Advertisement

ಪ್ರವಾಹಕ್ಕೆ ಸ್ಪಂದಿಸದಿರುವುದೇ ಹರಿಯಾಣ, ಮಹಾರಾಷ್ಟ್ರದಲ್ಲಿ ಬಲ ಕ್ಷೀಣಿಸಲು ಕಾರಣ

09:49 AM Oct 27, 2019 | sudhir |

ಬನಹಟ್ಟಿ: ಈಚೇಗೆ ನೆರೆಯ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯದಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಜಯ ಸಾಧಿಸದಿರುವುದಕ್ಕೆ ಪ್ರವಾಹವೇ ಮುಖ್ಯ ಕಾರಣವಾಯಿತು. ದೇಶ ಎಂದಾಗ ನರೇಂದ್ರ ಮೋದಿ ಮುಖ್ಯವಾದರೆ ವಿಧಾನ ಸಭಾ ಮತ್ತು ಜಿಲ್ಲಾವಾರು ಚುನಾವಣೆಗಳಲ್ಲಿ ಸ್ಥಳೀಯ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಅವರು ಶನಿವಾರ ಬನಹಟ್ಟಿಯಲ್ಲಿ ಸಿದ್ಧಸಿರಿ ಸೌಹಾರ್ದ ಸಂಘದ 115 ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

Advertisement

ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಉಂಟಾದ ಮಹಾಪೂರದ ನಿಮಿತ್ತವಾಗಿ ಕೇಂದ್ರಕ್ಕೆ ಪತ್ರ ಕಳಿಸಿದ್ದೆ, ಪರಿಹಾರ ನೀಡದಿರುವದೇ ತಪ್ಪು ಸಂದೇಶವಾಗಿದೆ.

ಬಿಜೆಪಿ ಸಾಂಪ್ರದಾಯಿಕ ಮತದಾರರಿಗೆ ತೀವ್ರತರ ಧಕ್ಕೆಯಾಗಿದ್ದು, ರಾಜ್ಯದಲ್ಲಿ ಲಿಂಗಾಯತ ಸೇರಿದಂತೆ ಪ್ರಬಲ ಸಾಂಪ್ರದಾಯಿಕ ಮತದಾರರು ಬಿ.ಎಸ್.ಯಡಿಯೂರಪ್ಪನವರನ್ನು ನಂಬಿದಂತೆ ಮಹಾರಾಷ್ಟ್ರದಲ್ಲಿಯೂ ಮರಾಠಾ ಹಾಗೂ ಹರಿಯಾಣದಲ್ಲಿ ಜಾಟ್ ಸಮುದಾಯವನ್ನೂ ಓಲೈಸುವಲ್ಲಿ ಸ್ವಲ್ಪ ಕೊರತೆ ಕಂಡು ಬಂದಿದೆ. ಸ್ಥಳೀಯ ನಾಯಕತ್ವದಿಂದಲೇ ಸ್ಥಳೀಯ ಚುನಾವಣೆಗಳು ನಡೆಯುತ್ತವೆ ಎನ್ನುವುದಕ್ಕೆ ಎರಡು ರಾಜ್ಯಗಳ ಮತದಾರರು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಅದರಂತೆ ಜನಸೇವೆ ಅನಿವಾರ್ಯವೆಂದು ಎಂದು ಯತ್ನಾಳ ತಿಳಿಸಿದರು.

ಸಂತ್ರಸ್ತರು ಭಿಕ್ಷುಕರಲ್ಲ: ನೆರೆಪ್ರವಾಹದಿಂದಾಗಿ ಸಾಕಷ್ಟು ತೊಂದರೆಯನ್ನು ಅನುಭವಿಸಿರುವ ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕನಾರ್ಟಕದ ಜನತೆ ಭಿಕ್ಷುಕರಲ್ಲ. ಇವರೆಲ್ಲರೂ ಸ್ಥಿತಿವಂತರಿದ್ದಾರೆ. ಪ್ರವಾಹಕ್ಕೆ ತುತ್ತಾಗಿ ಆಥಿರ್ಕವಾಗಿ ತೊಂದರೆಯನ್ನು ಅನುಭವಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಕೇಂದ್ರದ ಸಚಿವ ಒಬ್ಬರನ್ನು ಉಸ್ತುವಾರಿಯನ್ನಾಗಿ ನೇಮಿಸುವ ಮೂಲಕ ಸೂಕ್ತ ಪರಿಹಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಯತ್ನಾಳ ಹೇಳಿದರು.

ನನಗೆ ಯಾವದೇ ಪ್ರಚಾರಕ್ಕೆ ಹೇಳಿಲ್ಲ: ನೆರೆಯ ಮಹಾರಾಷ್ಟ್ರ ರಾಜ್ಯದ ಚುನಾವಣೆ ಸಂದರ್ಭದಲ್ಲಿ ನನಗೆ ಯಾವದೇ ರೀತಿಯ ಪ್ರಚಾರ ನಡೆಸಬೇಕೆಂಬ ಆದೇಶವಾಗಲಿ, ಸಂದೇಶವಾಗಲಿ ಪಕ್ಷ ರವಾನಿಸಿಲ್ಲ. ಬದಲಾಗಿ ಸೋತ, ಮೂರನೇ, ನಾಲ್ಕನೇ ಸ್ಥಾನ ಪಡೆದ ಹಾಗೂ ಅರಿಯದ ವ್ಯಕ್ತಿಗಳು ವಿಜಯಪುರದವರು ಪ್ರಚಾರದ ಮುಂಚೂಣಿಯಲ್ಲಿರುವುದು ಪಕ್ಷಕ್ಕೆ ಮುಖ ಭಂಗವಾಗಿರುವದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಪರೋಕ್ಷವಾಗಿ ತಮ್ಮ ಪಕ್ಷದವರ ವಿರುದ್ದ ಬೇಸರಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next