Advertisement
ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಬಿಜೆಪಿಯ ಹಿಸಾರ್ ಲೋಕಸಭೆ ಅಭ್ಯರ್ಥಿ ರಂಜಿತ್ ಸಿಂಗ್ ರಾಜೀನಾಮೆ ನೀಡಿದ ಬಳಿಕ 90 ಸದಸ್ಯರ ಸದನ ಪ್ರಸ್ತುತ 88 ಸದಸ್ಯರ ಬಲವನ್ನು ಹೊಂದಿದೆ. ಸದನದಲ್ಲಿ ಕೇವಲ 43 ಶಾಸಕರ ಬಲ ಹೊಂದಿರುವ ಕಾರಣ ಬಿಜೆಪಿ ಸರಕಾರ ಸಂಕಷ್ಟಕ್ಕೆ ಸಿಲುಕಿದೆ.
Related Articles
ಹರಿಯಾಣ ಸರ್ಕಾರದ ಮಾಧ್ಯಮ ಕಾರ್ಯದರ್ಶಿ ಪರ್ವೀನ್ ಅಟ್ರೆ ಪ್ರತಿಕ್ರಿಯಿಸಿ, ನಯಾಬ್ ಸಿಂಗ್ ಸೈನಿ ಅವರ ಸರ್ಕಾರಕ್ಕೆ 47 ಶಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ. ಮಾರ್ಚ್‌ನಲ್ಲಿ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ದುಷ್ಯಂತ್ ಚೌಟಾಲಾ ನೇತೃತ್ವದ ಜನನಾಯಕ್ ಜನತಾ ಪಾರ್ಟಿಯ ನಾಲ್ವರು ಶಾಸಕರ ಹೆಸರನ್ನು ಸಹ ಪಟ್ಟಿ ಮಾಡಿದ್ದಾರೆ.
Advertisement
ಬಿಜೆಪಿಯ 40 ಶಾಸಕರಿದ್ದು, ಹರಿಯಾಣದ ಲೋಕಿತ್ ಪಕ್ಷದ ಗೋಪಾಲ್ ಕಾಂಡ, ಇಬ್ಬರು ಪಕ್ಷೇತರರು ಮತ್ತು ನಾಲ್ವರು ಜೆಜೆಪಿ ಶಾಸಕರ ಬೆಂಬಲವಿದೆ ಎಂದು ಅಟ್ರೆ ಹೇಳಿದ್ದಾರೆ.
ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಈ ವರ್ಷದ ಫೆಬ್ರವರಿ 23 ರಂದು ಸೈನಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತಂದಿದ್ದು ಆ ದಿನಾಂಕದಿಂದ ಆರು ತಿಂಗಳ ನಂತರ ಯಾವುದೇ ಹೊಸ ನಿರ್ಣಯವನ್ನು ತರಲು ಸಾಧ್ಯವಿಲ್ಲ ಎಂದು ಅಟ್ರೆ ಹೇಳಿದ್ದಾರೆ.