ಹರಿಯಾಣ: ಬಹುತೇಕರು ಕಾರು ಕೊಂಡುಕೊಳ್ಳುವ ಕನಸನ್ನು ಇಟ್ಟುಕೊಂಡಿರುತ್ತಾರೆ. ದೊಡ್ಡ ಕಾರಿನ ಕನಸನ್ನು ಕಂಡರೂ ಗರಿಷ್ಠ 4 ಮಂದಿ ಕುಳಿತುಕೊಳ್ಳುವ ಪುಟ್ಟ ಕಾರಾದರೂ ಇದ್ದರೆ ಸಾಕಿತ್ತಪ್ಪ ಎನ್ನುವ ಕಾಲ ಇದು. ಆದರೆ ಹರಿಯಾಣದಲ್ಲಿ ಒಬ್ಬ ತನಗೆ ಹೆತ್ತವರು ಉಡುಗೊರೆ ನೀಡಿದ ಬಿಎಂಡಬ್ಲ್ಯು ಕಾರನ್ನು ನದಿಗೆ ದೂಡಿದ ವಿಚಿತ್ರ ಪ್ರಸಂಗ ನಡೆದಿದೆ.
ಆಗಿದ್ದೇನು?
ಹರಿಯಾಣ ರಾಜ್ಯದ ಯಮುನಾನಗರದ ಬಾಲಕನಿಗೆ ಕಾರಿನ ಮೇಲಿದ್ದ ವಿಪರೀತ ಮೋಹ ಹುಚ್ಚಾಗಿ ಬದಲಾದ ಕಾರಣ ಇಂತಹ ಘಟನೆಗೆ ಸಾಕ್ಷಿಯಾಗಿದ್ದಾನೆ. ಬಾಲ್ಯದಿಂದಲೇ ವಾಹನಗಳ ಕುರಿತು ಹೆಚ್ಚು ಆಕರ್ಷಿತನಾಗಿದ್ದ ಯುವಕ ತನ್ನ ಮನೆಯಲ್ಲಿ ನನಗೆ ದುಬಾರಿ ಜಾಗ್ವಾರ್ ಕಾರನ್ನೇ ಕೊಡಿಸಬೇಕೆಂದು ಹಠ ಹಿಡಿದ್ದಾನೆ. ಆದರೆ ಮನೆಯವರು ಜಾಗ್ವಾರ್ ಕೊಂಡುಕೊಳ್ಳಲು ಸದ್ಯದ ಪರಿಸ್ಥಿತಿಗೆ ಸ್ವಲ್ಪ ಕಷ್ಟ ಎಂದು ಅದೇ ಸಾಲಿನ ಮತ್ತೂಂದು ದುಬಾರಿ ಕಾರು ಬಿಎಂಡಬ್ಲ್ಯು5ನೇ ಆವೃತ್ತಿಯ ಕಾರನ್ನು ಖರೀದಿಸಿ ಮಗನ ಆಸೆಯನ್ನು ಪೂರೈಸಿದ್ದರು.
35 ಲಕ್ಷದ ದುಬಾರಿ ಕಾರು
ಆದರೆ ಬಿಎಂಡಬ್ಲ್ಯುಯು ತನ್ನ ಅಂಗಳದಲ್ಲಿ ಇದ್ದರೂ ಆತ ಅದನ್ನು ಇಷ್ಟ ಪಡುತ್ತಿರಲಿಲ್ಲ. ಜಾಗ್ವಾರ್ ಕೇಳಿ ಬಿಎಂಡಬ್ಯು ಕೊಡಿಸಿದ ತನ್ನ ಹೆತ್ತವರ ಮೇಲೆ ಕುಪಿತಗೊಂಡ ಬಾಲಕ ಕಾರನ್ನು ತಾನೇ ಸ್ವತಃ ಚಾಲನೆ ಮಾಡಿ ನದಿಗೆ ಇಳಿಸಿದ್ದಾನೆ. ಬಳಿಕ ಕಾರಿನಿಂದ ಜಿಗಿದಿದ್ದಾನೆ. ನೀರಿಗೇನು ಗೊತ್ತು ದುಬಾರಿ ಕಾರಿನ ಮೌಲ್ಯ, ನೀರು ತನ್ನ ಪ್ರವಾಹಕ್ಕೆ ಕಾರನ್ನು ಕೊಚ್ಚಿಕೊಂಡು ಮೀಟರ್ ದೂರಕ್ಕೆ ಹೋಗಿದೆ. ಈ ಐ ಎಂಡ್ ಬಿಎಂಡಬ್ಲ್ಯು ಕಾರಿನ ಮೌಲ್ಯ 35ಲಕ್ಷಕ್ಕಿಂತ ಕಡಿಮೆ ಏನಿಲ್ಲ.
ಹೆತ್ತವರು ಕೊಡಿಸಿದ ಬಿಎಂಡಬ್ಲ್ಯುಕಾರು ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವುದನ್ನು ನೋಡುತ್ತಿದ್ದ ಬಾಲ ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಇದನ್ನು ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Related Articles
ಟ್ವೀಟ್ ಕೋಟ್