Advertisement

ಬರ ತಡೆಗೆ ಮಳೆ ಕೊಯ್ಲು ಪರಿಹಾರ

03:49 PM Mar 04, 2017 | Team Udayavani |

ಕಲಬುರಗಿ: ಇವತ್ತು ಬರಗಾಲ ಎಲ್ಲ ಕ್ಷೇತ್ರವನ್ನು ಕಾಡುವಂತಹ ಸಮಸ್ಯೆ. ಇದನ್ನು ತಡೆಯುವಲ್ಲಿ ಮಳೆ ಕೊಯ್ಲು ತುಂಬಾ ಪರಿಹಾರಾತ್ಮಕವಾಗಲಿದೆ. ಆದ್ದರಿಂದ ರೈತರಿಗೆ ಇದನ್ನು ಪರಿಣಾಮಕಾರಿಯಾಗಿ ತಿಳಿಸಿಕೊಡುವ ಅಗತ್ಯವಿದೆ ಎಂದು ರಾಷ್ಟ್ರೀಯ ಚಿಂತಕ ಕೆ.ಎನ್‌. ಗೋವಿಂದಾಚಾರ್ಯ ಹೇಳಿದರು. 

Advertisement

ಶುಕ್ರವಾರ ನಗರದ ಜ್ಞಾನ ಸಿಂಚನ ಕಾಲೇಜು ಆವರಣದಲ್ಲಿ ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ವಿಕಾಸ ಅಕಾಡೆಮಿ ಹಮ್ಮಿಕೊಂಡ ಗ್ರಾಮೀಣ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪದೇ ಪದೇ ಬರದಿಂದಾಗಿ ನೀರಿನ ಹಾಹಾಕಾರ ಉಂಟಾಗುತ್ತಿದೆ.

ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಮಳೆಯ ನೀರು ಪೋಲಾಗದಂತೆ ತಡೆಯಬೇಕು. ಮಳೆ ಕೊಯ್ಲು ಅಳವಡಿಸುವ ಮೂಲಕ ಮಳೆ ನೀರು ಮರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳನ್ನು ಪುನಶ್ಚೇತನಗೊಳಿಸಬೇಕು. ಹೂಳು ಎತ್ತುವುದು ಹಾಗೂ ಕೆರೆಗಳನ್ನು ತುಂಬಿಸುವ ಕಾರ್ಯಗಳು ಆಗಬೇಕು ಎಂದು ಹೇಳಿದರು. 

ಮಾನವ ಪ್ರಕೃತಿಯೊಂದಿಗೆ ವಿಜಯ ಸಾಧಿಧಿ ಸಲು ಹೊರಟರೆ ಅದರಿಂದ ಎಲ್ಲ ಜೀವ ಕುಲಕ್ಕೂ ಮಾರಕವಾಗುತ್ತದೆ. ಆದ್ದರಿಂದ ಪ್ರಕೃತಿಯೊಂದಿಗೆ ಹೊಂದಿಕೊಂಡು ಜೀವನ ನಡೆಸಬೇಕು. ಪ್ರಕೃತಿ ಆರಾಧಿಧಿಸುವ, ಗೌರವಿಸುವ, ರಕ್ಷಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು. 

ಕೃಷಿ ಪ್ರಧಾನವಾದ ದೇಶದಲ್ಲಿ ಗ್ರಾಮೀಣಾಭಿವೃದ್ಧಿಗೆ ವ್ಯಸನಮುಕ್ತ ಶ್ರಮ ಸಂಸ್ಕೃತಿ ಬೆಳೆಸುವುದು ಅತ್ಯಂತ ಅಗತ್ಯವಾಗಿದೆ. ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿಯಾಗುತ್ತದೆ. ಭಾರತ ಕೃಷಿ ಪ್ರಧಾನವಾಗಿದೆ. ಆದ್ದರಿಂದ ಗೋ ಆಧಾರಿತ ಸಾವಯವ ಸಮಗ್ರ ಕೃಷಿಗೆ ಹೆಚ್ಚಿನ ಒತ್ತು ನೀಡಿ ಜಲ ಸಂಪನ್ಮೂಲ ರಕ್ಷಿಸಬೇಕು ಎಂದು ಹೇಳಿದರು. 

Advertisement

ಮುಖ್ಯ ಅತಿಥಿಯಾಗಿದ್ದ ರಾಜ್ಯಸಭಾ ಸದಸ್ಯ ಮತ್ತು ವಿಕಾಸ ಅಕಾಡೆಮಿ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ ಮಾತನಾಡಿ, 2025ರ ವೇಳೆಗೆ ಇಡೀ ದೇಶ ಕಲ್ಯಾಣ ಕರ್ನಾಟಕವನ್ನು ನೋಡುವ ಹಾಗೆ ಅಭಿವೃದ್ಧಿ ಕಾರ್ಯಗಳು ಆಗಬೇಕು. ಗ್ರಾಮೀಣಾಭಿವೃದ್ಧಿಯಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು. 

ಸ್ವಾವಲಂಬಿ, ಸ್ವಾಭಿಮಾನದ ಮೂಲಕ ಜೀವನ ನಡೆಸುವಂತಾಗಬೇಕು ಎಂದು ಹೇಳಿದರು. ವಿಕಾಸ ಅಕಾಡೆಮಿ ವಿಶ್ವಸ್ಥ ಹಣಮಂತರಾವ ಗುಡ್ಡಾ ಹಾಜರಿದ್ದರು. ನಿಖೀತಾ ಪ್ರಾರ್ಥನಾಗೀತೆ ಹಾಡಿದರು. ವಿ. ಶಾಂತರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಣ್ಣ ಇಜೇರಿ ನಿರೂಪಿಸಿದರು. ಭಗವಂತರಾವ್‌ ಪಾಟೀಲ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next