Advertisement

ಬೇಡಿಕೆ ಈಡೇರಿಕೆಗಾಗಿ ಅಂಗನವಾಡಿ ನೌಕರರ ಪ್ರತಿಭಟನೆ

03:32 PM Jul 11, 2019 | Naveen |

ಹಾಸನ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು. ಕಾರ್ಯ ಕರ್ತೆಯರಿಗೆ ಬಾಕಿ ಗೌರವಧನ ಪಾವತಿಸಬೇಕು. ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಮಹಾರಾಜ ಉದ್ಯಾನವನದಲ್ಲಿ ಸಮಾ ವೇಶಗೊಂಡ ನೌಕರರು ಆನಂತರ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಯವರ ಕಚೇರಿ ಆವರಣಕ್ಕೆ ಆಗಮಿಸಿ ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವ ಸಲ್ಲಿಸಿದರು.

6 ವರ್ಷದೊಳಗಿನ ಮಕ್ಕಳಲ್ಲಿ ಶೇ. 40 ರಷ್ಟು ದೈಹಿಕ ಬೆಳವಣಿಗೆ, ಶೇ.80ರಷ್ಟು ಮಾನಸಿಕ ಬೆಳವಣಿಗೆ ನಡೆಯುವ ಸಂದರ್ಭದಲ್ಲಿ ಪೂರಕ ಪೌಷ್ಟಿಕ ಆಹಾರ ಮತ್ತು ಪ್ರಾಥಮಿಕ ಆರೋಗ್ಯವನ್ನು ಪೂರೈಸುವ ಸಲುವಾಗಿಯೇ ಐಸಿಡಿಎಸ್‌ ಯೋಜನೆ 1975 ರಲ್ಲಿ ಪ್ರಾರಂಭವಾಯಿತು. ಈ ಯೋಜನೆಯಡಿ 3 ವರ್ಷದೊಳಗಿನ ಮಗು ತಾಯಿಯ ಆರೈಕೆಯಲ್ಲಿರ ಬೇಕಾಗಿರುವುದರಿಂದ ಆ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಕೊಡಲಾಗುತ್ತದೆ ಎಂದರು.

ಬಾಕಿ ಗೌರವಧನ ವಿತರಿಸಿ: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 3-4 ತಿಂಗಳ ಗೌರವಧನ ಬಂದಿಲ್ಲ. ಕೋಳಿ ಮೊಟ್ಟೆ, ತರಕಾರಿ ಹಣ 3-4 ತಿಂಗಳಿಂದ ಬಿಡುಗಡೆಯಾಗಿಲ್ಲ. ಗ್ಯಾಸ್‌ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಅಂಗನವಾಡಿ ನೌಕರರು ಕಾಯಿಲೆ ಬಿದ್ದಾಗ ಮತ್ತು ಮರಣ ಹೊಂದಿದಾಗ ನೆರವು ಸಿಗುತ್ತಿಲ್ಲ. ನಿವೃತ್ತಿ ಯಾದ ನೌಕರರಿಗೆ ಯಾವುದೇ ಸೌಲಭ್ಯಗಳಿಲ್ಲ. ಇಂತಹ ಕೊರತೆಗಳ ನಡುವೆಯೂ ಅಂಗನವಾಡಿ ನೌಕರರು ದುಡಿಯುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಎಲ್ಐಸಿ ಆಧಾರಿತ ಪಿಂಚಿಣಿ ನೀಡಿ: ಅಂಗನ ವಾಡಿ ನೌಕರರಿಗೆ ಈಗಿರುವ ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ ಎಲ್ಐಸಿ ಆಧಾರಿತ ಪಿಂಚಿಣಿ ನೀಡ ಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಕೊಡುವ ಎನ್‌ಪಿಎಸ್‌ ಮಾನದಂಡಗಳನ್ನು ಅನುಸರಿ ಸಬೇಕು. ನಿವೃತ್ತಿ ಆದ ಕಾರ್ಯಕರ್ತೆಯವರು, ಸಹಾ ಯಕಿಗೆ ಇಡುಗಂಟು ತಕ್ಷಣ ಬಿಡುಗಡೆ ಆಗಬೇಕು. ಇಲಾಖೆಯ ಲೋಪದೋಷಗಳಿಂದ ಪಾನ್‌ ಕಾರ್ಡು ನೀಡದವರಿಗೆ – ಹಣ ಕಡಿತ ಆಗದವರಿಗೂ ನಿವೃತ್ತಿ ಸೌಲಭ್ಯ ಬಿಡುಗಡೆ ಮಾಡಬೇಕು. ಕಾರ್ಯಕರ್ತೆ- ಸಹಾಯಕಿಯರಿಗೆ ಪಾನ್‌ ಕಾರ್ಡು ನೀಡದವರಿಗೆ ತಕ್ಷಣ ನೀಡಬೇಕು. 2016ರ ಏಪ್ರಿಲ್ ನಿಂದ ಆಯ್ಕೆ ಆದ ಕಾರ್ಯಕರ್ತೆ ಸಹಾಯಕಿಯರಿಗೆ ಕಾಯಂ ನಿವೃತ್ತಿ ಸೌಲಭ್ಯದಡಿ ತರಬೇಕು. ಈಗಾಗಲೇ ನಿವೃತ್ತಿ ಆದವರಿಗೆ ಕನಿಷ್ಠ 3ಸಾವಿರ ರೂ. ಪಿಂಚಣಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Advertisement

18 ಸಾವಿರ ರೂ. ವೇತನ ನೀಡಿ: ಅಂಗನವಾಡಿ ಕಾರ್ಯಕರ್ತೆರಿಗೆ 18ಸಾವಿರ ರೂ. ಕನಿಷ್ಠ ವೇತನ ಜಾರಿ ಮಾಡಬೇಕು. ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಪಾಂಡಿಚೇರಿ, ಕೇರಳ ಮುಂತಾದ ರಾಜ್ಯಗಳಲ್ಲಿ 11 ರಿಂದ 12 ಸಾವಿರ ವೇತನ ಹೆಚ್ಚಳವಾಗಿದೆ. ಆದ್ದರಿಂದ ರಾಜ್ಯದಲ್ಲಿಯೂ ಕೂಡಾ ಗೌರವಧನ ಹೆಚ್ಚಳವಾಗ ಬೇಕು. ಖಾಲಿಯಿರುವ ಸಹಾಯಕಿ ಮತ್ತು ಕಾರ್ಯ ಕರ್ತೆಯರ ಹುದ್ದೆಗಳನ್ನು ತುಂಬಬೇಕು. ಹಲವು ಯೋಜನೆಗಳಿಗೆ ಡಿಡಿ, ಡಿಒ, ಸಿಡಿಪಿಒ, ಮೇಲ್ವಿಚಾರಕಿ ಯರನ್ನು ಕಾಯಂ ಆಗಿ ನೇಮಕ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ನಿಯಮ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಇಂದ್ರಮ್ಮ, ಖಜಾಂಚಿ ಜೆ.ಪಿ. ಶೈಲಜಾ, ಪ್ರಧಾನ ಕಾರ್ಯ ದರ್ಶಿ ಎಂ.ಬಿ. ಪುಷ್ಪ್ಪಾ, ಉಪಾಧ್ಯಕ್ಷರಾದ ಲತಾ, ಶಾರದಾ, ಕೆ.ಪಿ. ವೀಣಾ, ಕಾಮಾಕ್ಷಿ ಜಯಂತಿ, ಮೀನಾಕ್ಷಿ, ಸಾವಿತ್ರಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಧರ್ಮೇಶ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next