ನವದೆಹಲಿ: ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹರ್ಯಾಣ ಸರ್ಕಾರ ಜೂನ್ 21ರವರೆಗೆ ಕೋವಿಡ್ ಲಾಕ್ ಡೌನ್ ಅನ್ನು ಕೆಲವು ನಿರ್ಬಂಧಗಳ ಸಡಿಲಿಕೆ ಮೂಲಕ ವಿಸ್ತರಿಸಲು ನಿರ್ಧರಿಸಿರುವುದಾಗಿ ತಿಳಿಸಿದೆ. ರಾಜ್ಯದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಇಳಿಮುಖವಾಗುತ್ತಿದ್ದು, ಈ ನಿಟ್ಟಿನಲ್ಲಿ ನಿರ್ಬಂಧ ಸಡಿಲಿಕೆ ಬಗ್ಗೆ ಘೋಷಿಸಿರುವುದಾಗಿ ವಿವರಿಸಿದೆ.
ಇದನ್ನೂ ಓದಿ:ನಿಯಮ ಸಡಿಲಾವಾಗುತ್ತಿದ್ದಂತೆ ಪ್ರವಾಸಿಗರ ದೌಡು: ಶಿಮ್ಲಾದಲ್ಲಿ ಭಾರೀ ಟ್ರಾಫಿಕ್ ಜಾಮ್!
ರಾಜ್ಯದಲ್ಲಿ ಈಗ ಕೋವಿಡ್ ಪಾಸಿಟಿವಿಟಿ ದರ ಮತ್ತು ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ವರದಿಯಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ “ಮಹಾಮಾರಿ ಅಲರ್ಟ್ ಸುರಕ್ಷಿತ್ ಹರ್ಯಾಣ” ಕಾಯ್ದೆಯಡಿ ಮತ್ತೆ ಒಂದು ವಾರಗಳ ಕಾಲ (ಜೂನ್ 14-ಜೂ.21) ಲಾಕ್ ಅನ್ನು ರಾಜ್ಯದಲ್ಲಿ ವಿಸ್ತರಿಸಲಾಗಿದೆ ಎಂದು ಹರ್ಯಾಣ ಮುಖ್ಯ ಕಾರ್ಯದರ್ಶಿ ವಿಜಯ್ ವರ್ಧನ್ ಬಿಡುಗಡೆಗೊಳಿಸಿರುವ ಆದೇಶದಲ್ಲಿ ತಿಳಿಸಿದೆ.
ನೂತನ ಮಾರ್ಗಸೂಚಿ ಬಿಡುಗಡೆ:
*ಎಲ್ಲಾ ಅಂಗಡಿಗಳು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ತೆರೆಯಲು ಅನುಮತಿ
*ಮಾಲ್ಸ್ ಗಳು ಬೆಳಗ್ಗೆ 10ರಿಂದ 8ಗಂಟೆವರೆಗೆ ತೆರೆಯಲು ಅನುಮತಿ
*ರೆಸ್ಟೋರೆಂಟ್ಸ್ ಮತ್ತು ಬಾರ್ ಗಳು ಶೇ.50ರಷ್ಟು ಆಸನದ ಸಾಮರ್ಥ್ಯದೊಂದಿಗೆ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ.
*ರಾತ್ರಿ 10ಗಂಟೆವರೆಗೆ ಫಾಸ್ಟ್ ಫುಡ್, ರೆಸ್ಟೋರೆಂಟ್ಸ್, ಹೋಟೆಲ್ ಗಳಿಗೆ ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ.