Advertisement

ಗೋ ಕಳ್ಳಸಾಗಣೆದಾರನೆಂದು ಭಾವಿಸಿ 25 ಕಿ.ಮೀ ಬೆನ್ನಟ್ಟಿ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ

09:53 AM Sep 03, 2024 | Team Udayavani |

ಹರ್ಯಾಣ: ದನ ಕಳ್ಳಸಾಗಾಣಿಕೆ ಮಾಡುತ್ತಿದ್ದಾನೆ ಎಂದು ತಪ್ಪು ತಿಳಿದು ತಂಡವೊಂದು ಪಿಯುಸಿ ವಿದ್ಯಾರ್ಥಿಯನ್ನು ಸುಮಾರು 25 ಕಿಲೋಮೀಟರ್ ವರೆಗೆ ಹಿಂಬಾಲಿಸಿದ ತಂಡವೊಂದು ಗುಂಡಿಕ್ಕಿ ಹತ್ಯೆಗೈದ ಘಟನೆ ಹರ್ಯಾಣದ ಫರಿದಾಬಾದ್‌ನಲ್ಲಿ ನಡೆದಿದೆ.

Advertisement

ಆರ್ಯನ್ ಮಿಶ್ರಾ(19) ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಯುವಕ.

ಏನಿದು ಪ್ರಕರಣ:
ಆರ್ಯನ್ ಮಿಶ್ರಾ ತನ್ನ ಸ್ನೇಹಿತರಾದ ಹರ್ಷಿತ್ ಮತ್ತು ಶಾಂಕಿ ಅವರೊಂದಿಗೆ ಆಗಸ್ಟ್ 23 ರಂದು ಮಧ್ಯರಾತ್ರಿ ನೂಡಲ್ಸ್ ತಿನ್ನಲು ಡಸ್ಟರ್ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ನಗರದಲ್ಲಿ ಗೋಕಳ್ಳಸಾಗಾಣಿಕೆ ಪ್ರಕರಣ ಹೆಚ್ಚಾಗಿತ್ತು ಅಲ್ಲದೆ ಗೋಕಳ್ಳರು ಡಸ್ಟರ್ ಮತ್ತು ಫಾರ್ಚುನರ್ ಕಾರುಗಳನ್ನು ಬಳಸಿ ಜಾನುವಾರು ಕಳ್ಳಸಾಗಣಿಕೆ ನಡೆಸುತ್ತಿದ್ದಾರೆ ಎಂದು ಗೋರಕ್ಷಕರಿಗೆ ಮಾಹಿತಿ ಕೂಡ ಸಿಕ್ಕಿತ್ತು, ಇದೆ ವೇಳೆ ನಗರದಲ್ಲಿ ಆರ್ಯನ್ ಮಿಶ್ರಾ ಅವರಿದ್ದ ಡಸ್ಟರ್ ಕಾರು ರಸ್ತೆಯಲ್ಲಿ ಸಾಗಿದೆ ಇದನ್ನು ಕಂಡ ಗೋರಕ್ಷಕರು ಡಸ್ಟರ್ ಕಾರಿನಲ್ಲಿರುವವರು ಗೋಕಳ್ಳರು ಎಂದು ಭಾವಿಸಿ ಅವರನ್ನು ಹಿಂಬಾಲಿಸಿದ್ದಾರೆ ಜೊತೆಗೆ ಕಾರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಹರ್ಷಿತ್ ಡಸ್ಟರ್ ಕಾರನ್ನು ಓಡಿಸುತ್ತಿದ್ದು, ಅದರಲ್ಲಿ ಆರ್ಯನ್ ಕೂಡ ಇದ್ದರು. ಕಾರಿನ ಹಿಂಭಾಗದಲ್ಲಿ ಶಾಂಕಿ ಮತ್ತು ಇಬ್ಬರು ಮಹಿಳೆಯರು ಕುಳಿತಿದ್ದರು ಎನ್ನಲಾಗಿದೆ.

