Advertisement
ಈ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಹೊರತುಪಡಿಸಿದರೆ, 18 ರಾಜ್ಯಗಳ 51 ಅಸೆಂಬ್ಲಿ ಕ್ಷೇತ್ರಗಳು ಹಾಗೂ ಎರಡು ಲೋಕಸಭಾ ಕ್ಷೇತ್ರಗಳಿಗೂ(ಮಹಾರಾಷ್ಟ್ರದ ಸತಾರಾ ಮತ್ತು ಬಿಹಾರದ ಸಮಸ್ಟಿಪುರ) ಸೋಮವಾರವೇ ಮತದಾನ ನಡೆಯಲಿದೆ. ಗುರುವಾರ ಫಲಿತಾಂಶ ಪ್ರಕಟವಾಗಲಿದೆ.
Related Articles
Advertisement
ಬಿಜೆಪಿಯು ಮೂವರು ಕ್ರೀಡಾಳುಗಳು ಅಂದರೆ ಬಬಿತಾ ಫೋಗಟ್, ಯೋಗೇಶ್ವರ್ ದತ್ ಹಾಗೂ ಸಂದೀಪ್ ಸಿಂಗ್‌ರನ್ನು ಕಣಕ್ಕಿಳಿಸಿದೆ. ಇಲ್ಲಿ ಪ್ರಧಾನಿ ಮೋದಿ ಒಟ್ಟು 7 ರ್ಯಾಲಿಗಳನ್ನು ನಡೆಸಿದ್ದು, ರಾಹುಲ್ ಗಾಂಧಿ 2 ರ್ಯಾಲಿಗಳಿಗೆ ಪ್ರಚಾರ ಸೀಮಿತಗೊಳಿಸಿದ್ದಾರೆ.
ಉಚಿತ ಪ್ರಯಾಣ: ಸೋಮವಾರದ ಮತದಾನದ ವೇಳೆ ದಿವ್ಯಾಂಗ ಮತದಾರರನ್ನು ಉಚಿತವಾಗಿ ಮತಗಟ್ಟೆಗೆ ಕರೆದೊಯ್ಯುವುದಾಗಿ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಆಟೋರಿಕ್ಷಾ ಚಾಲಕರು ಘೋಷಿಸಿದ್ದಾರೆ. ಸುಮಾರು 100ರಷ್ಟು ಚಾಲಕರು ತಮ್ಮ ಆಟೋಗಳ ಹಿಂದೆ ಪೋಸ್ಟರ್‌ಗಳನ್ನು ಅಂಟಿಸಿದ್ದು, ಅದರಲ್ಲಿ ತಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನೂ ಬರೆದಿದ್ದಾರೆ. ಅಗತ್ಯವಿರುವವರು ಈ ಸಂಖ್ಯೆಗೆ ಕರೆ ಮಾಡಿದರೆ, ಉಚಿತವಾಗಿ ಮತಗಟ್ಟೆಗೆ ಕರೆದೊಯ್ಯುವುದಾಗಿ ಹೇಳಿದ್ದಾರೆ.
ಮಿತ್ರಪಕ್ಷವನ್ನೇ ತಿವಿದ ಶಿವಸೇನೆ: ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಕೈಜೋಡಿಸಿರುವ ಶಿವಸೇನೆ, ಮಿತ್ರಪಕ್ಷವನ್ನೇ ತಿವಿಯುವುದನ್ನು ಮುಂದುವರಿಸಿದೆ. ಸವಾಲೆಸೆಯಲು ಪ್ರತಿಸ್ಪರ್ಧಿಗಳೇ ಇಲ್ಲ ಎಂಬ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿಕೆಗೆ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಕಾಲೆಳೆದಿರುವ ಶಿವಸೇನೆ, “ಪ್ರತಿಸ್ಪರ್ಧಿಗಳೇ ಇಲ್ಲ ಎಂದಾದ ಮೇಲೆ ರಾಜ್ಯದಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವದ ಅಷ್ಟೊಂದು ನಾಯಕರು ಇಲ್ಲಿಗೆ ಬಂದು ರ್ಯಾಲಿಗಳನ್ನು ನಡೆಸಿದ್ದಾದರೂ ಏಕೆ’ ಎಂದು ಪ್ರಶ್ನಿಸಿದೆ.
ಧನಂಜಯ್ ಮುಂಡೆ ವಿರುದ್ಧ ಎಫ್ಐಆರ್ಮಹಾರಾಷ್ಟ್ರದ ಸಚಿವೆ ಹಾಗೂ ತಮ್ಮ ಸಂಬಂಧಿ ಪಂಕಜಾ ಮುಂಡೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಎನ್‌ಸಿಪಿ ನಾಯಕ ಧನಂಜಯ್ ಮುಂಡೆ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಚುನಾವಣಾ ರ್ಯಾಲಿಯೊಂದರಲ್ಲಿ ಪಂಕಜಾ ವಿರುದ್ಧ ಧನಂಜಯ್ ಅವರು ಕೆಟ್ಟದಾಗಿ ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಮಹಾರಾಷ್ಟ್ರ
ಒಟ್ಟು ಸೀಟು- 288
ಮತದಾರರ ಸಂಖ್ಯೆ- 8.98 ಕೋಟಿ
ಅಭ್ಯರ್ಥಿಗಳು – 3,237
ಮತಗಟ್ಟೆಗಳ ಸಂಖ್ಯೆ- 96,661 ಹರ್ಯಾಣ
ಒಟ್ಟು ಸೀಟು- 90
ಮತದಾರರ ಸಂಖ್ಯೆ- 1.83 ಕೋಟಿ
ಅಭ್ಯರ್ಥಿಗಳು – 1,169
ಮತಗಟ್ಟೆಗಳ ಸಂಖ್ಯೆ- 19,578