ಬೆಂಗಳೂರು: ಡ್ರಗ್ಸ್ ಮಾಫಿಯಾದ ಹಣದಿಂದ ಸಮ್ಮಿಶ್ರ ಸರ್ಕಾರ ಪತನವಾಗಿದೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮತ್ತಿನಲ್ಲಿ ಹೇಳಿದ್ದಾರಾ ? ಈ ಕುರಿತು ತನಿಖೆ ಮಾಡಬೇಕು. ಅವರ ಸಹವರ್ತಿಗಳು, ಅವರ ಅಧ್ಯಕ್ಷರೇ ರಾಜೀನಾಮೆ ನೀಡಿರುವುದು. ಈಗಾಗಲೇ ಸರ್ಕಾರದ ವೈಫಲ್ಯಕ್ಕೆ ರಾಜೀನಾಮೆ ಕೊಟ್ಟಿದ್ದು ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ.
ರೋಷನ್ ಬೇಗ್ ರಾಜಿನಾಮೆ ಕೊಟ್ಟ ಕಾರಣ ಬೇರೆ. ಅವರನ್ನು ಡ್ರಗ್ಸ್ ಮಾಫಿಯಾ ನಿಯಂತ್ರಣ ಮಾಡುತ್ತಿತ್ತು ಅನ್ನೋದು ಹಾಸ್ಯಾಸ್ಪದ. ಅಂದು ಕುಮಾರಸ್ವಾಮಿ ಯಾಕೆ ಸುಮ್ಮನೆ ಇದ್ದರು. ಅವರಿಗೂ ಏನಾದ್ರು ಆಂತರಿಕ ಒಪ್ಪಂದ ಇತ್ತಾ? ಅಧಿಕಾರದಲ್ಲಿ ಇದ್ದಾಗ ಯಾಕೆ ಬಾಯಿ ಬಿಡಲಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜಕೀಯ ತೆವಲಿಗೆ ಹೇಳಿಕೆಗೆ ಹೀಗೆ ಹೇಳೋದು ಸರಿಯಲ್ಲ.ಇಂ ತಹ ಹೇಳಿಕೆ ಕೊಟ್ಟು ಕುಮಾರಸ್ವಾಮಿ ನಗೆಪಾಟಲಿಗೆ ಈಡಾಗಬಾರದು ಎಂದು ಸಿಟಿ ರವಿ ತಿಳಿಸಿದ್ದಾರೆ.