಲ್ಗೊಂಡಿರುವ ಹಿರಿಯ ಮತ್ತು ಕಿರಿಯ ಕ್ರೀಡಾಪಟುಗಳು ರವಿವಾರ ಬೆಳಗ್ಗೆ ತಾಲೂಕಿನ ಶಾಂತಿಗ್ರಾಮದಿಂದ ಹಾಸನಾಂಬೆ ಆವರಣಕ್ಕೆ ಮ್ಯಾರಥಾನ್ ಓಟದಲ್ಲಿ ಬಂದರು. ಅನಂತರ ದೇವಸ್ಥಾನದ ಮುಂಭಾಗಕ್ಕೆ ಬಂದಾಗ ಪೊಲೀಸರು ಮೊದಲು ದೇವಾಲಯ ಪ್ರವೇಶಿಸಲು ಅವಕಾಶ ಕೊಡಲಿಲ್ಲ. ಬಳಿಕ ಒಂದು ಸಾವಿರ ರೂ. ಟಿಕೆಟ್‌ಗಳ ಪ್ರವೇಶದ ಸಾಲಿನಲ್ಲಿ ಕಳುಹಿಸಿಕೊಟ್ಟರು.
Related Articles
ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರಿಗೆ ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ನಾಗೇಂದ್ರ ಅವರು ಏಕವಚನದಲ್ಲೆ ಬಹಿರಂಗವಾಗಿ ವಾಗ್ಧಾಳಿ ನಡೆಸಿ ಹಾಸನಾಂಬೆ ದರ್ಶನ ಮಾಡದೆ ವಾಪಸಾದ ಪ್ರಸಂಗ ನಡೆಯಿತು. “ಈ ಮಟ್ಟಕ್ಕೆ ನಿಮ್ಮ ಎಂಎಲ್‌ಎ ನಡೆದುಕೊಳ್ಳುತ್ತಾನೆ. ಕರೆ ಮಾಡಿದ್ರೆ ಸೌಜನ್ಯಕ್ಕೆ ರಿಸೀವ್ ಮಾಡಕ್ಕೆ ಆಗಲ್ವ? ಏನು ಅವನ ಬಳಿ ನಿಧಿ ಕೇಳುತ್ತೀದ್ದೇವಾ? ಆಸ್ತಿ ಕೇಳ್ತೀವಾ? ಒಬ್ಬ ಶಾಸಕ ಬಂದ್ರೆ ಫೋನ್ ತೆಗೆಯುವ ಸೌಜನ್ಯ ಇಟ್ಕಬೇಕಲ್ವ? ಇಂತಹ ದೌಲತ್ತುಗಳು ಹೆಚ್ಚು ದಿನ ನಡೆಯಲ್ಲ. ಸೋಮವಾರ ಜಿಲ್ಲಾಡಳಿತ ಕಡೆಯಿಂದ ದೇವಸ್ಥಾನಕ್ಕೆ ಬಂದು ಹಾಸನಾಂಬೆ ದರ್ಶನ ಮಾಡುತ್ತೀನಿ. ನಿಮ್ಮ ಸಹವಾಸವೇ ಬೇಡ’ ಎಂದು ಸಿಟ್ಟು ಪ್ರದರ್ಶಿಸಿ ದೇವಿ ದರ್ಶನ ಮಾಡದೆ ಮರಳಿದರು.
Advertisement