Advertisement

ಹಾಸನದಲ್ಲಿ ಜೆಡಿಎಸ್‌, ಬಿಜೆಪಿ ಗೆಲುವಿನ ಲೆಕ್ಕಾಚಾರ

04:09 PM Apr 20, 2019 | |

ಹಾಸನ: ಮತದಾನ ಮುಗಿದ ಮರುದಿನ ಹಾಸನ ಲೊಕಸಭಾ ಕ್ಷೇತ್ರದ ಅಭ್ಯರ್ಥಿಗಳು ತಮ್ಮದೇ ಗೆಲುವಿನ ಲೆಕ್ಕಾಚಾರ ಹಾಕಿಕೊಂಡು ವಿಜಯದ
ಉತ್ಸಾಹ ತೋರಿದರು.

Advertisement

ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ತಂದೆ, ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರು, ಪ್ರಜ್ವಲ್‌ ರೇವಣ್ಣ ಅವರಿಗೆ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಹುಮತ ಬರಲಿದೆ. ವಿಶೇಷವಾಗಿ
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಬಹುಮತ ಪ್ರಜ್ವಲ್‌ಗೆ ಬರಲಿದ್ದು, ದುದ್ದ ಮತ್ತು ಶಾಂತಿಗ್ರಾಮ ಹೋಬಳಿಯಲ್ಲೇ ತಲಾ 15 ರಿಂದ 20 ಸಾವಿರ ಬಹುಮತ ಬರಲಿದೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ನಂತರ
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಬಹುಮತ ಬರಲಿದ್ದು, ಆನಂತರದ ಹೆಚ್ಚು ಬಹುಮತ ಅರಸೀಕೆರೆ ಮತ್ತು ಹಾಸನ ವಿಧಾನಸಭಾ
ಕ್ಷೇತ್ರದಲ್ಲಿ ಬರಲಿದೆ ಎಂದು ಲೆಕ್ಕಾಚಾರ ಮಂಡಿಸಿದರು.

ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಕಲೇಶಪುರ ತಾಲೂಕಿನಲ್ಲಿ ಜೆಡಿಎಸ್‌ಗೆ ಹಿನ್ನಡೆಯಾದರೂ ಆಲೂರು ತಾಲೂಕಿನಲ್ಲಿ ಸ್ಪಲ್ಪ
ಬಹುಮತ ಬರಬಹುದು. ಕಟ್ಟಾಯ ಹೋಬಳಿಯಲ್ಲೇ 15 ಸಾವಿರಕ್ಕೂ ಹೆಚ್ಚು ಬಹುಮತ ಜೆಡಿಸ್‌ಗೆ ಬರುವುದು ಖಚಿತ ಎಂದು ಹೇಳಿದ ರೇವಣ್ಣ
ಅವರು, ಕಳೆದ ಚುನಾವಣೆಯಲ್ಲಿ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ 17 ಸಾವಿರ ಮತಗಳ ಹಿನ್ನಡೆಯಾಗಿತ್ತು. ಆದರೆ ಈ ಬಾರಿ ಆ ಕ್ಷೇತ್ರದಲ್ಲಿಯೂ ಜೆಡಿಎಸ್‌ಗೆ ಬಹುಮತ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅರಕಲಗೂಡು ಕ್ಷೇತ್ರದಲ್ಲಿಯೂ ಬಹುಮತ ಜೆಡಿಎಸ್‌ಗೆ ಬರಲಿದೆ. ವಿಶೇಷವಾಗಿ ಅಲ್ಪ ಸಂಖ್ಯಾತ
ಸಮುದಾಯದವರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮತಗಳು ಈ ಬಾರಿ ಜೆಡಿಎಸ್‌ಗೆ ಹೆಚ್ಚು ಬಂದಿವೆ. ಹಾಗಾಗಿ ಪ್ರಜ್ವಲ್‌ ರೇವಣ್ಣ 2 ರಿಂದ 3 ಲಕ್ಷ ಮತಗಳ ಅಂತರದಿಂದ
ಗೆಲ್ಲಲಿದ್ದಾರೆ ಎಂದು ಲೆಕ್ಕಾಚಾರ ಮಂಡಿಸಿದರು.

ಎ.ಮಂಜು ಲೆಕ್ಕಾಚಾರ: ಎ.ಮಂಜು ಅವರೂ ತಮ್ಮ ಗೆಲುವಿನ ಲೆಕ್ಕಾಚಾರ ಮಂಡಿಸಿ ತಮಗೆ ಸುಮಾರು 7 ಲಕ್ಷ ಮತಗಳು ಬರಲಿವೆ ಎಂದು ಹೇಳಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ
ಜಿಲ್ಲೆಯ 7 ಕ್ಷೇತ್ರಗಳಳಲ್ಲಿ ಬಿಜೆಪಿ 3 ಲಕ್ಷ ಮತಗಳನ್ನು ಪಡೆದಿತ್ತು. ಈ ಬಾರಿ ಹೊಸ ಮತದಾರರು 82 ಸಾವಿರ
ಇದ್ದು, ಅವರಲ್ಲಿ ಬಹುಪಾಲು ಪ್ರಧಾನಿ ನರೇಂದ್ರಮೋದಿ ಅವರು ಪ್ರಧಾನಿ
ಆಗಬೇಕೆಂಬ ಬಯಕೆ ವ್ಯಕ್ತಪಡಿಸಿ ನನಗೆ ಮತ ನೀಡಿದ್ದಾರೆ. ಹಾಗಾಗಿಯೇ ಕಳೆದ ಬಾರಿಯ ಲೋಕಸಭಾ ಚುನಾವಣೆಗಿಂತ ಈ ಬಾರಿ ಮತದಾನದಲ್ಲಿ ಶೇ.4 ರಷ್ಟು ಹೆಚ್ಚು ಮತದಾನವಾಗಿದೆ ಎಂದರು.

Advertisement

ಇನ್ನು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ನನಗೆ 4.9 ಲಕ್ಷ ಮತಗಳು ಬಂದಿದ್ದವು. ಅವುಗಳಲ್ಲಿ ಈ ಬಾರಿ ಶೇ. 65 ರಿಂದ 70 ರಷ್ಟು ಮತಗಳು ಬರಲಿವೆ. ವಿಶೇಷವಾಗಿ
ಪರಿಶಿಷ್ಟ ಜಾತಿಯ ಮತದಾರರು ನನಗೆ ಹೆಚ್ಚು ಮತ ನೀಡಿದ್ದಾರೆ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಹುಮತ ಕೊಡಿಸುವುದಾಗಿ ಶಾಸಕ ಬೆಳ್ಳಿಪ್ರಕಾಶ್‌ ಹೇಳಿದ್ದು, ಅ ನಿಟ್ಟಿನಲ್ಲಿ ಅವರು ಪ್ರಯತ್ನವನ್ನೂ ನಡೆಸಿದ್ದಾರೆ. ಹಾಗಾಗಿ ನನ್ನ ಗೆಲುವು ಖಚಿತ ಎಂದೂ
ಎ.ಮಂಜು ಅವರು ಲೆಕ್ಕಾಚಾರ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next