ನವದೆಹಲಿ:ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಸ್ವತಃ ಹರ್ಯಾಣ ಆರೋಗ್ಯ ಸಚಿವ, ಬಿಜೆಪಿ ಹಿರಿಯ ಮುಖಂಡ ಅನಿಲ್ ವಿಜ್ ಒಳಗಾದ ನಂತರ ಇದೀಗ ಕೋವಿಡ್ 19 ಸೋಂಕು ತಗುಲಿರುವುದಾಗಿ ವರದಿ ತಿಳಿಸಿದೆ.
ಈ ಕುರಿತು ಶನಿವಾರ(ಡಿಸೆಂಬರ್ 05, 2020) ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಆರೋಗ್ಯ ಸಚಿವ ವಿಜ್, ಯಾರು ನನ್ನ ಜತೆ ನಿಕಟ ಸಂಪರ್ಕದಲ್ಲಿದ್ದ ವ್ಯಕ್ತಿಗಳು ಕೋವಿಡ್ 19 ಪರೀಕ್ಷೆಗೆ ಒಳಗಾಗುವಂತೆ ಸಲಹೆ ನೀಡಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾಗಿರುವ ಸಚಿವ ಅನಿಲ್ ವಿಜ್ ಅವರು ಅಂಬಾಲಾ ಕಂಟೋನ್ಮೆಂಟ್ ನ ಸಿವಿಲ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ನವೆಂಬರ್ 20ರಂದು ಸಚಿವ ಅನಿಲ್ ವಿಜ್ ಅವರು ಮೊದಲ ಹಂತದ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಗಾಗುವುದಾಗಿ ತಿಳಿಸಿದ್ದು, ಸ್ವತಃ ಸಚಿವ ವಿಜ್ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದರು.
ಇದನ್ನೂ ಓದಿ:ಕರ್ನಾಟಕ ಬಂದ್ ; ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ , ನಾರಾಯಣ ಗೌಡ ಪೋಲೀಸರ ವಶಕ್ಕೆ
ಕೋವಿಡ್ 19 ಸೋಂಕಿಗೆ ಕೋವ್ಯಾಕ್ಸಿನ್ ಪರಿಣಾಮಕಾರಿ ಲಸಿಕೆ ಎಂದು ಐಸಿಎಂಆರ್ ಈಗಾಗಲೇ ತಿಳಿಸಿದೆ. ಕೋವ್ಯಾಕ್ಸಿನ್ ಲಸಿಕೆಯನ್ನು ದೇಶೀಯವಾಗಿ ಐಸಿಎಂಆರ್ ಜತೆಗೂಡಿ ಭಾರತ್ ಬಯೋಟೆಕ್ ಅಭಿವೃದ್ದಿಪಡಿಸುತ್ತಿದೆ.