ಹಾಸನ: ಸಿಎಂ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಹಾಸನಕ್ಕೆಭೇಟಿ ವೇಳೆ ಕೊರೊನಾ ನಿಯಂತ್ರಣದವೈಫಲ್ಯ, ಹಾಸನ ಜಿಲ್ಲೆಯ ಅಭಿವೃದ್ಧಿವಿಚಾರದಲ್ಲಿ ಪಕ್ಷಪಾತ ಮಾಡುತ್ತಿ ರುವಬಗ್ಗೆ ಪ್ರಸ್ತಾಪ ಮಾಡಲಾಗುವುದು ಎಂದು ಜೆಡಿಎಸ್ ಮುಖಂಡ, ಮಾಜಿಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಹಾಸನದಲ್ಲಿ ವಿಮಾನ ನಿಲ್ದಾಣಯೋಜನೆ 5 ದಶಕಗಳಿಂದ ನನೆಗುದಿಗೆಬಿದ್ದಿದೆ. ಹಾಸನದ ಚನ್ನಪಟ್ಟಣಕೆರೆ ಅಭಿವೃದ್ಧಿಗೆ 144 ಕೋಟಿರೂ. ವೆಚ್ಚದ ಕ್ರಿಯಾಯೋಜನೆ ರೂಪಿಸಿ, 84 ಲಕ್ಷರೂ.ವೆಚ್ಚದಲ್ಲಿ ನೀಲ ನಕ್ಷೆಸಿದ್ಧಪಡಿಸಲಾಗಿದೆ. ಈಗಅನುದಾನ ನೀಡದೆ ತಡೆಹಿಡಿಯಲಾಗಿದೆ.
ಜಿಲ್ಲೆಯ ಅಭಿ ವೃದ್ಧಿಗೆಎರಡು ರಾಷ್ಟ್ರೀಯ ಪಕ್ಷಗಳು ಕಂಟಕವಾಗಿವೆ. ವಿಮಾನ ನಿಲ್ದಾಣ, ಚನ್ನಪಟ್ಟಣಕೆರೆ, ರಸ್ತೆ ಎಲ್ಲವೂ ನನೆಗುದಿಗೆ ಬೀಳ ಲುಯಡಿಯೂರಪ್ಪ ಅವರೇ ಕಾರಣಎಂದು ಆರೋಪಿಸಿ ದರು.ಜಿಲ್ಲೆಗೆ ಅನ್ಯಾಯ: ಮಾಜಿಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹಾಸನಕ್ಕೆಐಐಟಿ ತರಲು ಭಾರೀ ಹೋರಾಟ ಮಾಡಿದರು.
ಆದರೆ,ಐಐಟಿ ಹಾಸನಕ್ಕೆ ತಪ್ಪಿಹೀಗಾ ಯಿತು. ಎರಡು ರಾಷ್ಟೀಯಪಕ್ಷಗಳೂ ಹಾಸನಕ್ಕೆ ಅನ್ಯಾಯಮಾಡಿದವು ಎಂದು ದೂರಿದರು.ಕೊರೊನಾದಿಂದ ಮೃತಪಟ್ಟ ಕುಟುಂಬದವರಿಗೆ ಎನ್‌ಡಿಆರ್‌ಎಫ್ನಿಂದ 5 ಲಕ್ಷರೂ.ಹಾಗೂ ಮುಖ್ಯಮಂತ್ರಿ ಪರಿ ಹಾರನಿಧಿಯಿಂದ ತಲಾ 1 ಲಕ್ಷ ಪರಿಹಾರ ನೀಡಬೇಕು. ಇಲ್ಲವೇ ಸರ್ಕಾರ ದಿವಾಳಿ ಆಗಿದೆಎಂದು ಸಿಎಂ ಒಪ್ಪಿಕೊಳ್ಳಲಿ ಎಂದರು.ಕೇಂದ್ರ ಸರ್ಕಾರ ಕೋವಿಡ್‌ಲಸಿಕೆಗಾಗಿ ಬಜೆಟ್‌ನಲ್ಲಿ 36 ಸಾವಿರಕೋಟಿ ಮೀಸಲಿ ಟ್ಟಿತ್ತು. ಆ ಹಣ ಎಲ್ಲಿಗೆಹೋಯಿತು. ಎಷ್ಟು ಲಸಿಕೆ ಕೊಟ್ಟಿದ್ದಾರೆಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಜಿಲ್ಲೆಗೆಸಮರ್ಪಕ ಲಸಿಕೆ ಪೂರೈಸದಿ ದ್ದರೆಪ್ರತಿಭಟನೆ ಮಾಡಲಾಗುವುದು ಎಂದುಎಚ್ಚರಿಕೆ ನೀಡಿದರು