Advertisement

ಇಲಾಖೆಗಳ ಸಹಯೋಗದಲ್ಲಿ ಹುಣಸಿನಕೆರೆ ಅಭಿವೃದ್ಧಿ ಮಾಡಿ

04:30 PM Jun 13, 2019 | Naveen |

ಹಾಸನ: ನಗರದ ಹುಣಸಿನಕೆರೆ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ ವಿವಿಧ ಇಲಾಖೆ ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಿ ಎಂದು ಡೀಸಿ ಅಕ್ರಂಪಾಷಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಹುಣಸಿನಕೆರೆ ಅಭಿವೃದ್ಧಿ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿದ ಅವರು ಐತಿಹಾಸಿಕ, ನೈಸರ್ಗಿಕ ಹಾಗೂ ಪ್ರವಾಸೋದ್ಯಮ ಮಹತ್ವ ಹೊಂದಿ ರುವ ಹುಣಸಿನ ಅಭಿವೃದ್ಧಿ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಇಲಾಖೆಗಳ ಸಹಕಾರ ಅಗತ್ಯ: ಕೆರೆಯ ಸಮಗ್ರ ಅಭಿವೃದ್ಧಿಗೆ ಬಹುಮುಖ ಯೋಜನೆ ತಯಾರಾಗಬೇಕು. ಹಸಿರು ಭೂಮಿ ಪ್ರತಿಷ್ಠಾನ ಈಗಾಗಲೇ ಸಿದ್ಧಪಡಿಸಿ ಸಲ್ಲಿಸಿರುವ ಯೋಜನೆಯನ್ನು ಮತ್ತಷ್ಟು ಪರಿಷ್ಕರಿಸಿ ಉತ್ತಮ ಪಡಿಸಿ ಹಂತ ಹಂತವಾಗಿ ವಿವಿಧ ಇಲಾಖೆಗಳ ಕೆಲಸಗಳನ್ನು ಹಂಚಿಕೊಂಡು ಅಭಿವೃದ್ಧಿ ಪಡಿಸಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ, ಪ್ರವಾಸೋದ್ಯಮ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಈ ಕೆರೆ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. ಹಸಿರು ಭೂಮಿ ಪ್ರತಿಷ್ಠಾನದ ಹಿರಿಯ ನಾಗರಿಕ ವೇದಿಕೆಗಳು ಹಾಗೂ ಇತರ ಸಂಘ ಸಂಸ್ಥೆಗಳು ಇದರ ಪ್ರಗತಿಯಲ್ಲಿ ನೆರವಾಗ ಬೇಕು. ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ದಿಂದ ತಕ್ಷಣವೇ ಕೆರೆ ಆವರಣದಲ್ಲಿರುವ ಕಸ, ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸುವ ಕೆಲಸ ಆಗಬೇಕಿದೆ ಎಂದು ಅಕ್ರಂ ಪಾಷಾ ಅವರು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ನೆರವು: ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ‌ ಕೆ.ಎಂ.ರಾಜೇಗೌಡ ಮತ್ತು ಪ್ರಾಧಿಕಾರದ ಆಯುಕ್ತ‌ ಮಾಯಣ್ಣ ಅವರು ಪ್ರಾಧಿಕಾರದ ವತಿಯಿಂದ ಈ ಕಾರ್ಯವನ್ನು ಕೈಗೊಳ್ಳಲಾಗು ವುದು ಎಂದು ಸ್ಪಷ್ಟಪಡಿಸಿದರು.

Advertisement

ಇದೇ ರೀತಿ ಸಣ್ಣ ನೀರಾವರಿ ಇಲಾಖೆ ಯವರು ಹೂಳೆತ್ತುವ ಕಾರ್ಯ ನಡೆಸಬೇಕು. ಜಲಾಮೃತ ಯೋಜನೆಯನ್ನು ಹುಣಸಿನಕೆರೆ ಅಭಿವೃದ್ಧಿಗೆ ಸದ್ಬಳಕ್ಕೆ ಮಾಡಿಕೊಳ್ಳಬೇಕು ನಗರಸಭೆ ವತಿುಂದ ಇಂಟರ್‌ಲಾಕ್‌ ಟೈಲ್ಸ್, ಚೈನ್‌ ಲಿಂಕ್‌ ಫೆನ್ಸ್‌, ವಾಯು ವಿಹಾರ ದಾರಿ ಅಭಿವೃದ್ಧಿ ಮಾಡಬೇಕು ಎಂದರು.

ಹಸಿರು ಭೂಮಿ ಪ್ರತಿಷ್ಠಾನದ ಪರವಾಗಿ ಆರ್‌.ಪಿ. ವೆಂಕಟೇಶ್‌ ಮೂರ್ತಿ ಹುಣಸಿನಕೆರೆ ಮಹತ್ವ, ಅಂತರ್ಜಲ ವೃದ್ಧಿಗೆ ಅದರ ಕೊಡುಗೆ ಕೈಗಳ್ಳಬಹುದಾದ ಅಭಿವೃದ್ಧಿ ಯೋಜನೆಗಳ ಕುರಿತು ಸಭೆಯಲ್ಲಿ ವಿವರಿಸಿದರು.

ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್‌ ಮಾತನಾಡಿ, ಸರ್ಕಾರ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಹುಣಸಿನಕೆರೆ ಅಭಿವೃದ್ಧಿ ಪಡಿಸಲು ಉತ್ತಮ ಆವಕಾಶವಿದೆ ಎಂದು ತಿಳಿಸಿದರು.

ವಿವಿಧ ಇಲಾಖಾ ಅಧಿಕಾರಿಗಳು, ಹಸಿರು ಭೂಮಿ ಪ್ರತಿಷ್ಠಾನದ ಸುಬ್ಬಸ್ವಾಮಿ ಸಮಾಜ ಸೇವಕ ಮಂಜುನಾಥ್‌ ಹಾಗೂ ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next