Advertisement

ಹಾಸನದಲ್ಲಿ ಮತ್ತೆ 4 ಪಾಸಿಟಿವ್ ಪ್ರಕರಣ : ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆ

01:49 PM May 13, 2020 | sudhir |

ಹಾಸನ : ಹಸಿರು ವಲಯದಲ್ಲಿದ್ದ ಹಾಸನಕ್ಕೆ ಕೋವಿಡ್ ಕಂಟಕ ಎದುರಾಗಿದೆ ಮಂಗಳವಾರ 5 ಪ್ರಕರಣಗಳು ಪತ್ತೆಯಾಗಿದ್ದ ಹಾಸನದಲ್ಲಿ ಇಂದು ಮತ್ತೆ ನಾಲ್ಕು ಹೊಸ ಪ್ರಕರಣ ದಾಖಲಾಗುದರೊಂದಿಗೆ ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

Advertisement

ಮಹಾರಾಷ್ಟ್ರದಿಂದ ಹಾಸನಕ್ಕೆ ಬಂದಿದ್ದ ಕುಟುಂಬದ ನಾಲ್ಕು ಮಂದಿ 42 ವರ್ಷದ ಪುರುಷ 38 ವರ್ಷದ ಮಹಿಳೆ ಹಾಗೂ 14 ಮತ್ತು 17 ವರ್ಷದ ಬಾಲಕ ಮತ್ತು ಬಾಲಕಿಗೆ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಖಚಿತ ಪಡಿಸಿದ್ದಾರೆ.

ಸೋಂಕಿತರೆಲ್ಲರೂ ಮುಂಬೈನಿಂದ ಹಾಸನಕ್ಕೆ ಬಂದವರಾಗಿದ್ದು ಅವರನ್ನು ಹಾಸನದ ಕೊವೀಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 9 ಜನರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪ್ರಕರಣದಿಂದ ಆತಂಕಕ್ಕೆ ಒಳಗಾಗಿರುವ ಹಾಸನ ಜನತೆಗೆ ಜಿಲ್ಲಾಧಿಕಾರಿ ಧೈರ್ಯ ತುಂಬಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next