ಹರ್ಷಿತ್ ಮತ್ತು ಶಂಕಿ ಇತ್ತೀಚೆಗೆ ವ್ಯಕ್ತಿಯೊಬ್ಬನೊಂದಿಗೆ ಜಗಳವಾಡಿದ್ದು, ಶಂಕಿ ವಿರುದ್ಧ ಪ್ರಕರಣ ದಾಖಲಾಗಿತ್ತು ಇದಕ್ಕೆ ಪೂರಕವೆಂಬಂತೆ ಯುವಕರ ತಂಡ ತಮ್ಮ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದು ಇದರಿಂದ ಗಾಬರಿಗೊಂಡ ಹರ್ಷಿತ್ ಮತ್ತು ಶಂಕಿ ಹಿಂದೆ ಜಗಳವಾಡಿದ ವ್ಯಕ್ತಿಯೇ ಹೊಡೆಯಲು ಜನ ಕರೆದುಕೊಂಡು ಬಂದಿದ್ದಾನೆ ಎಂದು ತಪ್ಪಾಗಿ ಭಾವಿಸಿ ಕಾರನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿದ್ದಾನೆ, ಅತ್ತ ಕಾರು ನಿಲ್ಲಿಸದೆ ವೇಗವಾಗಿ ಸಾಗುತ್ತಿದ್ದ ಡಸ್ಟರ್ ಕಾರಿನಲ್ಲಿರುವವರು ಗೋ ಕಳ್ಳರೇ ಎಂದು ತಪ್ಪಾಗಿ ಭಾವಿಸಿದ ಗೋರಕ್ಷಕರು ಇವರು ಗೋ ಕಳ್ಳರೇ ಎಂದು ಭಾವಿಸಿ ಕಾರನ್ನು ಬೆನ್ನಟ್ಟಿ ಸುಮಾರು ಇಪ್ಪತೈದು ಕಿಲೋಮೀಟರ್ ದೂರ ಹಿಂಬಾಲಿಸಿಕೊಂಡು ಹೋಗಿ ಬಳಿಕ ಟೋಲ್ ಗೇಟ್ ಬಳಿ ಡಸ್ಟರ್ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ ಈ ವೇಳೆ ಗುಂಡು ಹಿಂಬದಿಯ ಕಿಟಕಿಯಿಂದ ಹಾದು ಶಾಟ್‌ಗನ್‌ನಲ್ಲಿ ಕುಳಿತಿದ್ದ ಆರ್ಯನ್‌ಗೆ ಹೊಡೆದಿದೆ. ಇದನ್ನು ಕಂಡ ಹರ್ಷಿತ್ ಕೂಡಲೇ ಕಾರು ನಿಲ್ಲಿಸಿದ್ದಾನೆ ಈ ವೇಳೆ ಗೋರಕ್ಷಕರೂ ಕಾರಿನ ಬಳಿ ಬಂದಿದ್ದಾರೆ ಆದರೆ ಕಾರನ್ನು ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿದ್ದವರು ಗೋಕಳ್ಳರಲ್ಲ ಬದಲಿಗೆ ಬೇರೆ ವ್ಯಕ್ತಿಗಳೆಂದು ಅರಿವಿಗೆ ಬಂದು ಗೋರಕ್ಷಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

Advertisement

ಇತ್ತ ಗಂಭೀರ ಗಾಯಗೊಂಡಿದ್ದ ಆರ್ಯನ್ ಮಿಶ್ರಾ ನನ್ನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಒಂದು ದಿನದ ಬಳಿಕ ಆರ್ಯನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಫರೀದಾಬಾದ್ ಪೊಲೀಸರು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರವ್ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Kolkata: ಆರ್​ಜಿ ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲರನ್ನು ಬಂಧಿಸಿದ ಸಿಬಿಐ!

Advertisement

Udayavani is now on Telegram. Click here to join our channel and stay updated with the latest news.