Advertisement

Haryana;ಬಿಜೆಪಿ ಗೆದ್ದರೆ ನಾನು ಸಿಎಂ ಸ್ಥಾನದ ಆಕಾಂಕ್ಷಿ!: ಅನಿಲ್‌ ವಿಜ್‌

01:33 AM Sep 16, 2024 | Team Udayavani |

ಅಂಬಾಲಾ: ಹರಿಯಾಣದ ಬಿಜೆಪಿಯಲ್ಲಿ ಗೊಂದಲ ಆರಂಭವಾಗಿದ್ದು, ಪಕ್ಷದ ಹಿರಿಯ ನಾಯಕ, ಅನಿಲ್‌ ವಿಜ್‌ “ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. ನಯಾಬ್‌ ಸಿಂಗ್‌ ಸೈನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಪಕ್ಷ ಘೋಷಣೆ ಮಾಡಿದ ಬೆನ್ನಲ್ಲೇ ಹರಿಯಾಣದಲ್ಲಿ 6 ಬಾರಿ ಶಾಸಕರಾಗಿರುವ ಅನಿಲ್‌ ಹೇಳಿದ್ದಾರೆ.

Advertisement

“ನಾನು ಈವರೆಗೂ ಪಕ್ಷದಿಂದ ಏನನ್ನೂ ಬಯಸಿಲ್ಲ. ನನ್ನನ್ನು ಭೇಟಿ ಮಾಡಲು ಬರುವ ಜನರು ನಾನು ಪಕ್ಷದಲ್ಲಿ ಹಿರಿಯ ಎಂದು ಹೇಳುತ್ತಾರೆ. ಅಲ್ಲದೇ ನಾನು ಮುಖ್ಯಮಂತ್ರಿ ಏಕಾಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಹಿರಿಯ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದು ಒಂದು ರೀತಿಯ ಸರಿಯಾದ ಕ್ರಮ ಎನಿಸಿಕೊಳ್ಳುತ್ತದೆ. ಹೀಗಾಗಿ ನಾನು ಸ್ಪರ್ಧಿಸುತ್ತಿರುವ ಕ್ಷೇತ್ರದ ಜನರ ಬಯಕೆ ಹಾಗೂ ಪಕ್ಷದಲ್ಲಿ ನನ್ನ ಹಿರಿತನವನ್ನು ಆಧಾರವಾಗಿಟ್ಟುಕೊಂಡು ಈ ಬಾರಿ ನಾನು ಸಿಎಂ ಸ್ಥಾನದ ಆಕಾಂಕ್ಷಿ’ ಎಂದು ಅನಿಲ್‌ ಹೇಳಿದ್ದಾರೆ.

ಸೈನಿಯೇ ಸಿಎಂ ಅಭ್ಯರ್ಥಿ: ಪ್ರಧಾನ್‌

ಹರಿಯಾಣ ದಲ್ಲಿ ಬಿಜೆಪಿಯ ಮುಖ್ಯ ಮಂತ್ರಿ ಅಭ್ಯರ್ಥಿ ನಯಾಬ್‌ ಸಿಂಗ್‌ ಸೈನಿ ಅವರೇ ಆಗಿರುತ್ತಾರೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಹೇಳಿದ್ದಾರೆ. ಅನಿಲ್‌ ವಿಜ್‌ ತಾನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಂಡ ಬೆನ್ನಲ್ಲೇ ಪ್ರಧಾನ್‌ ಈ ವಿಷಯ ಸ್ಪಷ್ಟಪಡಿಸಿದ್ದಾರೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆ ಚುನಾವಣೆಗೆ ಅ.5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅ.8ಕ್ಕೆ ಫ‌ಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next