Advertisement
ದೇವಿಯ ನೇರ ದರ್ಶನ ಪಡೆಯಲು ಬರುವ ಭಕ್ತರು ಎರಡೂ ಡೋಸ್ ಕೊರೊನಾ ಲಸಿಕೆ ಪಡೆದಿರುವುದರ ದಾಖಲೆ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸರದಿಯ ಸಾಲಿನಲ್ಲಿ ಸಾಗುವಾಗಲೇ ಭಕ್ತರು ಕೊರೊನಾ ಲಸಿಕೆ ಪಡೆದ ಸರ್ಟಿಫಿಕೇಟ್ ಪ್ರತಿ ಅಥವಾ ಲಸಿಕೆ ಪಡೆದಿರುವುದಕ್ಕೆ ಬಂದ ಮೆಸೇಜ್‌ನ್ನು ಮೊಬೈಲ್‌ನಲ್ಲಿ ತೋರಿಸಿದ ನಂತರವೇ ದೇಗುಲಕ್ಕೆ ಪ್ರವೇಶ ನೀಡಲಾಗುತ್ತದೆ. ಇದರ ಪರಿಶೀಲನೆಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿ ವರು ತಿಳಿ ಸಿ ದರು. 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಿಲ್ಲ. ಹಾಗಾಗಿ ಮಕ್ಕಳ ಪ್ರವೇಶ ನಿರ್ಬಂಧಿಸಿಲ್ಲ. ಆದರೆ, ಮಕ್ಕಳು ಹಾಗೂ ವಯಸ್ಸಾದವರು ಸುರಕ್ಷತೆಯ ದೃಷ್ಟಿಯಿಂದ ನೇರ ದರ್ಶನಕ್ಕೆ ಬಾರದೆ ಆನ್‌ಲೈನ್‌ನಲ್ಲಿಯೇ ಹಾಸನಾಂಬೆಯ ದರ್ಶನ ಪಡೆಯುವುದು ಸೂಕ್ತ ಎಂದರು.
Related Articles
Advertisement