Advertisement

ಮೆಗಾಡೇರಿ ನಿರ್ಮಾಣ ಕಾಮಗಾರಿಗೆ ಚಾಲನೆ

09:26 PM Jun 22, 2021 | Team Udayavani |

ಹಾಸನ: ನಗರದ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿ ಕೌಶಿಕ ಗ್ರಾಮದ ಸಮೀಪ 500 ಕೋಟಿರೂ.ಅಂದಾಜು ವೆಚ್ಚದಲ್ಲಿ ಮೆಗಾಡೇರಿನಿರ್ಮಾಣಕ್ಕೆ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ, ಮಾಜಿ ಸಚಿವ ಎಚ್‌.ಡಿ.ರೇವಣ್ಣಅವರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು .

Advertisement

ಹಾಸನ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿವರ್ಷದಿಂದ ವರ್ಷಕ್ಕೆ ಹಾಲಿನ ಉತ್ಪಾದನೆಹೆಚ್ಚುತ್ತಿದ್ದು, ಈಗ 12 ಲಕ್ಷ ಲೀ.ಹಾಲು ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟುಹಾಲು ಸಂಗ್ರಹವಾಗುವ ನಿರೀಕ್ಷೆ ಯಿದೆ. ಈಗಿರುವ ಡೇರಿಯಲ್ಲಿ ಅಷ್ಟು ಪ್ರಮಾಣದ ಹಾಲಿನ ಸಂಸ್ಕರಣೆ ಹಾಗೂ ಹಾಲಿನ ಉತ್ಪನ್ನಗಳ ತಯಾರಿಕೆ ಘಟಕಗಳ ನಿರ್ಮಾಣಕ್ಕೆ ಸ್ಥಳದಕೊರತೆಯಿದೆ. ಹಾಗಾಗಿ 58 ಎಕರೆ ಪ್ರದೇಶದಲ್ಲಿ ಮೆಗಾಡೇರಿ ನಿರ್ಮಾಣಕ್ಕೆ ನಿರ್ಧ ರಿಸಿಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಮ್ಮುಖದಲ್ಲಿ ಮೆಗಾಡೇರಿನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.

ಈಗ ರೇವಣ್ಣ ಅವರು ಕಾಮಗಾರಿಗೆ ಚಾಲನೆನೀಡಿದ್ದಾರೆ. 10 ರಿಂದ 15 ಲಕ್ಷ ಲೀ.ಹಾಲಿನಸಂಸ್ಕರಣೆ ಸಾಮರ್ಥಯದ ಮೆಗಾಡೇರಿ ಆವರಣದಲ್ಲಿ 60 ಟನ್‌ಹಾಲಿನ ಪುಡಿ ತಯಾರಿಕಾಘಟಕ, ಬೆಣ್ಣೆ ತಯಾರಿಕೆ ಹಾಗೂ ರೀಟೈಲ್‌ಪ್ಯಾಕಿಂಗ್‌, ಗೋದಾಮುಗಳ ನಿರ್ಮಾಣವನ್ನು ಮೆಗಾಡೇರಿ ಸಮುತ್ಛದಲ್ಲಿ500ಕೋಟಿರೂ. ಅಂದಾಜಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.ಈ ಯೋಜನೆಯನ್ನು 2023 ರೊಳಗೆಪೂರ್ಣಗೊಳಿಸಲು ಹಾಸನ ಹಾಲು ಒಕ್ಕೂಟವು ಕಾರ್ಯಯೋಜನೆ ರೂಪಿಸಿಕೊಂಡಿದೆ.

ಮೆಗಾಡೇರಿ ನಿರ್ಮಾಣಕ್ಕೆ ಹಾಸನ ಹಾಲುಒಕ್ಕೂಟವೇ ಪೂರ್ಣ ಬಂಡವಾಳಹೂಡಲಿದ್ದು, ಯೋಜನೆಯ ಟೆಂಡರ್‌ಪ್ರಕ್ರಿಯೆ, ಕಾಮಗಾರಿ ನಿರ್ವಹಣೆಯನ್ನುಕೆಎಂಎಫ್ ನೋಡಿಕೊಳ್ಳಲಿದೆ. ಮೊದಲಹಂತದ 100 ಕೋಟಿ ರೂ. ಕಾಮಗಾರಿಆರಂಭವಾಗುತ್ತಿದೆ. ಭೂಮಿಪೂಜೆಸಂದರ್ಭದಲ್ಲಿ ಹಾಸನ ಹಾಲು ಒಕ್ಕೂಟದನಿರ್ದೇಶಕ ಸತೀಶ್‌, ರೇವಣ್ಣ ಅವರ ಪತ್ನಿಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ,ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next