Advertisement

Haryana ಚುನಾವಣೆ: 89 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಣಕ್ಕೆ, ಸಿಪಿಎಂಗೆ 1 ಸ್ಥಾನ

01:53 AM Sep 13, 2024 | Team Udayavani |

ಹೊಸದಿಲ್ಲಿ: ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಗುರುವಾರ ಮತ್ತೆ 8 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ಸಿಪಿಎಂಗೆ 1 ಸ್ಥಾನವನ್ನು ಬಿಟ್ಟುಕೊಟ್ಟಿದೆ. ಈ ಮೂಲಕ 90 ಕ್ಷೇತ್ರಗಳ ಪೈಕಿ 89ರಲ್ಲಿ ಕಾಂಗ್ರೆಸ್‌ ಸ್ಪರ್ಧಿಸುತ್ತಿದ್ದು, ಭಿವಾನಿ ಕ್ಷೇತ್ರದಲ್ಲಿ ಸಿಪಿಎಂ ಕಣಕ್ಕಿಳಿಯಲಿದೆ.

Advertisement

ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೇ ದಿನವಾದ್ದರಿಂದ ಕಾಂಗ್ರೆಸ್‌ 4, 5 ಮತ್ತು 6ನೇ ಪಟ್ಟಿಯನ್ನು ತರಾತುರಿಯಲ್ಲಿ ಬಿಡುಗಡೆ ಮಾಡಿತು. ರಣದೀಪ್‌ ಸುಜೇìವಾಲ ಪುತ್ರ ಆದಿತ್ಯ ಕೈಥಾಲ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ ಸೇರಿದ ಪತ್ರಕರ್ತ ಸರ್ವಮಿತ್ರ ಕಾಂಬೋಜ್‌ ಸಿಶಾì ಜಿಲ್ಲೆಯ ರಾನಿಯಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಇದೇ ವೇಳೆ, ಆಪ್‌ ಗುರುವಾರ 19 ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಹಿಂದೆಯೇ 70 ಅಭ್ಯರ್ಥಿಗಳನ್ನು ಆಪ್‌ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next