Advertisement

Haryana Election: ಆಪ್‌ಗೆ 5 ಕ್ಷೇತ್ರ ಕೊಡಲು ಕಾಂಗ್ರೆಸ್‌ ಒಪ್ಪಿಗೆ?

01:33 AM Sep 09, 2024 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳ 5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಮತ್ತು ಆಪ್‌ ನಡುವಣ ಸೀಟು ಹಂಚಿಕೆ ಅಂತಿಮವಾಗಿದ್ದು, ಆಪ್‌ ಐದು ಕ್ಷೇತ್ರಗಳಲ್ಲಿ ಸ್ಫರ್ಧಿಸಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಕಾಂಗ್ರೆಸ್‌ ನಾಯಕ ದೀಪಕ್‌ ಬಾಬರಿಯಾ ಮತ್ತು ಆಪ್‌ ನಾಯಕ ರಾಘವ್‌ ಛಡ್ಡಾ ನಡುವಿನ ಮೈತ್ರಿ ಮಾತುಕತೆ ಸಕರಾತ್ಮಕವಾಗಿ ಸಾಗಿದೆ ಎಂದು ಹೇಳಿದ್ದಾರೆ. ಸೋಮವಾರ ಈ ಬಗ್ಗೆ 2 ಪಕ್ಷಗಳ ನಾಯಕರು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೂ ಮುನ್ನ ಆಪ್‌ ಸಂಸದ ರಾಘವ್‌ ಛಡ್ಡಾ ಮಾತನಾಡಿ ಕಾಂಗ್ರೆಸ್‌ ಮತ್ತು ಆಪ್‌ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ. 2 ಪಕ್ಷಗಳ ನಡುವೆ ಸಹಮತ ಮೂಡದಿದ್ದಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದೂ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next