Advertisement
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹರಿಯಾಣ ಚುನಾವಣೆಯಲ್ಲಿ ಮೋದಿ ಕರ್ನಾಟಕದ ಬಗ್ಗೆ ಮಾತಾಡಿದ್ರು. ಪದೇ ಪದೆ ಮಾತಾಡಿದ್ದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ನಾನೇನು ಸಕ್ರಿಯ ರಾಜಕಾರಣದಲ್ಲಿಲ್ಲ. ಆದರೆ, ಪಕ್ಷ ಉಳಿಸಲು ಕೆಲಸ ಮಾಡುತ್ತೇನೆ ಅಷ್ಟೇ’ ಎಂದು ಹೇಳಿದರು.
ಜಾತಿ ಗಣತಿ ವರದಿ ಬಗ್ಗೆ ಪ್ರತಿಕ್ರಿಯಿಸಿ, “ಶಾಮನೂರು ಶಿವಶಂಕರಪ್ಪ ಓಡಾಡಿದ್ದಾರಾ? ಸಮೀಕ್ಷೆ ಮಾಡುವಾಗ ನಾನು ಮನೆ ಮನೆ ಓಡಾಡಿದ್ದೇನೆ. ಕಾಂತರಾಜ ವರದಿ ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಲ್ಲ. ಅದು ಜಾತಿ ಜನಗಣತಿ ಕೂಡ ಹೌದು. ವೈಜ್ಞಾನಿಕ, ಅವೈಜ್ಞಾನಿಕ ಎಂದರೆ ಏನು ಅಂತ ಅರ್ಥ ಆಗುತ್ತಿಲ್ಲ. ಇದರಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗುತ್ತದೆ ಎಂದು ಅನಿಸುವುದಿಲ್ಲ. ಇದರ ಜಾರಿಗೆ ವಿಳಂಬ ಮಾಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು. “ಉಪಸಮಿತಿ ಮಾಡಿ ವಿಳಂಬ ಮಾಡುವ ಅಥವಾ ಮುಂದೂಡುವ ಅವಶ್ಯಕತೆ ಇಲ್ಲ. ಕೆನೆಪದರ ಕಡ್ಡಾಯ ಎಂಬುದು ನನ್ನ ಅಭಿಪ್ರಾಯ. ಒಂದು ತಿಂಗಳು ಅವಕಾಶ ಕೊಟ್ಟು ಏನಾದರೂ ಬದಲಾವಣೆ ಇದ್ದರೆ ಮಾಡಲಿ. ಜಾತಿ ಗಣತಿ ಮಾಡುವಾಗ ನಾನೇ ವೈಯಕ್ತಿಕವಾಗಿ ಹಲವು ಕಡೆ ಹೋಗಿದ್ದೇನೆ. ಪ್ರತಿಯೊಂದು ಮನೆಗೆ ಭೇಟಿ ನೀಡಿದ್ದಾರೆ. ಜಾತಿ ಉಪಜಾತಿಯನ್ನೂ ದಾಖಲು ಮಾಡಿಕೊಂಡಿದ್ದಾರೆ. ಬಹಳ ಉತ್ತಮವಾಗಿ ಗಣತಿ ಮಾಡಿದ್ದಾರೆ’ ಎಂದು ತಿಳಿಸಿದರು.